Amavasya: ನಿಮ್ಮ ರಾಶಿಗೆ ಅನುಗುಣವಾಗಿ ಅಮಾವಾಸ್ಯೆಯ ದಿನ ಈ ವಸ್ತುಗಳನ್ನು ದಾನ ಮಾಡಿ
Amavasya Donation: ಅಮಾವಾಸ್ಯೆಗೆ ಸಂಬಂಧಪಟ್ಟಂತೆ ಹಲವಾರು ರೀತಿಯ ನಂಬಿಕೆಗಳಿವೆ. ಕೆಲವೊಂದು ಕೆಲಸಗಳನ್ನು ಈ ದಿನ ಮಾಡಬಾರದು ಎನ್ನಲಾಗುತ್ತದೆ. ಆದರೆ ಅಮಾವಾಸ್ಯೆಯ ದಿನ ನಿಮ್ಮ ರಾಶಿಗೆ ಅನುಗುಣವಾಗಿ ಕೆಲ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದಂತೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ಮೇಷ ರಾಶಿಯವರು ಅಮಾವಾಸ್ಯೆಯ ದಿನ ನೀರು, ಎಳ್ಳು ಹಾಗೂ ಪೇಪರ್ ದಾನ ಮಾಡುವುದರಿಂದ ಕೆಲ ಕೆಟ್ಟ ಶಕ್ತಿಗಳಿಗೆ ಸಂಬಂಧಪಟ್ಟ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ನಿಮ್ಮ ಆಸೆ ಈಡೇರಿಸಲು ಸಹಾಯ ಮಾಡುತ್ತದೆ.
2/ 12
ವೃಷಭ ರಾಶಿಯವರು ಈ ದಿನ ಪಾತ್ರೆ ಹಾಗೂ ಎಳ್ಳಿನ ಜೊತೆ ವಸ್ತ್ರವನ್ನು ಸಹ ದಾನ ಮಾಡುವುದು ಉತ್ತಮ. ಇದರಿಂದ ಬಹಳ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ.
3/ 12
ಮಿಥುನ ರಾಶಿಯವರು ಸಹ ಪ್ರತಿ ಅಮಾವಾಸ್ಯೆಯ ಸಮಯದಲ್ಲಿ ಕಲಶ, ಚಾದರ ಮತ್ತು ಛತ್ರಿಯನ್ನು ಬಡವರಿಗೆ ದಾನ ಮಾಡುವುದು ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
4/ 12
ಕಟಕ ರಾಶಿಯವರು ಬಡವರಿಗೆ, ನಿರ್ಗತಿಕರಿಗೆ ಹಾಗೂ ಆಶ್ರಮಗಳಿಗೆ ನೀರಿನ ಪಾತ್ರೆ, ಸಾಬುದಾನ ಮತ್ತು ಬಟ್ಟೆಯನ್ನು ದಾನ ಮಾಡಬೇಕು. ಸುಮಾರು 3 ತಿಂಗಳು ಈ ರೀತಿ ಮಾಡುವುದರಿಂದ ನಿಮ್ಮ ಯೋಜನೆಗಳು ಪೂರ್ಣವಾಗುತ್ತದೆ.
5/ 12
ಸಿಂಹ ರಾಶಿಯವರು ಈ ದಿನ ಬಡವರಿಗೆ ಆಹಾರವನ್ನು ದಾನ ಮಾಡಬೇಕು. ಮುಖ್ಯವಾಗಿ ನೀರು ಮತ್ತು ಶರಬತ್ತು ದಾನ ಮಾಡುವುದು ಒಳ್ಳೆಯದು ಎನ್ನಲಾಗುತ್ತದೆ. ಇದರಿಂದ ಮನೆಯ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ.
6/ 12
ಕನ್ಯಾ ರಾಶಿಯವರು ದೇವಸ್ಥಾನಕ್ಕೆ ಅಥವಾ ಯಾವುದಾದರೂ ಆಶ್ರಮಕ್ಕೆ ಹಣ್ಣು, ಉದ್ದಿನ ಬೇಳೆ ಹಾಗೂ ಎಣ್ಣೆಯನ್ನು ದಾನ ಮಾಡಬೇಕು. ಇದರಿಂದ ನಿಮ್ಮ ಕೆಲಸದಲ್ಲಿ ಇದ್ದ ಅಡಚಣೆ ದೂರವಾಗುತ್ತದೆ.
