Dream Catcher: ಮನೆಯ ಈ ಸ್ಥಳದಲ್ಲಿ ಡ್ರೀಮ್ ಕ್ಯಾಚರ್ ಹಾಕಿ, ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತೆ
Where To Hang Dream Catcher: ಫೆಂಗ್ ಶೂಯಿ ನಿಯಮದ ಪ್ರಕಾರ ಡ್ರೀಮ್ ಕ್ಯಾಚರ್ಗೆ ಬಹಳ ಪ್ರಮುಖ ಸ್ಥಾನವಿದೆ. ಈ ಡ್ರೀಮ್ ಕ್ಯಾಚರ್ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಿಸುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಇದನ್ನು ಇಷ್ಟಬಂದ ಕಡೆ ಹಾಕಬಾರದು, ಸರಿಯಾದ ಸ್ಥಳದಲ್ಲಿ ಹಾಕಿದರೆ ಮಾತ್ರ ಒಳ್ಳೆಯದಾಗುತ್ತದೆ. ಹಾಗಾದ್ರೆ ಈ ಡ್ರೀಮ್ ಕ್ಯಾಚರ್ ಹಾಕಲು ಸರಿಯಾದ ಸ್ಥಳ ಯಾವುದು ಎಂಬುದು ಇಲ್ಲಿದೆ.
ನೀವು ಮಲಗುವ ಕೋಣೆಯ ಕಿಟಕಿಯಲ್ಲಿ ಈ ಡ್ರೀಮ್ ಕ್ಯಾಚರ್ ಹಾಕಿ. ಇದು ನಿಮ್ಮ ನಿದ್ರೆಯ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ಕೆಟ್ಟ ಕನಸು ಬೀಳದಂತೆ ಸಹಾಯ ಮಾಡುತ್ತದೆ. ಅಲ್ಲದೇ, ನಿಮ್ಮ ರೂಂ ಕಿಟಕಿಯಲ್ಲಿ ಹಾಕುವುದು ಯಾವುದೇ ಅಡ್ಡ ಪರಿಣಾಮವನ್ನು ಸಹ ಉಂಟು ಮಾಡುವುದಿಲ್ಲ.
2/ 8
ನಿಮ್ಮ ಕಾರಿನ ಹಿಂದಿನ ಕನ್ನಡಿಯ ಬಳಿ ಸಹ ನೀವು ಡ್ರೀಮ್ ಕ್ಯಾಚರ್ ಹಾಕಬಹುದು. ಇದು ವಾಹನದ ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಎನ್ನಲಾಗುತ್ತದೆ. ಆದರೆ ಸಣ್ಣ ಡ್ರೀಮ್ ಕ್ಯಾಚರ್ ಹಾಕಿ, ದೊಡ್ಡದು ಇದ್ದರೆ ಹಿಂದಿನ ವಾಹನಗಳು ಕಾಣುವುದಿಲ್ಲ.
3/ 8
ಗೋಡೆಯ ಮೇಲೆ ಸಹ ನೀವು ಫೋಟೋದ ರೀತಿ ಡ್ರೀಮ್ ಕ್ಯಾಚರ್ ಹಾಕಬಹುದು. ಆದರೆ ಗೋಡೆಯ ಮೇಲೆ ಯಾವುದೇ ಬೇರೆ ಚಿತ್ರಗಳು ಇರಬಾರದು, ಜಾಸ್ತಿ ಜಾಗ ಇದ್ದಲ್ಲಿ ಮಾತ್ರ ಈ ಡ್ರೀಮ್ ಕ್ಯಾಚರ್ ಹಾಕಿ.
4/ 8
ನಿಮ್ಮ ಬೆಡ್ ರೂಂ ಕಿಟಕಿಯ ಮೇಲೆ ಮಾತ್ರವಲ್ಲದೇ ನಿಮ್ಮ ಮಂಚದ ಹಲಗೆಯ ಮೇಲೆ ಸಹ ಹಾಕಬಹುದು. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಂಚಗಳಲ್ಲಿ ತಲೆಯ ಬಳಿ ಸಹ ದೊಡ್ಡ ಹಲಗೆ ಇರುತ್ತದೆ, ಅದರ ಬಳಿ ಡ್ರೀಮ್ ಕ್ಯಾಚರ್ ನೇತು ಹಾಕುವುದು ಮಾನಸಿಕ ಆರೋಗ್ಯಕ್ಕೆ ಉತ್ತಮ.
5/ 8
ಈ ಡ್ರೀಮ್ ಕ್ಯಾಚರ್ ಅನ್ನು ನೀವು ಕೇವಲ ಮನೆಯಲ್ಲಿ ಮಾತ್ರ ಹಾಕಬೇಕೆಂದಿಲ್ಲ ನಿಮ್ಮ ಪರ್ಸ್ ಅಥವಾ ಬ್ಯಾಗ್ನಲ್ಲಿ ಸಹ ಇಟ್ಟುಕೊಳ್ಳಬಹುದು. ನೀವು ಬ್ಯಾಗ್ ಹೊರಗಡೆ ಇದನ್ನು ನೇತು ಹಾಕಬಹುದು. ಇದರಿಂದ ಬ್ಯಾಗ್ನ ಅಂದ ಹೆಚ್ಚಾಗುವುದು ಮಾತ್ರವಲ್ಲದೇ ಆರ್ಥಿಕ ಸಮಸ್ಯೆ ಬರದಂತೆ ತಡೆಯುತ್ತದೆ.
6/ 8
ಮನೆಯ ಮೊದಲ ಬಾಗಿಲಿನಲ್ಲಿ ಸಹ ಡ್ರೀಮ್ ಕ್ಯಾಚರ್ ಹಾಕಬಹುದು, ಇದು ಮನೆಯ ಒಳಗೆ ನೆಗೆಟಿವ್ ಎನರ್ಜಿ ಬರದಂತೆ ತಡೆಯುತ್ತದೆ. ಆದರೆ ಬಾಗಿಲಲ್ಲಿ ಬೇರೆ ಯಾವುದೇ ಫೋಟೋ ಇರಬಾರದು. ಕೇವಲ ಡ್ರೀಮ್ ಕ್ಯಾಚರ್ ಮಾತ್ರ ಹಾಕಬೇಕು.
7/ 8
ನಿಮ್ಮ ಮನೆಯಲ್ಲಿ ಮಳಿಗೆ ಇದ್ದರೆ ಅಲ್ಲಿ ಸಹ ನೀವು ಡ್ರೀಮ್ ಕ್ಯಾಚರ್ ನೇತು ಹಾಕಬಹುದು. ಇದು ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಿಸುತ್ತದೆ ಹಾಗೂ ಮನೆಯ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
8/ 8
ಸೂರ್ಯ ಬೆಳಕು ಬರುವ ಕಿಟಕಿಯಲ್ಲಿ ಸಹ ನೀವು ಡ್ರೀಮ್ ಕ್ಯಾಚರ್ ಹಾಕಬಹುದು. ಅಲ್ಲದೇ ನಿಮಗೆ ಆಶ್ಚರ್ಯವಾಗಬಹುದು ಇದನ್ನು ನೀವು ನಿಮ್ಮ ಕಿವಿ ಓಲೆಯಾಗಿ ಸಹ ಬಳಸಬಹುದು. ಹೌದು, ಸಣ್ಣ ಕಿವಿ ಓಲೆ ರೀತಿಯ ಡ್ರೀಮ್ ಕ್ಯಾಚರ್ ಸಹ ಸಿಗುತ್ತದೆ.