Lucky Tree: ಈ ಒಂದು ಮರ ಮನೆಯಲ್ಲಿದ್ರೆ ಸಾಕು ಅದೃಷ್ಟವೇ ಹುಡುಕಿ ಬರುತ್ತೆ

Bael Tree Benefits: ಹಿಂದೂ ಧರ್ಮದಲ್ಲಿ, ಬಿಲ್ವಪತ್ರೆಗೆ ಬಹಳ ಮಹತ್ವದ ಸ್ಥಾನವಿದೆ. ಇದನ್ನು ಹೆಚ್ಚಾಗಿ ಶಿವನಿಗೆ ಅರ್ಪಿಸಲಾಗುತ್ತದೆ. ಆದರೆ ಈ ಬಿಲ್ವಪತ್ರೆ ಮರ ಮನೆಯಲ್ಲಿ ಇದ್ದರೆ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಹಾಗಾದ್ರೆ ಈ ಮರದ ಪ್ರಯೋಜನಗಳೇನು ಎಂಬುದು ಇಲ್ಲಿದೆ.

First published:

  • 18

    Lucky Tree: ಈ ಒಂದು ಮರ ಮನೆಯಲ್ಲಿದ್ರೆ ಸಾಕು ಅದೃಷ್ಟವೇ ಹುಡುಕಿ ಬರುತ್ತೆ

    ಶಿವ ಪುರಾಣವು ಬಿಲ್ವಪತ್ರೆ ಮರ ಅಥವಾ ಅದರ ಎಲೆಗಳನ್ನು ಪೂಜಿಸುವ ಮಹತ್ವದ ಬಗ್ಗೆ ವಿವರಣೆ ನೀಡಿದ್ದು, ಈ ಮರವನ್ನು ಮನುಷ್ಯರಷ್ಟೇ ಅಲ್ಲ, ದೇವತೆಗಳೂ ಆರಾಧಿಸುತ್ತಿದ್ದರು ಎನ್ನಲಾಗುತ್ತದೆ. ಮುಖ್ಯವಾಗಿ ಶಿವನಿಗೆ  3 ಎಲೆಗಳ ಬಿಲ್ವಪ್ರೆಯನ್ನು ಅರ್ಪಣೆ ಮಾಡಿದರೆ ಶಿವನ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ,

    MORE
    GALLERIES

  • 28

    Lucky Tree: ಈ ಒಂದು ಮರ ಮನೆಯಲ್ಲಿದ್ರೆ ಸಾಕು ಅದೃಷ್ಟವೇ ಹುಡುಕಿ ಬರುತ್ತೆ

    ಈ ಮರದ ಬೇರುಗಳ ಕೆಳಗೆ ಸ್ನಾನ ಮಾಡುವುದು ಬ್ರಹ್ಮಾಂಡದ ಎಲ್ಲಾ ಪವಿತ್ರ ನೀರಿನಲ್ಲಿ ಸ್ನಾನ ಮಾಡುವುದಕ್ಕೆ ಸಮನಾಗಿರುತ್ತದೆ ಎಂದೂ ಸಹ ಹೇಳಲಾಗುತ್ತದೆ. ಅಲ್ಲದೇ ಇದು ನಮ್ಮ ಜೀವನದಿಂದ ಕೆಟ್ಟ ಶಕ್ತಿಯನ್ನು ಹೊರ ಹಾಕಲು ಸಹಾಯ ಮಾಡುತ್ತದೆ.

    MORE
    GALLERIES

  • 38

    Lucky Tree: ಈ ಒಂದು ಮರ ಮನೆಯಲ್ಲಿದ್ರೆ ಸಾಕು ಅದೃಷ್ಟವೇ ಹುಡುಕಿ ಬರುತ್ತೆ

    ಆದರೆ ಈ ಬಿಲ್ವಪತ್ರೆ ಮರ ಮನೆಯ ಬಳಿ ಇದ್ದರೆ ಎಷ್ಟು ಪ್ರಯೋಜನಕಾರಿ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ. ಈ ಬಿಲ್ವದ ಎಲೆ ಮಾತ್ರವಲ್ಲದೇ ಹಣ್ಣು ಸಹ ಲಾಭದಾಯಕ. ಆರೋಗ್ಯದ ದೃಷ್ಟಿಯಿಂದ ಬಿಲ್ವಪತ್ರೆಯ ಪ್ರಯೋಜನ ಎಲ್ಲರಿಗೂ ಗೊತ್ತಿದೆ, ಆದರೆ ಜ್ಯೋತಿಷ್ಯದ ಪ್ರಕಾರ ಇದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 48

    Lucky Tree: ಈ ಒಂದು ಮರ ಮನೆಯಲ್ಲಿದ್ರೆ ಸಾಕು ಅದೃಷ್ಟವೇ ಹುಡುಕಿ ಬರುತ್ತೆ

    ನಂಬಿಕೆಗಳ ಪ್ರಕಾರ ಬಿಲ್ವಪತ್ರೆಯ ಮರದಲ್ಲಿ ಲಕ್ಷ್ಮಿ ದೇವಿ ವಾಸವಿರುತ್ತಾಳೆ. ಹಾಗಾಗಿ ಈ ಮರವನ್ನು ಪೂಜೆ ಮಾಡುವುದರಿಂದ ಸಂಪತ್ತಿನ ಸಮಸ್ಯೆ ಆಗುವುದಿಲ್ಲ ಎನ್ನಲಾಗುತ್ತದೆ. ಅದರಲ್ಲೂ ಮನೆಯ ಬಳಿ ಎಕ್ಕ ಹಾಗೂ ಈ ಬಿಲ್ವಪತ್ರೆಯನ್ನು ಒಟ್ಟಿಗೆ ನೆಟ್ಟರೆ ಸಮೃದ್ಧಿ ಹೆಚ್ಚಾಗುತ್ತದೆ.

