ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಡಿಸೆಂಬರ್ 5ರಂದು ಶುಕ್ರ ವೃಶ್ಚಿಕ ರಾಶಿ ತೊರೆದು ಧನು ಪ್ರವೇಶಿಸಿದ್ದಾನೆ. ಇದು ಕೆಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. (ಸಾಂದರ್ಭಿಕ ಚಿತ್ರ)
2/ 9
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನನ್ನು ಸೌಕರ್ಯ, ಸಂಪತ್ತು ಮತ್ತು ಸೌಂದರ್ಯದ ಅಂಶ ಎಂದು ಹೇಳಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಶುಕ್ರನಿಗೆ ವಿಶೇಷ ಸ್ಥಾನ ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ)
3/ 9
ಶುಕ್ರ ಧನು ರಾಶಿ ಪ್ರವೇಶ ಮಾಡಿದ್ದರಿಂದ ಈ 5 ರಾಶಿ ಚಿಹ್ನೆಗಳಿಗೆ ಲಾಭ ಆಗಲಿದೆ. ಹಣಕಾಸಿನ ಸಮಸ್ಯೆಗಳು ದೂರ ಆಗಲಿವೆ. ವ್ಯಾಪಾರದಲ್ಲಿ ಲಾಭ, ಉದ್ಯೋಗವಕಾಶಗಳು ಸಿಗಲಿವೆ. (ಸಾಂದರ್ಭಿಕ ಚಿತ್ರ)
4/ 9
ಮೇಷ ಈ ರಾಶಿಯವರಿಗೆ ಶುಕ್ರ ಸಂಕ್ರಮಣ ಲಾಭದಾಯಕವಾಗಲಿದೆ. ಈ ಸಮಯದಲ್ಲಿ ಹಣದ ಸಮಸ್ಯೆ ನಿವಾರಣೆಯಾಗಲಿದ್ದು, ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕಠಿಣ ಪರಿಶ್ರಮ ಬಡ್ತಿಗೆ ಅವಕಾಶ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸಂತಸ, ಪುತ್ರ ಸಂತಾನದ ಸಾಧ್ಯತೆ ಇದೆ. (ಸಾಂದರ್ಭಿಕ ಚಿತ್ರ)
5/ 9
ಸಿಂಹ ಈ ರಾಶಿಯವರಿಗೆ ಶುಕ್ರ ಸಂಕ್ರಮಣ ಮಂಗಳಕರವಾಗಿರಲಿದೆ. ಶೀಘ್ರದಲ್ಲೇ ಶುಭ ಸುದ್ದಿ ಕೇಳುವಿರಿ, ಉದ್ಯೋಗವಕಾಶ , ಕೆಲಸಗಳಲ್ಲಿ ಯಶಸ್ಸು ಮತ್ತು ಕೆಲಸ ಬದಲಾಯಿಸಲು ಇದು ಸೂಕ್ತ ಸಮಯವಾಗಿದೆ. (ಸಾಂದರ್ಭಿಕ ಚಿತ್ರ)
6/ 9
ವೃಶ್ಚಿಕ ಈ ರಾಶಿಯವರಿಗೆ ಶುಕ್ರ ಸಂಕ್ರಮಣ ಅನುಕೂಲಕರ ಅವಧಿಯಾಗಿದೆ. ಧನಾಗಮಾನ ಆಗಮಲಿದ್ದು, ಐಷಾರಾಮಿ ಜೀವನ ನಡೆಸುವ ಸುಳಿವು ಸಿಗಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ಹೊಸ ಆಸ್ತಿ ಖರೀದಿಗೆ ಇದು ಶುಭ ಕಾಲವಾಗಿದೆ. (ಸಾಂದರ್ಭಿಕ ಚಿತ್ರ)
7/ 9
ತುಲಾ ಶುಕ್ರನು ತುಲಾ ರಾಶಿಯ ಅಧಿಪತಿ. ಶುಕ್ರ ಸಂಕ್ರಮಣವು ತುಲಾ ರಾಶಿಯವರಿಗೆ ಮಂಗಳಕರವಾಗಿದ್ದಾನೆ. ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಗಳು ಕೇಳುವಿರಿ, ವಾಹನ ಖರೀದಿ ಸಾಧ್ಯತೆ ಮತ್ತು ಸಂಗಾತಿಯಿಂದ ಪ್ರೀತಿ ಪಡೆಯಲಿದ್ದೀರಿ. (ಸಾಂದರ್ಭಿಕ ಚಿತ್ರ)
8/ 9
ಕುಂಭ ಕುಂಭ ರಾಶಿವರಿಗೆ ಡಿಸೆಂಬರ್ ತಿಂಗಳು ಉತ್ತಮ ಕಾಲವಾಗಿದೆ. ಶುಕ್ರ ಸಂಕ್ರಮಣದಿಂದ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ವ್ಯಾಪಾರದಲ್ಲಿ ಲಾಭ, ಉದ್ಯೋಗಿಳಿಗೆ ಬಡ್ತಿ ಸಿಗಲಿದೆ. (ಸಾಂದರ್ಭಿಕ ಚಿತ್ರ)
9/ 9
(Disclaimer:ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)