ಫೆಬ್ರವರಿ 13, 2023 ರಂದು ಬೆಳಗ್ಗೆ 08.21 ಗಂಟೆಗೆ, ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ ಶನಿಯ ಜೊತೆ ಸಂಯೋಗವಾಗಲಿದೆ. ಮಾರ್ಚ್ 15, 2023 ರಂದು, ಸೂರ್ಯನು ಕುಂಭ ರಾಶಿಯಲ್ಲಿ 06:13 AM ವರೆಗೆ ಇರುತ್ತಾನೆ. ಅದರ ನಂತರ ಮುಂದಿನ ರಾಶಿ ಅಂದರೆ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯ-ಶನಿ ಸಂಯೋಗದ ಸಮಯದಲ್ಲಿ ಕೆಲವು ರಾಶಿಗಳಿಗೆ ಕಷ್ಟ ಎದುರಾಗಲಿದೆ.
ಸಿಂಹ: ಏಳನೇ ಮನೆಯಲ್ಲಿ ಸೂರ್ಯ-ಶನಿ ಸಂಯೋಗದಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ನೀವು ಎಚ್ಚರಿಕೆಯಿಂದ ಮುಂದುವರಿಯಬೇಕು, ಇಲ್ಲದಿದ್ದರೆ, ನಿಮ್ಮ ನಡುವಿನ ಚರ್ಚೆ ಕಾನೂನು ಸಮಸ್ಯೆ ಉಂಟು ಮಾಡುತ್ತದೆ. ಸಿಂಹ ರಾಶಿಯ ಜನರು ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು, ಆರ್ಥಿಕವಾಗಿ ಸಹ ಸಮಸ್ಯೆಗಳು ಬರಬಹುದು. ಯಾವುದೇ ಕಾನೂನುಬಾಹಿರ ಕೆಲಸ ತಿಳಿಯದೇ ನಡೆಯುವ ಸಾಧ್ಯತೆ ಸಹ ಇದೆ. ಯಾರನ್ನೂ ಕುರುಡಾಗಿ ನಂಬಬೇಡಿ ಏಕೆಂದರೆ ನಿಮ್ಮ ಸ್ನೇಹಿತ ನಿಮಗೆ ಮೋಸ ಮಾಡಬಹುದು.
ವೃಶ್ಚಿಕ: ನಿಮ್ಮ ಜಾತಕದ ನಾಲ್ಕನೇ ಮನೆಯಲ್ಲಿ ಸೂರ್ಯ ಮತ್ತು ಶನಿ ಸಂಯೋಗ ಇದ್ದು, ನಿಮ್ಮ ಕೌಟುಂಬಿಕ ಜೀವನದಲ್ಲಿ ಘರ್ಷಣೆ ಉಂಟಾಗಬಹುದು. ಕೌಟುಂಬಿಕ ಸಮಸ್ಯೆಗಳ ಪರಿಣಾಮವಾಗಿ ನಿಮ್ಮ ವೃತ್ತಿ ಜೀವನದಲ್ಲಿ ಸಹ ಸಮಸ್ಯೆ ಆಗುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸಬೇಕು, ಇಲ್ಲದಿದ್ದರೆ, ನೀವು ಮಾನಸಿಕ ಒತ್ತಡದಿಂದ ಬಳಲುತ್ತೀರಿ, ಹಾಗಾಗಿ ಆರೋಗ್ಯದ ಕಡೆ ವಿಶೇಷ ಗಮನ ಕೊಡಿ.
ಕುಂಭ: ಸೂರ್ಯ ನಿಮ್ಮ ಲಗ್ನ ಮನೆಯಲ್ಲಿ ಸಾಗುತ್ತಾನೆ ಮತ್ತು ಶನಿ ಈಗಾಗಲೇ ಇದ್ದಾನೆ, ಆದ್ದರಿಂದ ಈ ಎರಡು ಗ್ರಹಗಳ ಸಂಯೋಗವು ನಿಮ್ಮ ಲಗ್ನ ಮನೆಯಲ್ಲಿ ನಡೆಯುತ್ತದೆ. ಈ ಹಂತದಲ್ಲಿ ನೀವು ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಆರೋಗ್ಯದ ವಿಷಯದಲ್ಲಿ, ನೀವು ನಿಮ್ಮ ಲೈಫ್ ಸ್ಟೈಲ್ ಕಡೆ ಗಮನಕೊಡಬೇಕು. ಇಲ್ಲದಿದ್ದರೆ, ನೀವು ತಲೆನೋವು, ಜ್ವರ ಮತ್ತು ತಲೆತಿರುಗುವಿಕೆ ಸಮಸ್ಯೆ ಬರಬಹುದು. ಇದರ ಜೊತೆಗೆ ನಿಮ್ಮ ವೈವಾಹಿಕ ಜೀವನದಲ್ಲಿ ಏರಿಳಿತಗಳಾಗುತ್ತದೆ.