Daily Horoscope: ಜೀವನವೇ ಬದಲಾಗೋ ಘಟನೆಯೊಂದು ನಡೆಯಲಿದೆ, ಈ ರಾಶಿಯವರಿಗೆ ನೆಮ್ಮದಿ ಸಿಗಲಿದೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಈಗಾಗಲೇ ಮಾಡಿರುವ ನಿರ್ಧಾರದ ಬಗ್ಗೆ ಮತ್ತೆ ಚಿಂತನೆ ಮಾಡುವ ಅವಶ್ಯಕತೆ ಇದೆ. ಯಾವುದೇ ಸ್ವಾರ್ಥವಿಲ್ಲದೇ ಬೇರೆಯವರಿಗೆ ಸಹಾಯ ಮಾಡುವುದು ಮುಂದಿನ ದಿನಗಳಲ್ಲಿ ಲಾಭ ನೀಡುತ್ತದೆ. ಈಗಾಗಲೇ ಸಹಾಯ ಮಾಡಿರುವ ವ್ಯಕ್ತಿ ಇಂದು ನಿಮಗೆ ಮತ್ತೆ ಸಹಾಯ ಮಾಡಬಹುದು. ಅದೃಷ್ಟದ ಸಂಖ್ಯೆ: ಏಪ್ರಿಕಾಟ್ ಹಣ್ಣು
2/ 12
ವೃಷಭ: ನಿಮ್ಮ ಮನಸ್ಸಿನಲ್ಲಿರುವ ಭಾವನೆಯನ್ನು ವ್ಯಕ್ತಪಡಿಸಲು ಇಂದು ಒಳ್ಳೆಯ ದಿನ. ಈಗಾಗಲೇ ಈ ರೀತಿ ಅವಕಾಶ ಸಿಕ್ಕಿದ್ದರು ಶಕ್ತಿ ಇರಲಿಲ್ಲ. ನಿಮ್ಮ ಮಾತುಗಳನ್ನು ಹೇಳಿಕೊಂಡು ಹೃದಯವನ್ನು ಹಗುರ ಮಾಡಿಕೊಳ್ಳಿ. ಅದೃಷ್ಟದ ಚಿಹ್ನೆ: ಕಪ್ಪು ಬಟ್ಟೆ
3/ 12
ಮಿಥುನ: ಇಂದು ನಿಮ್ಮ ಕಾರ್ಯಕ್ಷಮತೆ ಒಂದು ಕಷ್ಟದ ಕೆಲಸವನ್ನು ಸುಲಭ ಮಾಡುತ್ತದೆ. ನಿಮ್ಮ ಕೆಲಸದ ವೈಖರಿ ಹಾಗೂ ಪರಿಶ್ರಮವನ್ನು ಇಂದು ಎಲ್ಲರೂ ಗುರುತಿಸಲಿದ್ದಾರೆ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿಯ ಅವಶ್ಯಕತೆ ಇದೆ. ಅದೃಷ್ಟದ ಚಿಹ್ನೆ: ಸೆಣಬಿನ ಬ್ಯಾಗ್
4/ 12
ಕಟಕ: ನಿಮಗೆ ನಿಮ್ಮ ಕೆಲಸ ಜಾಸ್ತಿ ಎಂದು ಅನಿಸುತ್ತದೆ, ಆದರೆ ಇಷ್ಟು ಸಾಕಾಗುವುದಿಲ್ಲ. ಅತಿಯಾದ ಪರಿಶ್ರಮದ ಅಗತ್ಯವಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಇಂದು ಪ್ರಶಂಸೆ ಸಿಗುತ್ತದೆ. ಅದೃಷ್ಟದ ಚಿಹ್ನೆ: ಪುಸ್ತಕ
5/ 12
