Temple Rules: ದೇವಸ್ಥಾನಕ್ಕೆ ಹೋದಾಗ ಈ ರೂಲ್ಸ್ ಫಾಲೋ ಮಾಡಿದ್ರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತೆ
Rules Visiting Temple: ದೇವಸ್ಥಾನಕ್ಕೆ ಹೋಗುವಾಗ ನಾವು ಹೂವು, ಕಾಯಿ ಮತ್ತು ಹಣ್ಣು ಹೀಗೆ ಪೂಜೆಗೆ ಬೇಕಾದ ಕೆಲ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇವೆ. ಹಾಗೆಯೇ ಬಟ್ಟೆಯ ವಿಚಾರದಲ್ಲಿ ಸಹ ಸಣ್ಣ-ಪುಟ್ಟ ನಿಯಮಗಳನ್ನು ಫಾಲೋ ಮಾಡುತ್ತೇವೆ. ಆದರೆ ಇದರ ಜೊತೆ ದೇವಸ್ಥಾನಕ್ಕೆ ಹೋಗುವಾಗ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಮುಖ್ಯ ವಿಚಾರಗಳಿದೆ. ಆ ವಿಚಾರಗಳೇನು ಎಂಬುದು ಇಲ್ಲಿದೆ.
ಶುದ್ಧವಾದ ಬಟ್ಟೆ: ನೀವು ದೇವಸ್ಥಾನಕ್ಕೆ ಹೋಗುವಾಗ ಬಟ್ಟೆಯ ಬಗ್ಗೆ ಕಾಳಜಿವಹಿಸುತ್ತೇವೆ. ಆದರೆ ನೀವು ವಿಶೇಷ ಪೂಜೆ ಮಾಡಿಸುವವರಾಗಿದ್ದರೆ ಹಾಗೂ ಗರ್ಭಗುಡಿ ಪ್ರವೇಶ ಮಾಡುವ ಸಂದರ್ಭ ಇದ್ದರೆ ಬಹಳ ಶುದ್ಧವಾದ ಬಟ್ಟೆ ಧರಿಸಿ ಹೋಗಬೇಕು.
2/ 8
ಪ್ರಸಾದ: ಇನ್ನು ದೇವಸ್ಥಾನಕ್ಕೆ ಹೋದಾಗ ತೀರ್ಥ-ಪ್ರಸಾದ ತೆಗೆದುಕೊಳ್ಳದೇ ಬರಬಾರದು ಎನ್ನಲಾಗುತ್ತದೆ. ಅದರಲ್ಲೂ ಪ್ರಸಾದವನ್ನು ಸ್ವಲ್ಪವಾದರೂ ದೇವಸ್ಥಾನದಲ್ಲಿಯೇ ಕುಳಿತು ತಿಂದು ಬರಬೇಕು. ಹೀಗೆ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತದೆ.
3/ 8
ನೀರು: ದೇವಸ್ಥಾನಕ್ಕೆ ಹೋಗುವಾಗ ನೀವು ಶುದ್ಧವಾದ ನೀರನ್ನು ತೆಗೆದುಕೊಂಡು ಹೋಗಬೇಕು. ಆ ನೀರಿನಿಂದ ದೇವರಿಗೆ ಅಭಿಷೇಕ ಮಾಡುವುದರಿಂದ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.
4/ 8
ಗಂಟೆ ಬಾರಿಸಿ: ದೇವಸ್ಥಾನಕ್ಕೆ ಹೋದಾಗ ಅಲ್ಲಿ ಹಾಕಿರುವ ಗಂಟೆಯನ್ನು ಹೊಡೆಯದೇ ಹೊರಬಾರದು. ಇದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
5/ 8
ದೀಪ ಹಚ್ಚಿ: ದೇವಸ್ಥಾನದಲ್ಲಿ ದೀಪ ಹಚ್ಚುವುದು ಶುಭ ಎನ್ನುವ ನಂಬಿಕೆ ಇದೆ. ಈ ರೀತಿ ದೀಪ ಹಚ್ಚುವುದರಿಂದ ನಿಮ್ಮ ಆಸೆಗಳು ಈಡೇರುವುದರ ಜೊತೆಗೆ ಸಮಸ್ಯೆಗಳು ಸಹ ಪರಿಹಾರವಾಗುತ್ತದೆ. ಹಾಗಾಗಿ ಮಿಸ್ ಮಾಡದೇ ದೀಪ ಹಚ್ಚಿ ಬನ್ನಿ.
6/ 8
ಹೂವು: ದೇವಸ್ಥಾನದಿಂದ ಬರುವಾಗ ಹೇಗೆ ತೀರ್ಥ ಪ್ರಸಾದ ಮರೆಯದೇ ತೆಗೆದುಕೊಂಡು ಬರಬೇಕೋ ಹಾಗೆಯೇ ಹೂವು ತೆಗೆದುಕೊಂಡು ಬರಬೇಕು. ದೇವಸ್ಥಾನದಲ್ಲಿ ಪ್ರಸಾದ ಕೊಡದಿದ್ದರೂ ಸಹ ಹೂವು ಇರುತ್ತದೆ. ಹಾಗಾಗಿ ದೇವಸ್ಥಾನದಿಂದ ಬರುವಾಗ ಖಾಲಿ ಕೈನಲ್ಲಿ ಬರಬಾರದು.
7/ 8
ತಲೆ ಮೇಲೆ ಬಟ್ಟೆ: ನೀವು ದೇವರಿಗೆ ನಮಸ್ಕಾರ ಮಾಡುವಾಗ ತಲೆಯ ಮೇಲೆ ಬಟ್ಟೆ ಹಾಕಿಕೊಂಡರೆ ದೇವರ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಇದು ದೇವರಿಗೆ ಗೌರವ ಕೊಡುವ ಒಂದು ಸಂಪ್ರದಾಯ ಎನ್ನಬಹುದು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)