Karnataka Election 2023: ಇವತ್ತೇ ಅತೀ ಹೆಚ್ಚು ಜನ ನಾಮಪತ್ರ ಸಲ್ಲಿಸುತ್ತಿರೋದು ಯಾಕೆ? ಇದೇ ಕಾರಣ

Karnataka Election 2023: ಕರ್ನಾಟಕ ವಿಧಾನಸಭೆ ಚುನಾವಣೆಯ ರಣರಂಗ ಸಿದ್ದವಾಗಿದ್ದು, ಈ ನಡುವೆ ಅಭ್ಯರ್ಥಿಗಳು ಸಹ ನಾಮಪತ್ರ ಸಲ್ಲಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅನೇಕ ಜನರು ಇಂದೇ ನಾಮಿನೇಷನ್​ ಸಲ್ಲಿಸುತ್ತಿದ್ದಾರೆ. ಒಂದೇ ದಿನ ಹೆಚ್ಚಿನ ಜನ ನಾಮಪತ್ರ ಸಲ್ಲಿಕೆ ಮಾಡುತ್ತಿರುವುದಕ್ಕೂ ಒಂದು ಕಾರಣವಿದ್ದು, ಇದರ ಹಿಂದಿನ ರಹಸ್ಯವೇನು ಎಂಬುದು ಇಲ್ಲಿದೆ.

First published:

  • 18

    Karnataka Election 2023: ಇವತ್ತೇ ಅತೀ ಹೆಚ್ಚು ಜನ ನಾಮಪತ್ರ ಸಲ್ಲಿಸುತ್ತಿರೋದು ಯಾಕೆ? ಇದೇ ಕಾರಣ

    ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ ನಂತರದಿಂದ ರಾಜ್ಯದಲ್ಲಿ ದಿನಕ್ಕೊಂದು ಬಿರುಸಿನ ಚಟುವಟಿಕೆಗಳು ಆರಂಭವಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಬಹುತೇಕ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

    MORE
    GALLERIES

  • 28

    Karnataka Election 2023: ಇವತ್ತೇ ಅತೀ ಹೆಚ್ಚು ಜನ ನಾಮಪತ್ರ ಸಲ್ಲಿಸುತ್ತಿರೋದು ಯಾಕೆ? ಇದೇ ಕಾರಣ

    ಚುನಾವಣಾ ಆಯೋಗದ ನಿಯಮದ ಪ್ರಕಾರ ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನಾಂಕವಾಗಿದ್ದು, ಇಂದು ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಜ್ಯೋತಿಷ್ಯಶಾಸ್ರ್ತ.

    MORE
    GALLERIES

  • 38

    Karnataka Election 2023: ಇವತ್ತೇ ಅತೀ ಹೆಚ್ಚು ಜನ ನಾಮಪತ್ರ ಸಲ್ಲಿಸುತ್ತಿರೋದು ಯಾಕೆ? ಇದೇ ಕಾರಣ

    ಚುನಾವಣೆಯಲ್ಲಿ ಗೆಲ್ಲಲು ರಾಜಕಾರಣಿಗಳು ಯಾವುದೇ ಹಂತಕ್ಕೆ ಬೇಕಾದರೂ ತಲುಪುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರಲ್ಲಿ ನಾಮಪತ್ರ ಸಲ್ಲಿಸಲು ಶುಭ ದಿನಾಂಕಗಳನ್ನು ಆಯ್ಕೆ ಮಾಡುವುದು ಸಹ ಬಹಳ ಮುಖ್ಯವಾಗುತ್ತದೆ.

