Banana Vastu: ಬಾಳೆಗಿಡದ ಪಕ್ಕ ಅಪ್ಪಿ-ತಪ್ಪಿಯೂ ಈ ಸಸ್ಯ ನೆಡಬೇಡಿ, ಸಮಸ್ಯೆ ಹುಡುಕಿ ಬರುತ್ತೆ
Banana plant Vastu: ವಾಸ್ತುಶಾಸ್ತ್ರದಲ್ಲಿ ಕೆಲವು ಕ್ರಮಗಳ ಬಗ್ಗೆ ತಿಳಿದುಕೊಂಡು, ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಜೀವನದಲ್ಲಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಈ ಸಲಹೆಗಳು ವಾಸ್ತು ದೋಷಗಳಿಂದ ಪರಿಹಾರ ಪಡೆಯಲು ಸಹ ನಿಮಗೆ ಸಹಾಯ ಮಾಡುತ್ತದೆ. ಅದರಲ್ಲಿ ಈ ಬಾಳೆಗಿಡದ ವಾಸ್ತು ಸಹ ಒಂದು. ಈ ಬಾಳೆಗಿಡವನ್ನು ಮನೆಯಲ್ಲಿ ನೆಡಲು ಸಹ ಒಂದು ವಿಧಾನವಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಬಾಳೆಗಿಡಕ್ಕೆ ಭಾರತೀಯ ಸಂಪ್ರದಾಯದಲ್ಲಿ ಮಹತ್ತರವಾದ ಸ್ಥಾನವಿದೆ. ಇದನ್ನು ವಿಷ್ಣುವಿನ ಪ್ರತಿರೂಪ ಎಂದು ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ತೋಟದಲ್ಲಿ ಮಾತ್ರವಲ್ಲದೆ, ಹಿತ್ತಲಲ್ಲಿ ಇರುವ ಜಾಗದಲ್ಲಿ ಸಹ ಬೆಳೆಸಲಾಗುತ್ತದೆ.
2/ 8
ಆದರೆ ಈ ಬಾಳೆಗಿಡ ನೆಡುವಾಗ ನಾವು ಮಾಡುವ ಕೆಲ ತಪ್ಪುಗಳು ವಾಸ್ತುದೋಷ ಉಂಟು ಮಾಡುತ್ತದೆ ಎನ್ನಲಾಗುತ್ತದೆ. ಅದರಲ್ಲೂ ಈ ಬಾಳೆ ಗಿಡದ ಪಕ್ಕ ಕೆಲ ಸಸ್ಯಗಳನ್ನು ಬೆಳೆಸುವುದು ಸಮಸ್ಯೆ ಹೆಚ್ಚು ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
3/ 8
ಬಾಳೆಗಿಡವನ್ನು ಎಂದಿಗೂ ಮನೆಯ ಮುಂದೆ ನಡೆಬಾರದು, ಅದನ್ನು ಮನೆಯ ಹಿಂದೆಯೇ ನೆಡಬೇಕು. ಹಾಗೆಯೇ ನೀವು ಬಾಳೆಗಿಡದ ಸುತ್ತ ತುಂಬಾ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಇಲ್ಲದಿದ್ದರೆ ವಾಸ್ತುದೋಷ ಉಂಟಾಗುತ್ತದೆ.
4/ 8
ಇನ್ನು ಬಾಳೆಗಿಡದ ಅಕ್ಕ-ಪಕ್ಕ ಯಾವ ಗಿಡವನ್ನು ನೀವು ಬೆಳೆಸುತ್ತೀರಿ ಎಂಬುದು ಸಹ ಇಲ್ಲಿ ಮುಖ್ಯವಾಗುತ್ತದೆ. ತುಳಸಿ ಸಸ್ಯವನ್ನು ಬಾಳೆಗಿಡದ ಹತ್ತಿರ ನೆಡುವುದರಿಂದ ವಾಸ್ತುದೋಷಗಳು ನಿವಾರಣೆಯಾಗುವುದಲ್ಲದೇ, ಸಂಪತ್ತು ಹೆಚ್ಚಾಗುತ್ತದೆ.
5/ 8
ಬಾಳೆಗಿಡ ವಿಷ್ಣುವಿನ ಪ್ರತಿರೂಪವಾಗಿರುವುದರಿಂದ ಗುರುವಾರ ಅರಿಶಿನವನ್ನು ಅರ್ಪಿಸುವುದು ಶುಭ ಎನ್ನಲಾಗುತ್ತದೆ. ಅಲ್ಲದೇ ಈ ದಿನ ತುಪ್ಪದ ದೀಪ ಹಚ್ಚಿ ಗಿಡಕ್ಕೆ ಪೂಜೆ ಮಾಡಿದರೆ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ.
6/ 8
ವಾಸ್ತು ಪ್ರಕಾರ, ಬಾಳೆ ಗಿಡವನ್ನು ಮನೆಯ ಆಗ್ನೇಯ, ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಈ ರೀತಿ ನೆಡುವುದರಿಂದ ಮನೆಯಲ್ಲಿ ವಾಸ್ತು ಸಮಸ್ಯೆ ಬರಲಿದೆ. ಹಾಗೆಯೇ ಇದನ್ನು ಮನೆಯ ಮುಖ್ಯ ಬಾಗಿಲ ಬಳಿ ಸಹ ನೆಡಬಾರದು.
7/ 8
ಬಾಳೆಗಿಡದ ಪಕ್ಕ ಅಪ್ಪಿ-ತಪ್ಪಿ ಗುಲಾಬಿ ಸಸ್ಯವನ್ನು ನೆಡುವುದು ಅಥವಾ ಯಾವುದೇ ಮುಳ್ಳಿರುವ ಸಸ್ಯವನ್ನು ಬೆಳೆಸುವುದು ತೊಂದರೆಯನ್ನು ಆಹ್ವಾನಿಸಿದಂತೆ. ಅಲ್ಲದೇ ಇದರಿಂದ ಆರ್ಥಿಕವಾಗಿ ಸಹ ನಷ್ಟ ಆಗಬಹುದು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)