Lord Shiva: ಶಿವನಿಗೆ ಈ ವಸ್ತುಗಳಿಂದ ಅಭಿಷೇಕ ಮಾಡಿದ್ರೆ ಮೋಕ್ಷ ಸಿಗುತ್ತಂತೆ
Benefits of Shiva Abhishekam: ಒಳ್ಳೆಯ ಮನಸ್ಸಿನಿಂದ ಹಾಗೂ ಭಕ್ತಿಯಿಂದ ನೀರಿನ ಅಭಿಷೇಕ ಮಾಡಿದರೂ ಸಹ ದೇವರು ಪ್ರಸನ್ನನಾಗುತ್ತಾನೆ ಎನ್ನುವ ಮಾತಿದೆ. ಹಾಗೆಯೇ ಶಿವನಿಗೆ ಹೆಚ್ಚು ಅಭಿಷೇಕ ಮಾಡಲಾಗುತ್ತದೆ. ವಿವಿಧ ರೀತಿಯ ವಸ್ತುಗಳಿಂದ ಶಿವನಿಗೆ ಅಭಿಷೇಕ ಮಾಡಿದರೆ ಹೆಚ್ಚಿನ ಲಾಭವಿದೆ ಎನ್ನಲಾಗುತ್ತದೆ. ಅಲ್ಲದೇ ಅಭಿಷೇಕ ಮಾಡುವ ಪ್ರತಿಯೊಂದು ವಸ್ತುವಿಗೂ ಒಂದೊಂದು ಅರ್ಥವಿದೆ. ಯಾವ ವಸ್ತುವಿನಿಂದ ಅಭಿಷೇಕ ಮಾಡಿದರೆ ಲಾಭವಿದೆ ಎಂಬುದು ಇಲ್ಲಿದೆ.
ಅರಿಶಿನದ ಪುಡಿಯಿಂದ ಶಿವನಿಗೆ ಅಭಿಷೇಕ ಮಾಡುವುದರಿಂದ ಸರ್ಕಾರಿ ಕೆಲಸಗಳಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಜಯ ಸಿಗುತ್ತದೆ. ಹಾಗೆಯೇ ಅಕ್ಕಿಹಿಟ್ಟಿನ ಅಭಿಷೇಕ ಮಾಡಿದರೆ ಸಾಲದ ಬಾಧೆಯಿಂದ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ.
2/ 8
ಶ್ರೀಗಂಧದ ಎಣ್ಣೆಯಿಂದ ಅಭಿಷೇಕ: ಶಿವನಿಗೆ ಶ್ರೀಗಂಧದ ಎಣ್ಣೆಯಿಂದ ಅಭಿಷೇಕ ಮಾಡುವುದರಿಂದ ಉದರ ಸಂಬಂಧಿ ಕಾಯಿಲೆಗಳು ಗುಣವಾಗುತ್ತವೆ. ಶಿವನಿಗೆ ಪಂಚಾಮೃತ ಅಭಿಷೇಕ ಮಾಡುವುದರಿಂದ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ.
3/ 8
ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಮೊಸರಿನಿಂದ ಶಿವಾಭಿಷೇಕ ಮಾಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ.
4/ 8
ಸಿಹಿ ಗೆಣಸಿನ ರಸದಿಂದ ಶಿವನಿಗೆ ಅಭಿಷೇಕ ಮಾಡಿದರೆ ಆಯುರಾರೋಗ್ಯ ಸಿದ್ಧಿಸುತ್ತದೆ ಹಾಗೂ ರೋಗಗಳು ಮಾಯವಾಗುತ್ತವೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲದೇ, ನೀವು ಕಬ್ಬಿನ ರಸದಿಂದ ಸಹ ಶಿವನಿಗೆ ಅಭಿಷೇಕ ಮಾಡಬಹುದು. ಈ ಕಬ್ಬಿನ ರಸದಿಂದ ಶಿವನಿಗೆ ಅಭಿಷೇಕ ಮಾಡುವುದರಿಂದ ದೀರ್ಘಾಯುಷ್ಯ ದೊರೆಯುತ್ತದೆ.
5/ 8
ಶತ್ರುಗಳ ಭಯ ಜಾಸ್ತಿ ಇರುವವರು ನಿಂಬೆರಸವನ್ನು ಬಳಸಿ ಶಿವನಿಗೆ ಅಭಿಷೇಕ ಮಾಡಿದರೆ ಶತ್ರುಗಳ ಭಯ ಇರುವುದಿಲ್ಲ. ತೆಂಗಿನಕಾಯಿ ನೀರು ಅಥವಾ ಎಳನೀರಿನಿಂದ ಅಭಿಷೇಕ ಕೆಲಸದಲ್ಲಿ ಉನ್ನತ ಸ್ಥಾನ, ಸಮಾಜದಲ್ಲಿ ಉತ್ತಮ ಸ್ಥಾನಮಾನ, ಗೌರವ, ಕೀರ್ತಿ ಲಭಿಸುತ್ತದೆ.
6/ 8
ನೆಲ್ಲಿಕಾಯಿ ಪುಡಿಯಿಂದ ಶಿವನಿಗೆ ಅಭಿಷೇಕ ಮಾಡಿದರೆ ರೋಗಗಳು ನಿವಾರಣೆಯಾಗುತ್ತದೆ ಹಾಗೂ ಪನ್ನೀರಿನ ಅಭಿಷೇಕ ಮಾಡಿದರೆ ಜೀವನದಲ್ಲಿನ ಸಮಸ್ಯೆಗಳು ಸಹ ಕಡಿಮೆಯಾಗುತ್ತದೆ.
7/ 8
ಅನ್ನಾಭಿಷೇಕವನ್ನು ಸಹ ನೀವು ಶಿವನಿಗೆ ಮಾಡಬಹುದು. ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ ಜೀವನ ನೆಮ್ಮದಿಯಾಗಿರುತ್ತದೆ. ದೇವರಿಗೆ ಜೇನುತುಪ್ಪದ ಅಭಿಷೇಕ ಮಾಡಿದರೆ ಸಹ ಆರ್ಥಿಕವಾಗಿ ಲಾಭವಾಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)