Silver Ring: ಬೆಳ್ಳಿ ಉಂಗುರ ಧರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನ ಗೊತ್ತಾ?
ಬೆಳ್ಳಿಯನ್ನು (Silver) ಅತ್ಯಂತ ಪವಿತ್ರ ಮತ್ತು ಸಾತ್ವಿಕ ಲೋಹವೆಂದು ಪರಿಗಣಿಸಲಾಗಿದೆ. ಬೆಳ್ಳಿಯ ಬಗ್ಗೆ ಧಾರ್ಮಿಕ ನಂಬಿಕೆ ಇದೆ. ಬೆಳ್ಳಿ ಶಿವನ ಕಣ್ಣುಗಳಿಂದ ಹುಟ್ಟಿಕೊಂಡಿತು ಎಂಬ ಮಾತಿದೆ. ಇದೇ ಕಾರಣಕ್ಕೆ ಜ್ಯೋತಿಷ್ಯದಲ್ಲಿ (Astrology) ಬೆಳ್ಳಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬೆಳ್ಳಿಯು ಸಂಪತ್ತಿನ ಅಂಶವಾದ ಶುಕ್ರ ಮತ್ತು ಮನಸ್ಸಿನ ಅಂಶವಾದ ಚಂದ್ರನಿಗೆ ಸಂಬಂಧಿಸಿದೆ.
ಬೆಳ್ಳಿಯು ದೇಹದ ನೀರಿನ ಅಂಶವನ್ನು ನಿಯಂತ್ರಿಸುತ್ತದೆ. ಇದರೊಂದಿಗೆ ಕಫ, ಪಿತ್ತ, ವಾತ ಸಮಸ್ಯೆ ನಿವಾರಣೆಗೂ ಸಹಕಾರಿ. ಅದಕ್ಕಾಗಿಯೇ ಸಾಮಾನ್ಯ ಜೀವನದಲ್ಲಿ ಬೆಳ್ಳಿಗೆ ವಿಶೇಷ ಪ್ರಾಮುಖ್ಯತೆ ಇದೆ.
2/ 6
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿ ಮನಸ್ಸು ಗಟ್ಟಿಯಾಗಲು ಸಹಾಯ ಮಾಡುತ್ತದೆ. ಜೊತೆಗೆ ಮನಸ್ಸನ್ನು ತೀಕ್ಷ್ಣಗೊಳಿಸುತ್ತದೆ. ಜಾತಕದಲ್ಲಿ ಚಂದ್ರನ ಅಶುಭ ಪರಿಣಾಮಗಳನ್ನು ತೊಡೆದುಹಾಕಲು ಜ್ಯೋತಿಷಿಗಳು ಬೆಳ್ಳಿಯನ್ನು ಧರಿಸುವಂತೆ ಸಲಹೆ ನೀಡುತ್ತಾರೆ. ಬೆಳ್ಳಿಯು ಶುಕ್ರನನ್ನು ಬಲಗೊಳಿಸುತ್ತದೆ.
3/ 6
ಜ್ಯೋತಿಷಿಗಳ ಪ್ರಕಾರ, ಚಿಕ್ಕ ಬೆರಳಿಗೆ ಶುದ್ಧ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಸಾಕಷ್ಟು ಪ್ರಯೋಜನ ಇದೆ. ಬೆಳ್ಳಿಯನ್ನು ಧರಿಸುವುದರಿಂದ, ಚಂದ್ರನ ಅಶುಭ ಪರಿಣಾಮಗಳು ಶುಭ ಪರಿಣಾಮಗಳನ್ನು ನೀಡಲು ಪ್ರಾರಂಭಿಸುತ್ತವೆ. ಇದರಿಂದ ಮನಸ್ಸಿನ ಸಮತೋಲನ ಸಾಧ್ಯವಾಗಿ, ಧನ ಪ್ರಾಪ್ತಿಯಾಗುತ್ತದೆ.
4/ 6
ಭಾವನಾತ್ಮಕ ಸಮಸ್ಯೆ ಇರುವವರು ಬೆಳ್ಳಿ ಧರಿಸಬಾರದು. ವೃಶ್ಚಿಕ, ಮೀನ ಮತ್ತು ಕರ್ಕಾಟಕ ರಾಶಿಯವರಿಗೆ ಬೆಳ್ಳಿಯನ್ನು ಧರಿಸುವುದು ಶುಭ. ಸಿಂಹ,, ಧನು ರಾಶಿ ಮತ್ತು ಮೇಷ ರಾಶಿಯವರಿಗೆ ಅನುಕೂಲಕರ ಅಲ್ಲ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ
5/ 6
ಮೊದಲು ಬೆಳ್ಳಿಯ ಸರವನ್ನು ಗಂಗಾಜಲದಿಂದ ಶುದ್ಧೀಕರಿಸಿ. ಅದರ ನಂತರ ಕುತ್ತಿಗೆಗೆ ಧರಿಸಿ. ಹೀಗೆ ಮಾಡುವುದರಿಂದ ಹಾರ್ಮೋನುಗಳು ಸಹ ಸಮತೋಲನದಲ್ಲಿರುತ್ತವೆ. ಬೆಳ್ಳಿ ಕೂಡ ಮನಸ್ಸನ್ನು ಕೇಂದ್ರೀಕರಿಸುತ್ತದೆ
6/ 6
ಶುದ್ಧ ಬೆಳ್ಳಿಯಿಂದ ಮಾಡಿದ ಬಳೆಯನ್ನು ಧರಿಸುವುದರಿಂದ ಆರೋಗ್ಯ ಸಮಸ್ಯೆ ನಿಯಂತ್ರಿಸಬಹುದು. ಶೀಘ್ರದಲ್ಲೇ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ.(ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)