Wedding Remedy: ಹುಡುಗಿ ಸಿಗ್ತಿಲ್ಲ ಎಂಬ ಚಿಂತೆ ಬಿಡಿ, ಈ ಟಿಪ್ಸ್ ಫಾಲೋ ಮಾಡಿ, ಕಂಕಣ ಭಾಗ್ಯ ಗ್ಯಾರಂಟಿ
Marriage Tips or Boys: ಮದುವೆ ಎಂಬುದು ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾದ ಘಟ್ಟ. ಆದರೆ ಕೆಲ ಕಾರಣಗಳಿಂದ ಸರಿಯಾದ ಸಮಯಕ್ಕೆ ಮದುವೆ ಆಗುವುದಿಲ್ಲ. ಅದರಲ್ಲೂ ಪುರುಷರು ಹುಡುಗಿ ಸಿಗದೇ ಪರದಾಡುತ್ತಾರೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ.
ಮದುವೆ ಎನ್ನುವುದು 2 ಕುಟುಂಬ ಹಾಗೂ 2 ಆತ್ಮಗಳ ನಡುವಿನ ಸಂಬಂಧ. ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕು. ಹಾಗಂತ ಅತಿಯಾಗಿ ಆಯ್ಕೆ ಮಾಡುತ್ತಾ ಕೂತರೆ ಮದುವೆ ಆಗುವುದಿಲ್ಲ.
2/ 7
ಮದುವೆ ನಿಧಾನವಾಗಿ ಆಗಲು ಕಾರಣಗಳು ಹಲವಾರಿರುತ್ತವೆ. ಮುಖ್ಯವಾಗಿ ಜಾತಕದಲ್ಲಿ ದೋಷ ಇದ್ದರೆ ಬೇಗ ಮದುವೆ ಆಗುವುದಿಲ್ಲ. ಈಗಂತೂ ಪುರುಷರು ಹುಡುಗಿ ಸಿಗುತ್ತಿಲ್ಲ ಎಂದು ಕೊರಗುತ್ತಾ ಕುಳಿತಿರುತ್ತಾರೆ. ಅದರ ಬದಲು ಈ ಟಿಪ್ಸ್ ಫಾಲೋ ಮಾಡಿದರೆ ಸಾಕು.
3/ 7
ನಿಮ್ಮ ಜಾತಕದಲ್ಲಿ ರಾಹು ದೋಷವಿದ್ದರೆ ಮದುವೆ ನಿಧಾನವಾಗಿ ಆಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ನೀವು ದುರ್ಗಾ ದೇವಿಯನ್ನು ಆರಾಧನೆ ಮಾಡಬೇಕು. ಇದರಿಂದ ಮದುವೆಗೆ ಇರುವ ಎಲ್ಲ ಅಡೆತಡೆಗಳನ್ನು ನಿವಾರಣೆಯಾಗುತ್ತದೆ.
4/ 7
ಪ್ರತಿದಿನ ಬೆಳಗ್ಗೆ ಸ್ನಾನದ ನಂತರ ಮತ್ತು ತಿಂಡಿಯ ಮೊದಲು, ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬೇಕು. ಅಲ್ಲದೆ ಕಾರ್ತಿಕ ಮಾಸದ ಸಮಯದಲ್ಲಿ ತುಳಸಿ ವಿವಾಹ ಮಾಡಿಸುವುದು ಮದುವೆ ಸಮಸ್ಯೆಗೆ ಪರಿಹಾರ ನೀಡುತ್ತದೆ.
5/ 7
ನೀವು ನಿಮ್ಮ ಸ್ನಾನದ ನೀರಿಗೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸುವುದರಿಂದ ಮದುವೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ನಿಮಗೆ ಮುಕ್ತಿ ಸಿಗುತ್ತದೆ ಹಾಗೂ ಒಳ್ಳೆಯ ಸಂಬಂಧ ಹುಡುಕಿ ಬರಲಿದೆ.
6/ 7
ಓಂ ಕಾತ್ಯಾಯನಿ ಮಹಾಭಾಗ್ ಮಹಾಯೋಗಿನಿ ಅಧಿಶಿವಾರಿಂ ನಂದ್ ಗೋಪ್ ಸುತಂ ದೇವಿ ಪತಿಯಾಂ ಮೇ ಕುರುತೇ ನಮಃ.ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಮದುವೆ ಬೇಗ ಆಗುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)