Shani-Rahu Effect: ಅಕ್ಟೋಬರ್ 17ರವರೆಗೆ ಈ ರಾಶಿಯವರಿಗೆ ಕಷ್ಟ, ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರ್ತೀರ

Shani Effect: ಜ್ಯೋತಿಷಿಗಳ ಪ್ರಕಾರ.. ಈ ಶನಿ-ರಾಹು ಸಂಯೋಜನೆಯಾಗಿದ್ದು, ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವೊಂದು ರಾಶಿಗೆ ಇದರಿಂದ ಬಹಳ ಕಷ್ಟವಾಗಲಿದೆ. ಯಾವೆಲ್ಲಾ ರಾಶಿಗೆ ಇದರಿಂದ ಕಷ್ಟವಾಗಲಿದೆ ಎಂಬುದು ಇಲ್ಲಿದೆ.

First published:

  • 18

    Shani-Rahu Effect: ಅಕ್ಟೋಬರ್ 17ರವರೆಗೆ ಈ ರಾಶಿಯವರಿಗೆ ಕಷ್ಟ, ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರ್ತೀರ

    ಜ್ಯೋತಿಷ್ಯದಲ್ಲಿ, ಶನಿಗ್ರಹ ಎಂದರೆ ಬಹಳ ಭಯವಾಗುತ್ತದೆ. ಇತ್ತೀಚೆಗೆ ಶನಿಯು ಕುಂಭ ರಾಶಿಯಲ್ಲಿ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದು, . ಶತಭಿಷಾ ನಕ್ಷತ್ರವನ್ನು ರಾಹು ಆಳುವ ಕಾರಣ ಇದರ ಪರಿಣಾಮ ವಿವಿಧ ರೀತಿಯಲ್ಲಿ ಆಗಲಿದೆ. ಅಲ್ಲದೇ, ಇಲ್ಲಿ ಶನಿ-ರಾಹು ಸಂಯೋಗ ಉಂಟಾಗುತ್ತದೆ. ಇದು ಅಕ್ಟೋಬರ್ 17, 2023 ರವರೆಗೆ ಇರುತ್ತದೆ.

    MORE
    GALLERIES

  • 28

    Shani-Rahu Effect: ಅಕ್ಟೋಬರ್ 17ರವರೆಗೆ ಈ ರಾಶಿಯವರಿಗೆ ಕಷ್ಟ, ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರ್ತೀರ

    ಜ್ಯೋತಿಷಿಗಳ ಪ್ರಕಾರ ಈ ಶನಿ-ರಾಹು ಸಂಯೋಜನೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆಯ ಕೆಲಸ ಮಾಡುವ ಜನರಿಗೆ ಇದರಿಂದ ಒಳ್ಳೆಯದಾಗಬಹುದು, ಆದರೂ ಎಚ್ಚರಿಕೆ ವಹಿಸುವುದು ಉತ್ತಮ. ಆದರೆ ಕೆಲವೊಂದು ರಾಶಿಯವರಿಗೆ ಇದರಿಂದ ಸಮಸ್ಯೆ ಆಗುತ್ತದೆ.

    MORE
    GALLERIES

  • 38

    Shani-Rahu Effect: ಅಕ್ಟೋಬರ್ 17ರವರೆಗೆ ಈ ರಾಶಿಯವರಿಗೆ ಕಷ್ಟ, ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರ್ತೀರ

    ಕಟಕ: ಶತಭಿಷಾ ನಕ್ಷತ್ರದಲ್ಲಿರುವ ಶನಿಯು ಕಟಕ ರಾಶಿಯವರಿಗೆ ಹೆಚ್ಚು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕೆಲಸದ ನಿಮಿತ್ತ ಅನಗತ್ಯ ಪ್ರಯಾಣ ಮಾಡಬೇಕಾಗಬಹುದು. ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಖಾಸಗಿ ಉದ್ಯೋಗ ಮಾಡುವವರು ತಮ್ಮ ಕೆಲಸದಲ್ಲಿ ಜಾಗರೂಕರಾಗಿರಬೇಕು. ಅಂತಹವರೆಲ್ಲರೂ ಅಕ್ಟೋಬರ್ 17 ರವರೆಗೆ ಹೂಡಿಕೆಯಿಂದ ದೂರವಿರಬೇಕು.

    MORE
    GALLERIES

  • 48

    Shani-Rahu Effect: ಅಕ್ಟೋಬರ್ 17ರವರೆಗೆ ಈ ರಾಶಿಯವರಿಗೆ ಕಷ್ಟ, ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರ್ತೀರ

    ಕನ್ಯಾ: ಶನಿಯ ಸಂಚಾರವು ಕನ್ಯಾ ರಾಶಿಯವರಿಗೆ ಮಾನಸಿಕ ಗೊಂದಲ ಉಂಟುಮಾಡುತ್ತದೆ. ಯೋಚಿಸದೇ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು. ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ನೀವು ಯಶಸ್ವಿಯಾಗದಿರಬಹುದು. ಅಲ್ಲದೇ, ಮನೆಯ ಖರ್ಚಿಗಾಗಿ ನೀವು ಸಾಲವನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಇದರಿಂದ ಆರ್ಥಿಕ ಸ್ಥಿತಿಯೂ ಹದಗೆಡುತ್ತದೆ.

    MORE
    GALLERIES

  • 58

    Shani-Rahu Effect: ಅಕ್ಟೋಬರ್ 17ರವರೆಗೆ ಈ ರಾಶಿಯವರಿಗೆ ಕಷ್ಟ, ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರ್ತೀರ

    ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ರಕ್ತ ಸಂಬಂಧಿ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರಿ ಅಧಿಕಾರಿಗಳೊಂದಿಗಿನ ಘರ್ಷಣೆಗಳು ತೊಂದರೆಗಳಿಗೆ ಕಾರಣವಾಗಬಹುದು. ತಪ್ಪು ದಾರಿಯಲ್ಲಿ ಹಣ ಸಂಪಾದಿಸಿದರೆ, ಬಡ್ಡಿ ಸಮೇತ ಹಿಂತಿರುಗಿಸಬೇಕಾಗುತ್ತದೆ, ಎಚ್ಚರ. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಇಲ್ಲದಿದ್ದರೆ ಅಪಘಾತವಾಗುವ ಸಂಭವವಿದೆ

    MORE
    GALLERIES

  • 68

    Shani-Rahu Effect: ಅಕ್ಟೋಬರ್ 17ರವರೆಗೆ ಈ ರಾಶಿಯವರಿಗೆ ಕಷ್ಟ, ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರ್ತೀರ

    ಕುಂಭ ರಾಶಿ: ಶನಿ ಮತ್ತು ರಾಹು ಸಂಯೋಜನೆಯು ಕುಂಭ ರಾಶಿಯವರಿಗೆ ಬಹಳ ಹಾನಿಯನ್ನುಂಟುಮಾಡುತ್ತದೆ. ಎಲ್ಲವನ್ನೂ ಅತಿಯಾಗಿ ಯೋಚಿಸುವುದು ತೊಂದರೆಗೆ ಕಾರಣವಾಗಬಹುದು. ಸಂಗಾತಿಯೊಂದಿಗಿನ ಕಲಹಗಳಿಂದ ಕೌಟುಂಬಿಕ ಶಾಂತಿಯೂ ಹದಗೆಡಬಹುದು. ಯಾವುದನ್ನೂ ಅತಿಯಾಗಿ ಯೋಚಿಸಬೇಡಿ. ಶಾಂತವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ

    MORE
    GALLERIES

  • 78

    Shani-Rahu Effect: ಅಕ್ಟೋಬರ್ 17ರವರೆಗೆ ಈ ರಾಶಿಯವರಿಗೆ ಕಷ್ಟ, ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರ್ತೀರ

    ಮೀನ ರಾಶಿ: ಶನಿಯ ಸಂಚಾರವು ಮೀನ ರಾಶಿಯವರಿಗೆ ಕಷ್ಟವನ್ನು ಹೆಚ್ಚು ಮಾಡುತ್ತದೆ. ಅಲ್ಲದೇ, ಈ ಸಮಯದಲ್ಲಿ ಮೀನ ರಾಶಿಯವರ ಮನೆಯಲ್ಲಿ ಕಳ್ಳತನವಾಗುವ ಸಂಭವವಿದೆ. ವಾಹನ ಚಲಾಯಿಸುವಾಗ ಅಪಘಾತಗಳೂ ಸಂಭವಿಸಬಹುದು. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರಿಗೆ ತೋರಿಸಿ. ಇಲ್ಲದಿದ್ದರೆ ರೋಗ ತೀವ್ರ ಹಂತ ತಲುಪುವ ಸಾಧ್ಯತೆ ಇದೆ.

    MORE
    GALLERIES

  • 88

    Shani-Rahu Effect: ಅಕ್ಟೋಬರ್ 17ರವರೆಗೆ ಈ ರಾಶಿಯವರಿಗೆ ಕಷ್ಟ, ಸ್ವಲ್ಪ ಯಾಮಾರಿದ್ರೂ ಬೀದಿಗೆ ಬರ್ತೀರ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES