Astrological Remedies: ಶತ್ರುಗಳ ಕಾಟದಿಂದ ಮುಕ್ತಿ ಪಡೆಯಲು ಈ ಪರಿಹಾರ ಮಾಡಿ ಸಾಕು
Astrological Remedies: ಜೀವನದಲ್ಲಿ ಶತ್ರುಗಳು ಎಲ್ಲರಿಗೂ ಇರುತ್ತಾರೆ. ಅದರಲ್ಲೂ ಆಫೀಸ್ನಲ್ಲಿ ಒಬ್ಬರೊಬ್ಬರ ಬೆಳವಣಿಗೆಯ ಕಂಡರೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುವವರಿರುತ್ತಾರೆ. ಈ ರೀತಿಯ ಶತ್ರುಗಳ ಕಾಟದಿಂದ ಪರಿಹಾರ ಪಡೆಯಲು ಕೆಲ ಜ್ಯೋತಿಷ್ಯ ಸಲಹೆಗಳು ಇಲ್ಲಿದೆ.
ಹಳದಿ ಬಟ್ಟೆ: ನೀವು ಹಳದಿ ಬಟ್ಟೆಯನ್ನು ಹಾಕಿಕೊಂಡು ಆಫೀಸ್ ಹೋಗುವುದರಿಂದ ಶತ್ರುಗಳ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಈ ಹಳದಿ ಬಣ್ಣವು ಶತ್ರುಗಳನ್ನು ನಿಮ್ಮಿಂದ ದೂರ ಇರಲು ಸಹಾಯ ಮಾಡುತ್ತದೆ. ಪ್ರತಿದಿನ ಹಳದಿ ಬಟ್ಟೆ ಧರಿಸಲು ಸಾಧ್ಯವಿಲ್ಲ, ಅದರ ಬದಲು ನೀವು ಹಳದಿ ಬಣ್ಣದ ಸಣ್ಣ ಬಟ್ಟೆಯನ್ನು ಜೊತೆಗೆ ಇಟ್ಟುಕೊಳ್ಳಬಹುದು.
2/ 8
ಶಮಿ ಮರದ ಬೇರು: ಕೆಂಪು ಅಥವಾ ಕಪ್ಪು ಬಣ್ನದ ದಾರದಲ್ಲಿ ನೀವು ಶಮಿ ಮರದ ಬೇರುಗಳನ್ನು ಬಳಸಿ ಮಾಡಿದ ಮಣಿಗಳ ಹಾರವನ್ನು ನೀವು ಧರಿಸುವುದು ಮುಖ್ಯ. ಈ ಮಣಿಗಳ ಹಾರವನ್ನು ನೀವು ಮುಖ್ಯವಾಗಿ ಶನಿವಾರ ಹಾಗೂ ಮಂಗಳವಾರ ಧರಿಸುವುದರಿಂದ ಶತ್ರುಗಳ ಕಾಟ ಪರಿಹಾರವಾಗುತ್ತದೆ.
3/ 8
ಹನುಮಾನ ಚಾಲೀಸ್: ಪ್ರತಿದಿನ ಹನುಮಾನ ಚಾಲೀಸ್ ಪಠಣೆ ಮಾಡುವುದರಿಂದ ಶತ್ರುಗಳ ಕಾಟ ಇರುವುದಿಲ್ಲ. ಅಲ್ಲದೇ ವಾರಕ್ಕೆ ಒಮ್ಮೆಯಾದರೂ ಬೆಲ್ಲವನ್ನು ಹನುಮಂತನಿಗೆ ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ.
4/ 8
ಅಲ್ಲದೇ ಮಂಗಳವಾರ ಹಾಗೂ ಶನಿವಾರ ಹಳದಿ ದಾರವನ್ನು ಹನುಮಂತನಿಗೆ ಅರ್ಪಣೆ ಮಾಡಿ. ಇನ್ನು ನೀವು ಹನುಮಾನ ಚಾಲೀಸ್ ಪಠಣೆ ಮಾಡುವಾಗ ಲವಂಗವನ್ನು ದೇವರ ಮುಂದೆ ಸುಟ್ಟು, ಅದರಿಂದ ತಿಲಕ ಇಟ್ಟುಕೊಳ್ಳುವುದು ತುಂಬಾ ಉತ್ತಮ.
5/ 8
ಧ್ಯಾನ: ಧ್ಯಾನ ಮಾಡುವುದರಿಂದ ಮಾನಸಿಕವಾಗಿ ಶಾಂತಿ ಸಿಗುತ್ತದೆ. ಅಲ್ಲದೇ, ನೆಮ್ಮದಿ ಇದ್ದಾಗ ಯಾವುದೇ ರೀತಿಯ ಕಿರಿಕಿರಿ ಉಂಟಾಗುವುದಿಲ್ಲ. ಇದರಿಂದ ಶತ್ರುಗಳ ಸಮಸ್ಯೆ ಸಹ ಹೆಚ್ಚಾಗುವುದಿಲ್ಲ.
6/ 8
ಕಪ್ಪು ನಾಯಿ: ನೀವು ಶನಿವಾರ ಹಾಗೂ ಮಂಗಳವಾರ ಕಪ್ಪು ನಾಯಿಗೆ ಚಪಾತಿಯನ್ನು ಕೊಡುವುದು ನಿಮಗೆ ಶತ್ರುಗಳ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಅಲ್ಲದೇ ಅವುಗಳಿಗೆ ನೀವು ನೀರನ್ನು ಸಹ ಕೊಡುವುದು ಬಹಳ ಒಳ್ಳೆಯದು.
7/ 8
ದೇವಿಯನ್ನು ಪೂಜಿಸಿ: ನೀವು ಶತ್ರುಗಳ ಕಾಟದಿಂದ ಮುಕ್ತಿ ಪಡೆಯಬೇಕು ಎಂದರೆ ದೇವಿಯನ್ನು ಆರಾಧನೆ ಮಾಡಬೇಕು. ಕಾಳಿ ಪೂಜೆ, ದುರ್ಗಾ ಮಾತೆಯ ಪೂಜೆ ಮಾಡಬೇಕು ಅಲ್ಲದೇ, ಸಿದ್ಧ ಮಹಾಕಾಳಿ ಯಂತ್ರವನ್ನು ಜೊತೆಗೆ ಇಟ್ಟುಕೊಂಡಿರಬೇಕು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)