Astrological Remedy: ಮಕ್ಕಳಿಲ್ಲ ಎಂಬ ಕೊರಗು ಬೇಡ, ಹೀಗೆ ಮಾಡೋದ್ರಿಂದ ಸಂತಾನ ಭಾಗ್ಯ ಪ್ರಾಪ್ತಿ!
Astrological Remedy: ಜೀವನದಲ್ಲಿ ಮಕ್ಕಳು ಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಕೆಲ ದಂಪತಿಗಳಿಗೆ ಬಹಳಷ್ಟು ವರ್ಷಗಳಾದರೂ ಮಕ್ಕಳಾಗುವುದಿಲ್ಲ. ಇದಕ್ಕೆ ನೂರಾರು ಡಾಕ್ಟರ್ ಬಳಿ ಅಲೆಯುತ್ತಾರೆ. ಆದರೂ ಸಾಧ್ಯವಾಗುವುದಿಲ್ಲ. ಡಾಕ್ಟರ್ ಬಳಿ ಹೋಗುವುದರ ಜೊತೆಗೆ ಕೆಲ ಜ್ಯೋತಿಷ್ಯ ಪರಿಹಾರವನ್ನು ಸಹ ಮಾಡುವುದು ಸಂತಾನ ಪ್ರಾಪ್ತಿಯಾಗಲು ಸಹಾಯ ಮಾಡುತ್ತದೆ.
ಒಂದು ಮಗು ಪಡೆಯಬೇಕು ಎನ್ನುವುದು ಎಲ್ಲರ ಕನಸು, ಅದಕ್ಕೆ ಈ ಜ್ಯೋತಿಷ್ಯ ಪರಿಹಾರಗಳು ಸಹಾಯ ಮಾಡುತ್ತದೆ. ಸ್ವಲ್ಪ ಗೋಧಿ ಹಿಟ್ಟಿನ ಹಿಟ್ಟಿನಲ್ಲಿ ನೆನೆಸಿದ ಬೇಳೆ ಮತ್ತು ಅರಿಶಿನವನ್ನು ಮಿಶ್ರಣ ಮಾಡಿ, ಕರು ಇರುವ ಹಸುವಿಗೆ ಒಂದು ವಾರ ತಿನ್ನಿಸಿ.
2/ 8
ಮಿಸ್ ಮಾಡದೇ ದಂಪತಿಗಳು ದೇವಿಯ ಆರಾಧನೆ ಮಾಡಬೇಕು. ಅದರಲ್ಲೂ ಸ್ಕಂದ ಮಾತೆಯ ಪೂಜೆ ಮಾಡುವುದರಿಂದ ಜೀವನದಲ್ಲಿ ಸಂತೋಷ ಹಾಗೂ ಸಂತಾನ ಪ್ರಾಪ್ತಿಯಾಗುತ್ತದೆ. ಅಲ್ಲದೇ, ದೇವಿ ದೇವಸ್ಥಾನಕ್ಕೆ ಕುಂಕುಮ ದಾನ ಮಾಡಿ.
3/ 8
ಓಂ ಶ್ರೀ ಹ್ರೀ ಕ್ಲೀಂ ಗ್ಲೌಂ ದೇವಕೀಸುತ ಗೋವಿಂದ ವಾಸುದೇವ ಜಗತ್ಪತೇ ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ. ಎನ್ನುವ ಈ ಗೋಪಾಲನ ಮಂತ್ರವನ್ನು ಪ್ರತಿದಿನ ಮಹಿಳೆಯರು ಜಪ ಮಾಡುವುದರಿಂದ ಮಕ್ಕಳಾಗಲು ಇರುವ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.
4/ 8
ಹಾಗೆಯೇ ಈ ದಂಪತಿಗಳು ದೇವಿಯ ಜೊತೆ ಬಾಲ ಗೋಲಪಾಲನ ಆರಾಧನೆ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಬಾಲ ಗೋಪಾಲನ ಪೂಜೆ ಮಾಡುವುದರಿಂದ ಆರೋಗ್ಯವಂತೆ ಮಗುವಿನ ಜನನ ಆಗುತ್ತದೆ ಎನ್ನಲಾಗುತ್ತದೆ.
5/ 8
ಗುರುವಿನ ಆಶೀರ್ವಾದ ಇದ್ದರೆ ಯಾವುದೇ ಕೆಲಸವನ್ನು ಸರಾಗವಾಗಿ ಮಾಡಬಹುದು. ಹಾಗಾಗಿ ಮಕ್ಕಳಾಗದೇ ಕೊರಗುವ ಬದಲು ಗುರುವಿನ ಆರಾಧನೆ ಮಾಡುವುದು ಸಹಾಯ ಮಾಡುತ್ತದೆ. ಗುರು ಮಂತ್ರವನ್ನು ಪಠಣೆ ಮಾಡಿ.
6/ 8
ಹಾಗೆಯೇ ರಾಹುವಿನ ಸಮಸ್ಯೆ ಇದ್ದರೆ ಸಹ ಮಕ್ಕಳಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ರಾಹುವಿನ ಕೋಪ ಕಡಿಮೆ ಮಾಡಲು ಪೂಜೆ ಹಾಗೂ ಜಪ ಮಾಡಬೇಕು. ಓಂ ಭ್ರಾಂ ಭ್ರೈಂ ಭ್ರೌಂ ಸಃ ರಾಹವೇ ನಮಃ ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯವಿಮರ್ದನಮ್. ಸಿಂಹಿಕಾಗರ್ಭಸಂಭೂತಂ ರಾಹುಂ ಪ್ರಣಾಮಯ್ಯಮ್ ।ಈ ಮಂತ್ರವನ್ನು ಪ್ರತಿದಿನ ಪಠಣೆ ಂಆಡಬೇಕು.
7/ 8
ಇನ್ನು ಜ್ಯೋತಿಷ್ಯದ ಪ್ರಕಾರ ಜಾತಕದ ಐದನೇ ಮನೆ ಮಗುವಿನ ಸ್ಥಾನ ಎನ್ನಲಾಗುತ್ತದೆ. ಈ ಮನೆಯಲ್ಲಿ ಗ್ರಹಗಳ ಸಮಸ್ಯೆ ಇದ್ದರೆ ಸಹ ಸಂತಾನಕ್ಕೆ ಅಡ್ಡಿಯಾಗುತ್ತದೆ, ಹಾಗಾಗಿ ಜಾತಕ ತೋರಿಸಿ ದೋಷ ನಿವಾರಣೆ ಮಾಡಿಸಿಕೊಳ್ಳಿ,
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)