Debt Removal Tips: ಪಟ್ ಅಂತ ಸಾಲ ತೀರಬೇಕು ಅಂದ್ರೆ ಇಷ್ಟು ಮಾಡಿ ಸಾಕು
Astrological Remedies For debt: ಸಾಲದ ಸಮಸ್ಯೆಯಿಂದ ಬಹುತೇಕರು ಹೈರಾಣಾಗಿರುತ್ತಾರೆ. ವಿವಿಧ ಕಾರಣಗಳಿಂದ ಬ್ಯಾಂಕ್ನಿಂದ ಹಾಗೂ ತಿಳಿದವರಿಂದ ಸಾಲ ಮಾಡಿಕೊಂಡಿರುತ್ತಾರೆ. ನಂತರ ತೀರಿಸಲು ಸಾಧ್ಯವಾಗದೇ ಪರದಾಡುತ್ತಿರುತ್ತಾರೆ. ಈ ರೀತಿ ಸಮಸ್ಯೆಗೆ ಜ್ಯೋತಿಷ್ಯ ಶಾಸ್ತ್ರ ಪರಿಹಾರ ನೀಡುತ್ತದೆ. ಸಾಲದ ಸುಳಿಯಿಂದ ಹೊರಬರಲು ಏನು ಮಾಡಬೇಕು ಎಂಬುದು ಇಲ್ಲಿದೆ.
ಸೂರ್ಯ ಆರಾಧನೆ ಮಾಡುವುದು ನಿಮಗೆ ಜೀವನದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನಿಮ್ಮನ್ನ ಸಾಲದ ಸುಳಿಯಿಂದ ಹೊರತರುವಲ್ಲಿ ಇದು ಸಹಾಯ ಮಾಡುತ್ತದೆ. ಒಂದು ಚೊಂಬು ನೀರಿನಲ್ಲಿ 11 ಕೆಂಪು ಮೆಣಸು ನೆನೆಸಿ, ಬೆಳಗ್ಗೆ ಸೂರ್ಯನಿಗೆ ಅರ್ಪಿಸಿ.
2/ 9
ನಿಮ್ಮ ಮನೆಯ ಸುತ್ತ ಮುತ್ತ ವಿಷ್ಣುವಿನ ದೇವಸ್ಥಾನ ಇದ್ದರೆ ಅಲ್ಲಿ ಹೋಗಿ ಬಾಳೆಗಿಡ ನೆಡುವುದು ಉತ್ತಮ. ಈ ಗಿಡ ಹಣ್ಣು ಬಿಡಲು ಆರಂಭವಾಗುತ್ತಿದ್ದಂತೆಯೇ ನಿಮ್ಮ ಸಾಲುಗಳು ಸಹ ಒಂದೊಂದಾಗಿ ಮುಗಿಯುತ್ತದೆ.
3/ 9
ನಿಮಗೆ ಸೂಕ್ತವಾಗುವ ಜೆಮ್ ಸ್ಟೋನ್ ಧರಿಸುವುದು ನಿಮಗೆ ಸಾಲ ತೀರಿಸಲು ಸಹಾಯ ಮಾಡುತ್ತದೆ. ನಿಮ್ಮ ಜಾತಕ ತೋರಿಸಿ, ಸೂಕ್ತವಾದ ಜೆಮ್ ಸ್ಟೋನ್ ಖರೀದಿಸಿ, ನಂತರ ಮ್ಯಾಜಿಕ್ ನೋಡಿ.
4/ 9
ಕಪ್ಪು ನಾಯಿಗೆ ಆಹಾರ ನೀಡಿ: ನೀವು ಸಾಲದ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ ಪ್ರತಿ ಶನಿವಾರ ಕಪ್ಪು ನಾಯಿಗೆ ಆಹಾರ ನೀಡಿ. ಹಾಗೆಯೇ ಸಮೀಪದ ದೇವಸ್ಥಾನಕ್ಕೆ ಹೋಗಿ ದೇವಿಯ ಮೂರ್ತಿಗೆ ಅಲಂಕಾರ ಮಾಡಿಸಿ.
5/ 9
ಹನುಮಂತನ ಆರಾಧನೆ: ಹನುಮಂತನ ಆರಾಧನೆ ಮಾಡುವುದು ಸಾಲವನ್ನು ಬೇಗ ತೀರಿಸಲು ಸಹಾಯ ಮಾಡುತ್ತದೆ. ಪ್ರತಿದಿನ 108 ಬಾರಿ ಹನುಮಾನ ಚಾಲೀಸ್ ಪಠಣೆ ಮಾಡಿ, ಹೀಗೆ 40 ದಿನ ಮಾಡಿದರೆ ಸಾಲ ತೀರುತ್ತದೆ.
6/ 9
ಅಶೋಕ ಗಿಡ ನೆಡಿ: ನಿಮ್ಮ ಮನೆಯ ಅಂಗಳದಲ್ಲಿ ಅಶೋಕ ಗಿಡವನ್ನು ನೆಡುವುದು ನಿಮಗೆ ಸಾಲದ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಹಾಗೆಯೇ ಪ್ರತಿ ಶುಕ್ರವಾರ ಆಹಾರ ದಾನ ಮಾಡುವುದು ಒಳ್ಳೆಯದು.
7/ 9
ಆಲದ ಮರಕ್ಕೆ ನೀರು ಹಾಕಿ: ನೀವು ಪ್ರತಿದಿನ ಆಲದ ಮರಕ್ಕೆ ನೀರು ಹಾಕಬೇಕು. ಪ್ರತಿದಿನ ಆಗದಿದ್ದರೆ ಕೊನೆಪಕ್ಷ 9 ಶನಿವಾರ ಆಲದ ಮರಕ್ಕೆ ನೀರು ಹಾಕಿ. ಆ ನೀರನ್ನು ಸ್ಮಶಾನದ ಬಾವಿಯಿಂದ ತಂದರೆ ಉತ್ತಮ.
8/ 9
ಹಸುವಿಗೆ ಆಹಾರ ನೀಡುವುದು ನಿಮಗೆ ಸಾಲದ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೇ, ವಾರಕ್ಕೆ 2 ಬಾರಿ ತೆಂಗಿನ ಕಾಯಿ ಬೆಲ್ಲ ನೀಡುವುದು ಒಳ್ಳೆಯದು.
9/ 9
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)