Vastu Tips: ಈ ಫೋಟೋ ಮನೆಯಲ್ಲಿ ಇದ್ರೆ 7 ಜನ್ಮದ ಪಾಪ ಪರಿಹಾರವಾಗುತ್ತಂತೆ
Seven Horse Painting: ನಾವು ಮನೆಗಳ ಗೋಡೆಯ ಮೇಲೆ ನಮ್ಮ ಫೋಟೋ ಅಥವಾ ಫ್ಯಾಮಿಲಿ ಫೋಟೋ ಹಾಕುತ್ತೇವೆ. ಹಾಗೆಯೇ ಕೆಲವೊಮ್ಮೆ ಕೆಲವೊಂದು ಪ್ರಾಣಿಗಳು, ಹೂವು ಹೀಗೆ ವಿಭಿನ್ನವಾದ ಫೋಟೋಗಳನ್ನು ಹಾಕಲಾಗುತ್ತದೆ. ಅದರಲ್ಲಿ 7 ಕುದುರೆಗಳ ಫೋಟೋ ಕೂಡ ಒಂದು. ಇದನ್ನು ಮನೆಯಲ್ಲಿ ಹಾಕುವುದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದು ಇಲ್ಲಿದೆ.
ವಾಸ್ತುಶಾಸ್ತ್ರದ ಪ್ರಕಾರ ಏಳು ಕುದುರೆಯ ಫೋಟೋ ಯಶಸ್ಸು, ಶಕ್ತಿ, ಪ್ರಗತಿ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದ್ದು, ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಜೀವನದಲ್ಲಿ ಈ ಎಲ್ಲಾವೂ ಲಭಿಸಲಿದೆ ಎನ್ನುವ ನಂಬಿಕೆ ಇದೆ.
2/ 8
ಇಷ್ಟೇ ಅಲ್ಲದೇ ಮನೆಯಲ್ಲಿ ಈ ಫೋಟೋ ಇರುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗಲು ಸಹಾಯ ಮಾಡುತ್ತದೆ. ಹಾಗೆಯೇ ಫೋಟೋದಲ್ಲಿ ಸೂರ್ಯ ಇದ್ದರೆ ಇನ್ನೂ ಹೆಚ್ಚಿನ ಮಹತ್ವವಿದೆ ಎನ್ನುತ್ತದೆ ವಾಸ್ತುಶಾಸ್ತ್ರ. ಈ ಕುದುರೆಗಳು ಬದುಕಿನಲ್ಲಿ ಧೈರ್ಯ, ಶಕ್ತಿ, ಶಾಂತಿಯನ್ನು ಹೆಚ್ಚಿಸುತ್ತವೆ.
3/ 8
ಈ ಓಡುವ ಕುದುರೆಗಳು ಜೀವನದಲ್ಲಿ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಅಲ್ಲದೇ ಇದನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ನಿಮ್ಮ ಜೀವನದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿ, ಹಣದ ಹರಿವನ್ನು ಹೆಚ್ಚು ಮಾಡುತ್ತದೆ ಎನ್ನುವ ನಂಬಿಕೆ ಇದೆ.
4/ 8
ಈ 7 ಕುದುರೆಯ ಫೋಟೋ ನಿಮ್ಮ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ನೀಡುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಇದನ್ನು ಬೆಡ್ ರೂಂ ಹೊರಗೆ ಇಡುವುದರಿಂದ ಮನಸ್ತಾಪಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.
5/ 8
ಈ ಫೋಟೋ ಖರೀದಿ ಮಾಡುವ ಮುನ್ನ ಸರಿಯಾಗಿ ಪರಿಶೀಲನೆ ಮಾಡಬೇಕು. ಬಿಳಿ ಬಣ್ಣದ ಕುದುರೆಗಳಿರುವ ಫೋಟೋ ತಂದರೆ ಉತ್ತಮ ಎನ್ನಲಾಗುತ್ತದೆ. ಇದರಿಂದ ಅನೇಕ ರೀತಿಯಲ್ಲಿ ನಿಮಗೆ ಪ್ರಯೋಜನ ಸಿಗುತ್ತದೆ. ಅಲ್ಲದೇ 7 ಕುದುರೆ ಇರಲೇಬೇಕು ಎಂಬುದು ನೆನಪಿರಲಿ.
6/ 8
ಮತ್ತೊಂದು ಮುಖ್ಯವಾದ ಅಂಶ ಎಂದರೆ ಈ 7 ಕುದುರೆಯ ಫೋಟೋವನ್ನು ನಿಮ್ಮ ಮನೆಯ ಬೆಡ್ ರೋಂ ಹೊರಗೆ ಹಾಕಬಹುದು ಹೊರತು ಒಳಗೆ ಹಾಕಬಾರದು. ಅಷ್ಟೇ ಅಲ್ಲದೇ ಆಫೀಸ್ ಒಳಗೆ ಸಹ ಮತ್ತು ಬಾತ್ ರೂಂ ಬಳಿ ಸಹ ಹಾಕಬಾರದು ನೆನಪಿರಲಿ.
7/ 8
ಬಿಳಿ ಕುದುರೆಯ ಫೋಟೋ ಎಷ್ಟು ಒಳ್ಳೆಯದೋ ಹಾಗೆಯೇ ಕೆಂಪು ಕುದರೆಗಳಿರುವ ಫೋಟೋ ಸಹ ಜೀವನದಲ್ಲಿ ಬೆಳವಣಿಗೆಯಾಗಲು ಸಹಾಯ ಮಾಡುತ್ತದೆ. ಇದರಿಂದ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಎನ್ನುವ ನಂಬಿಕೆ ಇದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)