ಸಿಂಹ: ಈ ದಿನ ನಿಜಕ್ಕೂ ನಿಮಗೆ ಬಹಳ ಒಳ್ಳೆಯ ಅನುಭವ ನೀಡುತ್ತದೆ. ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಇಂದು ನಿಮ್ಮನ್ನ ಹುಡುಕಿಬರಲಿದೆ. ನೀವು ಗೊಂದಲ ಮಾಡಿಕೊಳ್ಳದೇ ಎಲ್ಲವನ್ನೂ ಸರಿಯಾಗಿ ನಿಭಾಯಿಸುವುದು ಮುಖ್ಯ. ಅದೃಷ್ಟದ ಚಿಹ್ನೆ: ನವಿಲು ಗರಿ
6/ 12
ಕನ್ಯಾ: ನಿಮ್ಮ ಜೀವನದಲ್ಲಿ ನಡೆದ ಹಳೆಯ ಕಹಿ ಘಟನೆಗಳು ಕಲೆಯನ್ನು ಉಳಿಸಿ ಹೋಗಿದೆ ಎನ್ನಬಹುದು. ಆದರೆ ಅದನ್ನು ಮರೆತು ಮುಂದೆ ಹೋಗುವುದು ಜೀವನ ಎಂಬುದನ್ನ ಮರೆಯಬೇಡಿ. ಇಂದು ನಿಮಗಾಗಿ ಒಂದು ಸರ್ಪ್ರೈಸ್ ಕಾದಿದೆ ಎನ್ನಬಹುದು. ಅದೃಷ್ಟದ ಚಿಹ್ನೆ: ಹಳದಿ ಬಾಕ್ಸ್
7/ 12
ತುಲಾ: ನಿಮ್ಮ ಬಗ್ಗೆ ಕೆಲ ವಿಚಾರಗಳು ಹಲವಾರು ಕಡೆ ಸುದ್ದಿಯಾಗುತ್ತದೆ. ಜೀವನದಲ್ಲಿ ಎಂದಿಗೂ ಭೇಟಿಯಾಗದ ವ್ಯಕ್ತಿ ನಿಮ್ಮನ್ನ ಭೇಟಿ ಮಾಡಲು ಬಯಸುತ್ತಾರೆ. ನಿಮಗೆ ಯಾರು ಮುಖ್ಯವಾಗುತ್ತಾರೋ ಆ ವ್ಯಕ್ತಿಗಾಗಿ ಸಮಯವನ್ನು ಮೀಸಲಿಡಿ. ಆಫೀಸ್ನಲ್ಲಿ ಕೆಲ ಸವಾಲುಗಳು ಎದುರಾಗಬಹುದು. ಅದೃಷ್ಟದ ಚಿಹ್ನೆ: ಪಿರಮಿಡ್
8/ 12
ವೃಶ್ಚಿಕ: ನಿಮ್ಮ ಜೀವನವನ್ನು ಬದಲಾಯಿಸುವ ಘಟನೆಯೊಂದು ಆಗಲಿದೆ. ಆಫೀಸ್ನಲ್ಲಿ ಪ್ರಶಂಸೆ ಗಳಿಸುವ ಸಾಧ್ಯತೆ ಇದೆ. ಒಂದು ಸಣ್ಣ ಟ್ರಿಪ್ ಮಾಡಿ. ನಿಮ್ಮ ಸಂಗಾತಿಯ ಜೊತೆ ಸಮಯವನ್ನು ಮೀಸಲಿಡಿ. ಅದೃಷ್ಟದ ಚಿಹ್ನೆ: ಕಪ್ಪು ವಸ್ತು
9/ 12
ಧನಸ್ಸು: ನಿಮಗೆ ಪರಿಹಾರ ಪಡೆಯಲು ಅಥವಾ ಮರೆಯಲು ಸಾಧ್ಯವಾಗುವುದಿಲ್ಲ ಎಂದರೂ ಸಹ ಎಲ್ಲವನ್ನೂ ಮರೆತು ಮುಂದೆ ಹೋಗುವುದೇ ಜೀವನ ಎಂಬುದು ನೆನಪಿರಲಿ. ನಿಮ್ಮ ಜೊತೆ ಕೆಲಸ ಮಾಡಲು ಹೊಸ ವ್ಯಕ್ತಿ ಕೈ ಜೋಡಿಸಬಹುದು. ಅದೃಷ್ಟದ ಚಿಹ್ನೆ: ