Camphor Benefits: ಕರ್ಪೂರವನ್ನು ಈ ರೀತಿ ಯೂಸ್ ಮಾಡಿದ್ರೆ ಪಿತೃ ದೋಷ ನಿವಾರಣೆಯಾಗುತ್ತೆ
Camphor For Vastu: ನಮ್ಮ ದೈನಂದಿನ ಪೂಜೆಯಲ್ಲಿ ಕರ್ಪೂರಕ್ಕೆ ಮಹತ್ವದ ಸ್ಥಾನವಿದೆ. ಆರತಿ ಮಾಡುವಾಗ ಕರ್ಪೂರ ಇರಲೇಬೇಕು. ಆದರೆ ಈ ಕರ್ಪೂರದಿಂದ ವಾಸ್ತು ದೋಷ ಸಹ ನಿವಾರಣೆಯಾಗುತ್ತದೆ ಎಂಬುದರ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಕರ್ಪೂರದಿಂದ ವಾಸ್ತು ದೋಷಕ್ಕೆ ಹೇಗೆ ಪರಿಹಾರ ಪಡೆಯುವುದು ಎನ್ನುವುದು ಇಲ್ಲಿದೆ.
ಕರ್ಪೂರವನ್ನು ಆರತಿ ಮಾಡುವಾಗ ಬಳಕೆ ಮಾಡುವುದರಿಂದ ಆ ಸ್ಥಳ ಶುದ್ದವಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ ಇದು ಮನೆಯಲ್ಲಿನ ನೆಗೆಟಿವ್ ಎನರ್ಜಿಯನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ. ಇದರಿಂದ ಮನೆಯಲ್ಲಿ ನೆಮ್ಮದಿ ಮೂಡುತ್ತದೆ.
2/ 8
ಆರೋಗ್ಯದ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ: ಕರ್ಪೂರದ ಪರಿಮಳ ಎಂದರೆ ಎಲ್ಲರಿಗೂ ಇಷ್ಟ. ಒಂದು ವಿಭಿನ್ನ ಸುವಾಸನೆ ಅದು. ಅದರ ಪರಿಮಳದಿಂದ ಗಾಳಿಯಲ್ಲಿರುವ ಕೆಟ್ಟ ಅಂಶಗಳು ನಿವಾರಣೆಯಾಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆಗಳು ಬರುವುದಿಲ್ಲ.
3/ 8
ಗ್ರಹಗಳ ದೋಷ ನಿವಾರಣೆಗೆ: ಜಾತಕದಲ್ಲಿ ಗ್ರಹಗಳ ಸ್ಥಾನ ಸರಿಯಾಗಿ ಇಲ್ಲದಿದ್ರೆ ಜೀವನದಲ್ಲಿ ಸಮಸ್ಯೆಗಳು ಬರುವುದು ಸಾಮಾನ್ಯ. ಅದಕ್ಕೆ ಮನೆಯಲ್ಲಿ ಕರ್ಪೂರವನ್ನು ತುಪ್ಪದಲ್ಲಿ ಅದ್ದಿ ಆರತಿ ಮಾಡುವುದರಿಂದ ಪಿತೃದೋಷ ಸೇರಿದಂತೆ ಅನೇಕ ದೋಷಗಳು ನಿವಾರಣೆಯಾಗುತ್ತದೆ.
4/ 8
ಅಪಘಾತಗಳನ್ನು ಕಡಿಮೆ ಮಾಡುತ್ತದೆ: ನೀವು ಮನೆಯಿಂದ ಹೊರಗೆ ಹೋಗುವಾಗ ಕರ್ಪೂರವನ್ನು ಬಳಸಿ ಆರತಿ ಮಾಡಿ ಹೋಗುವುದು ಅಪಘಾತಗಳಾಗುವುದನ್ನ ಕಡಿಮೆ ಮಾಡುತ್ತದೆ. ಇದರಿಂದ ಮಾನಸಿಕವಾಗಿ ಸಹ ನೆಮ್ಮದಿ ಹೆಚ್ಚಾಗುತ್ತದೆ.
5/ 8
ಸಂಸಾರದ ವೈಮನಸ್ಸಿಗೆ: ಸಂಸಾರದಲ್ಲಿ ಜಗಳ ಸಾಮಾನ್ಯ, ಆದರೆ ಅದು ಹೆಚ್ಛಾದರೆ ಅದಕ್ಕೆ ಕರ್ಪೂರ ಪರಿಹಾರ ನೀಡುತ್ತದೆ. ನಿಮ್ಮ ಗಂಡ ತಲೆಯ ದಿಂಬಿನ ಕೆಳಗೆ ಕರ್ಪೂರ ಇಡುವುದರಿಂದ ಗಂಡ-ಹೆಂಡತಿ ಮಧ್ಯೆ ಜಗಳ ಆಗದಂತೆ ತಡೆಯುತ್ತದೆ. ಸಂಸಾರದಲ್ಲಿ ಶಾಂತಿ ಇರುತ್ತದೆ.
6/ 8
ಕುಟುಂಬದಲ್ಲಿ ಶಾಂತಿಗೆ: ಮನೆಯ ಸದ್ಯಸರ ನಡುವೆ ಸಾಮಾರಸ್ಯ ಮೂಡಿರಲು ಸಹ ಈ ಕರ್ಪೂರ ಸಹಾಯ ಮಾಡುತ್ತದೆ. ಸಂಜೆ ಮತ್ತು ಬೆಳಗ್ಗೆ ಕರ್ಪೂರವನ್ನು ತುಪ್ಪದಲ್ಲಿ ಅದ್ದಿ, ಆರತಿ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ.
7/ 8
ಸಂಪತ್ತು ಹೆಚ್ಚಾಗಲು: ಯಾರಿಗೆ ತಾನೇ ಹಣ ಬೇಡ ಹೇಳಿ, ನಮ್ಮಲ್ಲಿರುವ ಸಂಪತ್ತು ಹೆಚ್ಚಾಗಲು ಎಲ್ಲರೂ ಕಷ್ಟಪಡುತ್ತಾರೆ. ಅದಕ್ಕಾಗಿ ನೀವು ಸಹ ಕರ್ಪೂರವನ್ನು ಹೂವಿನ ಜೊತೆ ಹಾಕಿ ಆರತಿ ಮಾಡುವುದು ಅಥವಾ ಮನೆಯಲ್ಲಿ ಸುಡುವುದು ಸಹಾಯ ಮಾಡುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)