    MORE
    GALLERIES

  • 48

    Karnataka Election 2023: ಇವತ್ತೇ ಅತೀ ಹೆಚ್ಚು ಜನ ನಾಮಪತ್ರ ಸಲ್ಲಿಸುತ್ತಿರೋದು ಯಾಕೆ? ಇದೇ ಕಾರಣ

    ಅನೇಕರು ಜ್ಯೋತಿಷಿಗಳು ಮತ್ತು ಪುರೋಹಿತರನ್ನು ಸಂಪರ್ಕಿಸಿ ದಿನವಷ್ಟೇ ಅಲ್ಲ, ನಾಮಪತ್ರ ಸಲ್ಲಿಸುವ ಸಮಯವನ್ನು ಕೂಡ ನಿರ್ಧಾರ ಮಾಡುತ್ತಾರೆ. ಹಾಗೆಯೇ, ಈ ಬಾರಿ ಅಭ್ಯರ್ಥಿಗಳು ಏಪ್ರಿಲ್ 17 ರಂದು ನಾಮಪತ್ರಗಳನ್ನು ಸಲ್ಲಿಸಲು ಕ್ಯೂ ನಿಂತಿದ್ದಾರೆ.

    MORE
    GALLERIES

  • 58

    Karnataka Election 2023: ಇವತ್ತೇ ಅತೀ ಹೆಚ್ಚು ಜನ ನಾಮಪತ್ರ ಸಲ್ಲಿಸುತ್ತಿರೋದು ಯಾಕೆ? ಇದೇ ಕಾರಣ

    ಏಕೆಂದರೆ ಇದು ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾಗಿದೆ. ಜ್ಯೋತಿಷಿ ಶ್ರೀನಿವಾಸ್ ರಾವ್ ಅವರು ಟೈಮ್ಸ್​ ಆಫ್​ ಇಂಡಿಯಾಗೆ ನೀಡಿದ ಮಾಹಿತಿ ಪ್ರಕಾರ, ನಾಮಪತ್ರ ಸಲ್ಲಿಸಲು ಉತ್ತಮ ದಿನವೆಂದರೆ ಏಪ್ರಿಲ್ 17 ಮತ್ತು ಸೂಕ್ತ ಸಮಯ ಮಧ್ಯಾಹ್ನ 1.30 ರಿಂದ 3 ರವರೆಗೆ.

    MORE
    GALLERIES

  • 68

    Karnataka Election 2023: ಇವತ್ತೇ ಅತೀ ಹೆಚ್ಚು ಜನ ನಾಮಪತ್ರ ಸಲ್ಲಿಸುತ್ತಿರೋದು ಯಾಕೆ? ಇದೇ ಕಾರಣ

    ಇನ್ನು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏಪ್ರಿಲ್ 20 ರಂದು ಸೂರ್ಯಗ್ರಹಣ ಇರುವುದರಿಂದ ಆ ದಿನ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವುದು ಅನುಮಾನ. ಹಾಗಾಗಿ ಅದರ ಬದಲು ಏಪ್ರಿಲ್ 19ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

    MORE
    GALLERIES

  • 78

    Karnataka Election 2023: ಇವತ್ತೇ ಅತೀ ಹೆಚ್ಚು ಜನ ನಾಮಪತ್ರ ಸಲ್ಲಿಸುತ್ತಿರೋದು ಯಾಕೆ? ಇದೇ ಕಾರಣ

    ಒಟ್ಟಾರೆಯಾಗಿ ರಾಜಕಾರಣಿಗಳು ಈ ಬಾರಿ ಗೆಲುವಿನ ಕುದುರೆ ಏರಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದು, ಅದಕ್ಕೆ ಜ್ಯೋತಿಷ್ಯ ಸೇರಿದಂತೆ ಎಲ್ಲಾ ರೀತಿಯ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಕೊನೆಯಲ್ಲಿ ಮತದಾರ ಪ್ರಭು ಯಾರ ಕೈ ಹಿಡಿಯುತ್ತಾನೆ ಎಂಬುದನ್ನ ಮಾತ್ರ ಕಾದುನೋಡಬೇಕಿದೆ.

    MORE
    GALLERIES

  • 88

    Karnataka Election 2023: ಇವತ್ತೇ ಅತೀ ಹೆಚ್ಚು ಜನ ನಾಮಪತ್ರ ಸಲ್ಲಿಸುತ್ತಿರೋದು ಯಾಕೆ? ಇದೇ ಕಾರಣ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES