Banashankari Temple Bengaluru: ಬೆಂಗಳೂರು ಬನಶಂಕರಿ ದೇವಸ್ಥಾನ ಜಾತ್ರಾ ಮಹೋತ್ಸವ ಆರಂಭವಾಗಿದ್ದು, 107 ನೇ ವರ್ಷದ ಜಾತ್ರೆ ಇದಾಗಿದ್ದು, ಡಿಸೆಂಬರ್ 30ರಿಂದ ಆರಂಭವಾಗಿದೆ. ಮಹೋತ್ಸವ ಸಮಯದಲ್ಲಿ ಒಂದೊಂದು ದಿನವೂ ದೇವಿಗೆ ವಿಭಿನ್ನ ಅಲಂಕಾರ ಮಾಡಲಾಗಿದ್ದು, ಕೆಲ ಫೋಟೋಗಳು ಇಲ್ಲಿದೆ.
ಬೆಂಗಳೂರಿನ ಪ್ರಸಿದ್ದ ದೇವಸ್ಥಾನ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಸುಮಾರು 11 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ದೇವಿಗೆ ನಾನಾಲಂಕಾರಗಳನ್ನು ಮಾಡಲಾಗಿದೆ.
2/ 8
ಡಿಸೆಂಬರ್ 30 , ಶುಕ್ರವಾರ 2022 ರಿಂದ ಜನವರಿ 10 , ಮಂಗಳವಾರ 2023 ರವರಿಗೆ ಈ ಕಾರ್ಯಕ್ರಮವಿದ್ದು ಈಗಾಗಲೇ ಸಾವಿರಾರು ಜನರು ಅಮ್ಮನವರ ದರ್ಶನ ಪಡೆಯುತ್ತಿದ್ದಾರೆ. ಇನ್ನು ಬನದ ಹುಣ್ಣಿಮೆಯ ದಿನ ಎಂದರೆ ಜನವರಿ 6 ರಂದು ತಾಯಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.
3/ 8
ಜನವರಿ 1 ಭಾನುವಾರದಂದು dಏವರಿಗೆ ವೈಕುಂಠ ನಾರಾಯಣ ಅಲಂಕಾರ ಮಾಡಲಾಗಿದ್ದು, 107ವರ್ಷದ ಜಾತ್ರಾ ಮಹೋತ್ಸವ ಇದಾಗಿದೆ. ಇನ್ನು ಕಂಕಣಭೂಷ ಅಲಂಕಾರ ಸೇರಿದಂತೆ ಈ 11 ದಿನವೂ ವಿಭಿನ್ನವಾಗಿ ತಾಯಿಗೆ ಅಲಂಕಾರ ಮಾಡಲಾಗುತ್ತದೆ ಎಮದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
4/ 8
ಬೆಂಗಳೂರಿನಲ್ಲಿರುವ ಬನಶಂಕರಿ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, 1915ರಲ್ಲಿ ಈ ದೇವಸ್ಥಾನ ನಿರ್ಮಾಣವಾಯಿತು ಎನ್ನಲಾಗುತ್ತದೆ. ಕನಕಪುರ ರಸ್ತೆಯಲ್ಲಿರುವ ಈ ದೇವಸ್ಥಾನವನ್ನು ಅಮ್ಮನವರ ಭಕ್ತರಾದ ಸೋಮಣ್ಣ ಶೆಟ್ಟಿಯವರು ಕಟ್ಟಿಸಿದ್ದರು.
5/ 8
ಈ ದೇವಾಲಯ ತನ್ನ ಪೂಜೆಯ ಕಾರಣದಿಂದ ಹೆಚ್ಚು ಪ್ರಸಿದ್ಧಿ ಪಡೆದಿದೆ ಎಂದರೆ ತಪ್ಪಲ್ಲ. ಸಾಮಾನ್ಯವಾಗಿ ಎಲ್ಲರೂ ರಾಹು ಕಾಲದಲ್ಲಿ ಪೂಜೆಯನ್ನು ಮಾಡುವುದಿಲ್ಲ, ಆದರೆ ಈ ದೇವಸ್ಥಾನದಲ್ಲಿ ರಾಹು ಕಾಲದಲ್ಲಿ ಪೂಜೆ ಮಾಡಲಾಗುತ್ತದೆ.
6/ 8
ನಂಬಿಕೆಯ ಪ್ರಕಾರ ರಾಹು ಕಾಲದಲ್ಲಿ ಯಾವುದೇ ಒಳ್ಳೆಯ ಕೆಲಸವನ್ನು ಮಾಡುವುದು ಅಶುಭ ಎನ್ನಲಾಗುತ್ತದೆ. ಆದರೆ ಈ ಸಮಯದಲ್ಲಿ ಬನಶಂಕರಿ ಅಮ್ಮವರ ಪೂಜೆ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ.
7/ 8
ಈ ದೇವಾಲಯದಲ್ಲಿ ವಿಶೇಷವಾಗಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರದಂದು ವಿಶೇಷ ಪೂಜೆ ಮಾಡಲಾಗುತ್ತದೆ. ಅಲ್ಲದೇ ಈ ದಿನಗಳಲ್ಲಿ ಪೂಜೆ ಮಾಡುವುದು ಮಂಗಳಕರ ಎನ್ನಲಾಗುತ್ತದೆ. ಹಾಗಾಗಿ ಈ ದಿನಗಳಲ್ಲಿ ದೇವಾಲಯದಲ್ಲಿ ನೂರಾರು ಭಕ್ತರು ಸೇರಿರುತ್ತಾರೆ.
8/ 8
ಅಲ್ಲದೇ ಇಲ್ಲಿ ಅರ್ಧ ಕತ್ತರಿಸಿದ ನಿಂಬೆ ಸಿಪ್ಪೆಗಳಲ್ಲಿ ಅನೇಕ ಎಣ್ಣೆ ದೀಪಗಳನ್ನು ಬೆಳಗಿಸುವ ಮೂಲಕ ಪ್ರಾರ್ಥನೆ ಮಾಡಲಾಗುತ್ತದೆ. ಇನ್ನು ಬನಶಂಕರಿ ದೇವಸ್ಥಾನದಲ್ಲಿ ಪ್ರತಿ ವರ್ಷ ಮೂರು ಸಮಾರಂಭಗಳು ದೇವಾಲಯದ ವಾರ್ಷಿಕೋತ್ಸವ ಎಂದು ಡಿಸೆಂಬರ್ ಕೊನೆಯ ವಾರದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ನಡೆಸಲಾಗುತ್ತದೆ.