ನೂರಾರು ವರ್ಷಗಳಿಂದ ಅಮಾವಾಸ್ಯೆ, ಹುಣ್ಣಿಮೆಯಂದು ಭಕ್ತರು ಈ ಕೆರೆಯಲ್ಲಿ ಸ್ನಾನ ಮಾಡಿ ಚರ್ಮರೋಗಗಳಿಂದ ಮುಕ್ತಿ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಆದರೆ, ಕಳೆದ ವರ್ಷದಿಂದ ಕೆರೆಯಲ್ಲಿ ಗಲೀಜು ನೀರು ಇರುವುದರಿಂದ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ನಿರಾಸಕ್ತಿಯಿಂದಾಗಿ ಈ ಕೆರೆಯ ಅಸ್ತಿತ್ವಕ್ಕೆ ಗ್ರಹಣ ಹಿಡಿದಿದೆ.