    MORE
    GALLERIES

  • 58

    Lucky Tree: ಈ ಒಂದು ಮರ ಮನೆಯಲ್ಲಿದ್ರೆ ಸಾಕು ಅದೃಷ್ಟವೇ ಹುಡುಕಿ ಬರುತ್ತೆ

    ಇನ್ನು ಈ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದರೆ ಅದರಿಂದ ಪಾಪ ನಾಶವಾಗುತ್ತದೆ ಎನ್ನಲಾಗುತ್ತದೆ. ಹಾಗೆಯೇ, ಈ ಮರವನ್ನು ಪೂಜಿಸಿದರೆ ಅಥವಾ ಮನೆಯ ಬಳಿ ಇದ್ದರೆ ಸಹ ನಮ್ಮ ಪಾಪ ಕಡಿಮೆ ಆಗುತ್ತದೆ. ಅಲ್ಲದೇ, ಇದನ್ನು ಪ್ರತಿದಿನ ಪೂಜೆ ಮಾಡಿದರೆ ಬಹಳ ಒಳ್ಳೆಯದು.

    MORE
    GALLERIES

  • 68

    Lucky Tree: ಈ ಒಂದು ಮರ ಮನೆಯಲ್ಲಿದ್ರೆ ಸಾಕು ಅದೃಷ್ಟವೇ ಹುಡುಕಿ ಬರುತ್ತೆ

    ಇನ್ನು ಈ ಬಿಲ್ವಪತ್ರೆ ಮರದ ಬುಡಕ್ಕೆ ತುಪ್ಪ, ಆಹಾರ, ಪಾಯಸ ಅಥವಾ ಸಿಹಿತಿಂಡಿಗಳನ್ನು ನೈವೇದ್ಯ ಮಾಡುವುದರಿಂದ ಬಡತನ ನಾಶವಾಗುತ್ತದೆ ಹಾಗೂ ಎಂದಿಗೂ ಆರ್ಥಿಕ ಸಮಸ್ಯೆಗಳು ಕಾಡುವುದಿಲ್ಲ ಎನ್ನುವ ನಂಬಿಕೆ ಇದೆ. ಅಲ್ಲದೇ, ಸಂಪತ್ತು ಸಹ ಹೆಚ್ಚಾಗುತ್ತದೆ.

    MORE
    GALLERIES

  • 78

    Lucky Tree: ಈ ಒಂದು ಮರ ಮನೆಯಲ್ಲಿದ್ರೆ ಸಾಕು ಅದೃಷ್ಟವೇ ಹುಡುಕಿ ಬರುತ್ತೆ

    ಬಿಲ್ವಪತ್ರೆಯ ಬೇರಿನ ನೀರನ್ನು ಹಣೆಯ ಮೇಲೆ ಹಚ್ಚುವುದರಿಂದ ಸಕಲ ತೀರ್ಥಯಾತ್ರೆಗಳ ಪುಣ್ಯ ಲಭಿಸುತ್ತದೆ. ಹಾಗೆಯೇ, ಸೋಮವಾರ ಬಿಲ್ವಪತ್ರೆಯ ಎಲೆಗಳನ್ನು ಕೀಳಬಾರದು ಎನ್ನಲಾಗುತ್ತದೆ. ಈ ರೀತಿ ಕಿತ್ತರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಹುಡುಕಿ ಬರುತ್ತದೆ.

    MORE
    GALLERIES

  • 88

    Lucky Tree: ಈ ಒಂದು ಮರ ಮನೆಯಲ್ಲಿದ್ರೆ ಸಾಕು ಅದೃಷ್ಟವೇ ಹುಡುಕಿ ಬರುತ್ತೆ

    ಬಿಲ್ವಪತ್ರೆಯಲ್ಲಿ ಶಿವ ಹಾಗೂ ಪಾರ್ವತಿ ನೆಲೆಸಿರುತ್ತಾರೆ ಎನ್ನುವ ನಂಬಿಕೆ ಇದೆ. ಹಾಗಾಗಿ ಬಿಲ್ವ ಅರ್ಪಿಸಿ ಶಿವ-ಪಾರ್ವತಿಯನ್ನು ಪೂಜಿಸುವವರಿಗೆ ಮಹಾದೇವ ಮತ್ತು ಪಾರ್ವತಿಯ ಆಶೀರ್ವಾದ ಸಿಗುತ್ತದೆ. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES