Astrology: ಅದೃಷ್ಟ ಅಂದ್ರೆ ಈ ರಾಶಿಯವರದ್ದು, ಸಾಲು ಸಾಲು ಯೋಗ ಇವರಿಗಿದೆಯಂತೆ
Auspicious for Zodiac Sign: ಪ್ರತಿಯೊಬ್ಬರಿಗೂ ಜೀವನದಲ್ಲಿ ಮುಂದೆ ಏನಾಗುತ್ತದೆ ಎಂಬುದರ ತಿಳಿದುಕೊಳ್ಳುವ ಆಸೆ ಇರುತ್ತದೆ. ಉದ್ಯೋಗದಲ್ಲಿ ಭಡ್ತಿ, ವೈವಾಹಿಕ ಬದುಕಿನಲ್ಲಿ ನೆಮ್ಮದಿ ಹೀಗೆ ಎಲ್ಲವೂ ಚೆನ್ನಾಗಿರಬೇಕು ಎನ್ನುವುದು ನಮ್ಮ ಆಶಯ. ಈ ರೀತಿ 2023ರಲ್ಲಿ ಸುಖ ಜೀವನ ನಡೆಸುವ ಕೆಲ ರಾಶಿಗಳ ಲಿಸ್ಟ್ ಇಲ್ಲಿದೆ.
ಗ್ರಹಗಳ ಚಲನೆಗಳ ಪ್ರಕಾರ, 6 ರಾಶಿಗಳಿಗೆ ಈ ವರ್ಷ ಸಾಲು ಸಾಲು ಯೋಗಗಳಿದೆಯಂತೆ. ಈ ರಾಶಿಯ ಜನರು ಕಳೆದ ವರ್ಷ ಅನುಬವಿಸಿದ ಕಷ್ಟಗಳೆಲ್ಲಾ ಈ ವರ್ಷ ಮಾಯವಾಗುತ್ತದೆ. ವರ್ಷದ ಹೆಚ್ಚಿನ ಸಮಯ ಈ ಜನರಿಗೆ ಮಂಗಳಕರವಾಗಿರುತ್ತದೆ.
2/ 8
ಮಿಥುನ: ಮಿಥುನ ರಾಶಿಯವರಿಗೆ ಈ ವರ್ಷ ತುಂಬಾ ಶುಭ ಫಲಗಳಿದೆ. ತಮ್ಮ ಉದ್ಯೋಗದ ಹೊರತಾಗಿ ವ್ಯವಹಾರವನ್ನು ಪ್ರಾರಂಭಿಸಲು ಬಯಸುವ ಜನರು ಉತ್ತಮ ಲಾಭ ಪಡೆಯುವ ನಿರೀಕ್ಷೆಯಿದೆ. ಆರ್ಥಿಕ ಸ್ಥಿತಿ ಸದೃಢವಾಗುತ್ತದೆ ಹಾಗೂ ಕೆಲಸದ ಸ್ಥಳದಲ್ಲಿ ಮತ್ತು ಸಮಾಜದಲ್ಲಿ ಗೌರವವ ಹೆಚ್ಚಾಗುತ್ತದೆ. ವಿದ್ಯಾರ್ಥಿಯಾಗಿದ್ದರೆ, ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸು ಸಿಗುತ್ತದೆ.
3/ 8
ಕರ್ಕಾಟಕ ರಾಶಿ: ಕಟಕ ರಾಶಿಯವರ ಹಳೆಯ ಸಮಸ್ಯೆಗಳು ಬಗೆಹರಿಯುತ್ತವೆ. ಉದ್ಯೋಗ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆದಾಯದ ಮೂಲಗಳು ಹೆಚ್ಚಾಗುವ ಸಾಧ್ಯತೆಯಿದೆ.ಸಾಡೇಸಾತಿಯ ಅಂತ್ಯವೂ ತುಂಬಾ ಶುಭಫಲ ನೀಡಲಿದೆ. ಆದರೆ, ಕೆಲವರು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಹೊಂದಿರಬಹುದು.
4/ 8
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಶತ್ರುನಾಶ ಯೋಗವಿದೆ. ಅನೇಕ ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ ಅದರಲ್ಲಿ ಯಶಸ್ಸನ್ನು ಸಿಗುವುದು ಗ್ಯಾರಂಟಿ. ಆರೋಗ್ಯದ ದೃಷ್ಟಿಯಿಂದ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ.
5/ 8
ಕನ್ಯಾ ರಾಶಿ: ಈ ರಾಶಿಯವರು ಹೊಸ ಕೋರ್ಸ್ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ತುಂಬಾ ಲಾಭ ನೀಡುತ್ತದೆ. ಹಳೆಯ ರೋಗಗಳು ಮತ್ತು ವಿವಾದಗಳು ಸಹ ಬಗೆಹರಿಯುವ ಸಾಧ್ಯತೆಯಿದೆ.ಆದಾಯ ಹೆಚ್ಚಾಗುವುದರ ಜೊತೆಗೆ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು, ಆದರೆ ಅದು ಕೂಡ ಗಂಭೀರವಾಗಿರುವುದಿಲ್ಲ.
6/ 8
ಕುಂಭ ರಾಶಿ: ಕುಂಭ ರಾಶಿಯವರಿಗೆ ಹೊಸ ವರ್ಷವು ಯಶಸ್ಸಿನ ಯೋಗವನ್ನು ತರುತ್ತದೆ. ಇವರಿಗೆ ಉದ್ಯೋಗ, ವ್ಯವಹಾರ, ಆದಾಯ, ಸ್ಥಾನ ಮತ್ತು ಪ್ರತಿಷ್ಠೆ ಸಹ ಸಿಗುತ್ತದೆ. ಹಣ ಗಳಿಸಲು ಹೊಸ ಆಯ್ಕೆಗಳೂ ಇರುತ್ತವೆ. ಉದ್ಯೋಗ ಬದಲಾವಣೆಯಿಂದಲೂ ಹಣಕಾಸಿನ ಲಾಭ ಆಗಲಿದೆ.
7/ 8
ಧನು ರಾಶಿ: ಧನು ರಾಶಿಯವರಿಗೆ ಸಾಡೇಸಾತಿ ಮುಗಿಯುವುದರಿಂದ ಹೊಸ ವರ್ಷದಲ್ಲಿ ಧನು ರಾಶಿಯವರ ಅದೃಷ್ಟ ಹೆಚ್ಚಾಗಲಿದೆ. ಸ್ಥಗಿತಗೊಂಡ ಕೆಲಸಗಳನ್ನು ಪೂರ್ಣಗೊಳ್ಳುತ್ತದೆ, ಈ ಕುಟುಂಬ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕವಾಗಿ ಎಲ್ಲವೂ ಚೆನ್ನಾಗಿರುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)