Bathroom Vastu Tips: ಬಾತ್ ರೂಂ ವಾಸ್ತು ಹೀಗಿದ್ದರೆ ಆರೋಗ್ಯ ಸಮಸ್ಯೆ ಬರಲ್ವಂತೆ
Bathroom Vastu Tips: ವಾಸ್ತು ಪ್ರಕಾರ ನಮ್ಮ ಮನೆ ಇದ್ದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎನ್ನಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಮ್ಮ ಅಡುಗೆ ಮನೆ ಹಾಗೂ ಬಾತ್ ರೂಂನಲ್ಲಿ ಪ್ರತಿಯೊಂದು ವಸ್ತುವೂ ವಾಸ್ತು ಪ್ರಕಾರವಾಗಿರಬೇಕು. ಹಾಗಾದ್ರೆ ಬಾತ್ ರೂಂ ವಾಸ್ತು ಹೇಗಿರಬೇಕು ಎಂಬುದು ಇಲ್ಲಿದೆ.
ವಾಸ್ತು ಪ್ರಕಾರ ಮನೆಯಲ್ಲಿ ವಿವಿಧ ವಸ್ತುಗಳಿಗೆ ನಿರ್ದಿಷ್ಟವಾದ ಜಾಗ ಇರುತ್ತದೆ. ಆ ವಸ್ತುಗಳು ಸರಿಯಾದ ಜಾಗದಲ್ಲಿ ಇದ್ದರೆ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ ವಾಸ್ತು ದೋಷದ ಕಾರಣದಿಂದ ಸಮಸ್ಯೆ ಉಂಟಾಗುತ್ತದೆ.
2/ 8
ವಾಸ್ತುಶಾಸ್ತ್ರದ ಪ್ರಕಾರ, ಬಾತ್ ರೂಂ ಇರುವ ಜಾಗ ಹಾಗೂ ಅದರಲ್ಲಿರುವ ವಸ್ತುಗಳ ಜಾಗ ಸಹ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಮನೆಯ ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ಬಾತ್ ರೂಂ ಇರುವುದು ಉತ್ತಮ. ಹಾಗೆಯೇ ದಕ್ಷಿಣ ಅಥವಾ ನೈಋತ್ಯ ಭಾಗದಲ್ಲಿ ಬಾತ್ ರೂಂ ಇರಲೇಬಾರದು.
3/ 8
ಬಾತ್ ರೂಂನಲ್ಲಿ ಕನ್ನಡಿಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು. ಪವರ್ ಇರುವ ವಸ್ತುಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಉತ್ತಮ. ಬಾತ್ ರೂಂ ಬಾಗಿಲು ಕೂಡ ಈಶಾನ್ಯ ದಿಕ್ಕಿನಲ್ಲಿದ್ದರೆ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎನ್ನಲಾಗುತ್ತದೆ,
4/ 8
ನಿಮ್ಮ ಬಾತ್ ರೂಂ ಒಳಗೆ ಟಾಯ್ಲೆಟ್ ದಕ್ಷಿಣ ಭಾಗದಲ್ಲಿದ್ದರೆ, ನಿಮ್ಮ ಮನೆಯ ಖ್ಯಾತಿಯು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಹಾಗೆಯೇ ವಾಸ್ತು ಪ್ರಕಾರ ನಿಮ್ಮ ಟಾಯ್ಲೆಟ್ ಯಾವುದೇ ಕಾರಣಕ್ಕೂ ನೈಋತ್ಯ ದಿಕ್ಕಿನಲ್ಲಿ ಇರಲೇಬಾರದು.
5/ 8
ವಾಸ್ತುಶಾಸ್ತ್ರದ ಪ್ರಕಾರ, ಬಾತ್ ರೂಂನಲ್ಲಿರುವ ಸಿಂಕ್ ಹಾಗೂ ಶವರ್ ಅನ್ನು ಪೂರ್ವ, ಉತ್ತರ, ಈಶಾನ್ಯ ಭಾಗದಲ್ಲಿ ಇಡುವುದರಿಂದ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಯಾವುದೇ ಯಂತ್ರಗಳನ್ನು ಬಳಕೆ ಮಾಡುತ್ತಿದ್ದರೆ ಅದನ್ನು ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬೇಕು.
6/ 8
ಇತ್ತೀಚಿನ ದಿನಗಳಲ್ಲಿ ಬಾತ್ ಟಬ್ ಸಾಮಾನ್ಯವಾಗಿದೆ. ಆದರೆ ಇವುಗಳನ್ನು ಉತ್ತರ, ಪೂರ್ವ, ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿ ಮಾತ್ರ ಇಡಬೇಕು. ಅಲ್ಲದೇ ಈ ಟಬ್ ರೌಂಡ್ ಅಥವಾ ಚೌಕವಾಗಿದ್ದರೆ ಉತ್ತಮ. ಇದರ ಜೊತೆ ತಿಳಿ ಬಣ್ಣದ ಬಾತ್ ಟಬ್ ಒಳ್ಳೆಯದು ಎನ್ನಲಾಗುತ್ತದೆ.
7/ 8
ಬಾತ್ ರೂಂನಲ್ಲಿ ಮರದ ಬಾಗಿಲನ್ನು ಹಾಕುವುದು ಉತ್ತಮ ಎನ್ನುತ್ತದೆ ವಾಸ್ತುಶಾಸ್ತ್ರ. ಅಲ್ಲದೇ ಯಾವಾಗಲೂ ಇದರ ಬಾಗಿಲು ಮುಚ್ಚಿರುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹರಡದಂತೆ ತಡೆಯುತ್ತದೆ. ಮನೆಯ ಬಾತ್ ರೂಂ ಬಾಗಿಲು ಮುಚ್ಚಿರುವುದರಿಂದ ಆರೋಗ್ಯ ಸಮಸ್ಯೆಗಳು ಸಹ ಬರುವುದಿಲ್ಲ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)