Bengaluru Karaga: ಕರುನಾಡಿನ ಐತಿಹಾಸಿಕ ಆಚರಣೆ ಕರಗದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

Bengaluru Karaga: ಬೆಂಗಳೂರಿನಲ್ಲಿ ನಡೆಯುವ ಕರಗ ಬಹಳ ಪ್ರಸಿದ್ಧ. ಈಗಾಗಲೇ ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಜಾತ್ರೆ ಆರಂಭವಾಗಿದ್ದು, ಈ ಕಾರ್ಯಕ್ರಮದ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.

First published:

  • 18

    Bengaluru Karaga: ಕರುನಾಡಿನ ಐತಿಹಾಸಿಕ ಆಚರಣೆ ಕರಗದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

    ಈ ಕರಗ ಉತ್ಸವ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಇದನ್ನು ಆದಿ ಶಕ್ತಿ ಸ್ವರೂಪಿಣಿಯಾದ ದ್ರೌಪದಿಯ ಆರಾಧನೆಗಾಗಿ ಮೀಸಲಿಡಲಾಗಿದೆ. ಇನ್ನು ಈ ಕರಗವನ್ನು ಬೆಂಗಳೂರಿನ ಗ್ರಾಮ ಉತ್ಸವ ಎಂದು ಸಹ ಕರೆಯಲಾಗುತ್ತದೆ.

    MORE
    GALLERIES

  • 28

    Bengaluru Karaga: ಕರುನಾಡಿನ ಐತಿಹಾಸಿಕ ಆಚರಣೆ ಕರಗದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

    ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಜನರ ಏಕತೆಯನ್ನು ಪ್ರದರ್ಶಿಸಲು 'ಬೆಂಗಳೂರು ಕರಗ'ವನ್ನು ಸಹ ಆಚರಿಸಲಾಗುತ್ತದೆ.  ಚೈತ್ರ ಶುದ್ಧ ಸಪ್ತಮಿಯ ದಿನದಿಂದ ಈ ಉತ್ಸವವನ್ನು ಆರಂಭಿಸಲಾಗುತ್ತದೆ.

    MORE
    GALLERIES

  • 38

    Bengaluru Karaga: ಕರುನಾಡಿನ ಐತಿಹಾಸಿಕ ಆಚರಣೆ ಕರಗದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

    ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಲಾಗುತ್ತದೆ. ನಂತರ ಈ ಚೈತ್ರ ನವರಾತ್ರಿಯ ವೇಳೆ ಹೂವಿನ ಕರಗವನ್ನು ಮುಖ ಮುಚ್ಚುವಂತೆ ತಲೆಯ ಮೇಲೆ ಹೊತ್ತ ಪೂಜಾರಿ ನೃತ್ಯ ಮಾಡುತ್ತಾ ದೇವಾಲಯದಿಂದ ಹೊರ ಬರುತ್ತಾರೆ.

    MORE
    GALLERIES

  • 48

    Bengaluru Karaga: ಕರುನಾಡಿನ ಐತಿಹಾಸಿಕ ಆಚರಣೆ ಕರಗದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

    ಬೆಂಗಳೂರಿನ ತಿಗಳರ ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ಹೀಗೆ ಅನೇಕ ದೇವಸ್ಥಾನಗಳಿಂದ ಈ ಕರಗ ವೇಷಧಾರಿಗಳು ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬಂದು ಸೇರುತ್ತಾರೆ.

    MORE
    GALLERIES

  • 58

    Bengaluru Karaga: ಕರುನಾಡಿನ ಐತಿಹಾಸಿಕ ಆಚರಣೆ ಕರಗದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

    ಇನ್ನು ಈ ಕರಗದ ವಿಶೇಷತೆ ಎಂದರೆ ಈ ಕರಗ ವೇಷಧಾರಿಗಳು ಕಾಟನ್‌ಪೇಟೆಯಲ್ಲಿರುವ 18 ನೇ ಶತಮಾನದ ಮುಸ್ಲಿಂ ಮಸ್ತಾನ್‌ ಸಾಬ್‌ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪಾರತಿ ನಂತರ ನಗರ ಪ್ರದಕ್ಷಿಣೆ ಹಾಕುತ್ತಾರೆ.

    MORE
    GALLERIES

  • 68

    Bengaluru Karaga: ಕರುನಾಡಿನ ಐತಿಹಾಸಿಕ ಆಚರಣೆ ಕರಗದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

    ಮಾರ್ಚ್ 29ರಿಂದ ಏಪ್ರಿಲ್ 8ರ ತನಕ ಬೆಂಗಳೂರಿನಲ್ಲಿ ಈ ಅದ್ದೂರಿ ಐತಿಹಾಸಿಕ ಉತ್ಸವ ನಡೆಯಲಿದೆ. ಬೆಂಗಳೂರಿನ ಕರಗ ಉತ್ಸವದಲ್ಲಿ ಮಾರ್ಚ್ 30ರಿಂದ ಏಪ್ರಿಲ್ 3ರವರೆಗೆ ರಾತ್ರಿ 7.30ಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ಜೊತೆಗೆ ಏಪ್ರಿಲ್ 3ರಂದು ಆರತಿ ದೀಪ, ಏಪ್ರಿಲ್ 4ರಂದು ಹಸಿ ಕರಗ ನಡೆಯಲಿದೆ.

    MORE
    GALLERIES

  • 78

    Bengaluru Karaga: ಕರುನಾಡಿನ ಐತಿಹಾಸಿಕ ಆಚರಣೆ ಕರಗದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

    ಇನ್ನುಈ ಕರಗ ಹೊತ್ತವರು ಹಳೇ ಬೆಂಗಳೂರಿನ ಹಲವು ಬೀದಿಗಳನ್ನು ಪ್ರದಕ್ಷಿಣೆ ಹಾಕುತ್ತಾರೆ. ನಂತರ ವಿವಿಧ ದೇವಾಲಯಗಳು ಹಾಗೂ ಕುಲ ಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸುತ್ತಾರೆ.

    MORE
    GALLERIES

  • 88

    Bengaluru Karaga: ಕರುನಾಡಿನ ಐತಿಹಾಸಿಕ ಆಚರಣೆ ಕರಗದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

    ಈ ವರ್ಷ ದ್ರೌಪದಿ ದೇವಿ ಕರಗ ಶಕ್ತ್ಯೋಸ್ತವದಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಏಪ್ರಿಲ್ 8ರಂದು ವಸಂತೋತ್ಸವ ಮತ್ತು ಧ್ವಜಾವರೋಹಣ ಜರುಗಲಿದೆ.

    MORE
    GALLERIES