7/ 12
ತುಲಾ ರಾಶಿಯವರಿಗೆ ಕುಟುಂಬದ ಸಮಸ್ಯೆಗಳಿದ್ದರೆ ಹತ್ತಿ, ಬಟ್ಟೆ, ಸಾಸಿವೆಯನ್ನು ಬಡವರಿಗೆ ದಾನ ಮಾಡುವುದು ಸಹಾಯ ಮಾಡುತ್ತದೆ. ಅಲ್ಲದೇ ಕೆಲವರಿಗೆ ನೀವು ನೀರಿನ ಪಾತ್ರೆಗಳನ್ನು ಸಹ ದಾನ ಮಾಡಬೇಕು.
8/ 12
ವೃಶ್ಚಿಕ ರಾಶಿಯವರು ಅಮಾವಾಸ್ಯೆಯ ದಿನ ಆಹಾರವನ್ನು ದಾನ ಮಾಡಬೇಕು. ಅದರಲ್ಲೂ ಬೇಳೆಕಾಳುಗಳ ಖಿಚಡಿ ದಾನ ಮಾಡಿದರೆ ಹೆಚ್ಚು ಲಾಭವಿದೆ. ನಿಮಗೆ ಸಾಧ್ಯವಾದರೆ ನೀರಿನ ಮಡಕೆಗಳನ್ನು 5 ರಿಂದ 6 ಜನಕ್ಕೆ ದಾನ ಮಾಡಿ.
9/ 12
ಧನಸ್ಸು ರಾಶಿಯವರು ಒಂದು ಮಡಕೆಯನ್ನು ತೆಗೆದುಕೊಂಡು ಅದಕ್ಕೆ ನೀರು ತುಂಬಿಸಿ. ಆ ಮಡಕೆಯನ್ನು ವಿವಿಧ ರೀತಿಯ ಬೇಳೆ-ಕಾಳುಗಳನ್ನು ಹಾಕಿ ತುಂಬಿಸಿ ಬಡವರಿಗೆ ದಾನ ಮಾಡಿ. ಈ ರೀತಿ ಪ್ರತಿ ಅಮವಾಸ್ಯೆಯಂದು ಮಾಡುವುದು ಒಳ್ಳೆಯದಾಗುತ್ತದೆ.
10/ 12
ಮಕರ ರಾಶಿಯವರು ಸಹ ಪ್ರತಿ ಅಮವಾಸ್ಯೆಯಂದು ನೀರಿನ ಪಾತ್ರೆಯನ್ನು ದಾನ ಮಾಡಬೇಕು. ಅದರಲ್ಲೂ ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಕೊಡಬಹುದು.
11/ 12
ಕುಂಭ ರಾಶಿಯವರು ಈ ದಿನ ಸಾಬೂನು, ಬಟ್ಟೆ, ಬಾಚಣಿಗಳನ್ನು ದಾನ ಮಾಡಬೇಕು. ಅಲ್ಲದೇ ಅಮಾವಾಸ್ಯೆಯ ದಿನ ಬೆಳ್ಳಿ ಪಾತ್ರೆಯಲ್ಲಿ ನೀವು ನೀರನ್ನು ದಾನ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
12/ 12
ಮೀನ ರಾಶಿಯವರು ಸಹ ಅಮಾವಾಸ್ಯೆಯ ದಿನ ಹಿತ್ತಳೆ ಪಾತ್ರೆಯಲ್ಲಿ ನೀರನ್ನು ದಾನ ಮಾಡುವುದು ಅನೇಕ ರೀತಿ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೇ, ಹತ್ತಿ ಬಟ್ಟೆ ಹಾಗೂ ಹಾಳೆಯನ್ನು ಸಹ ದಾನ ಮಾಡಬೇಕು.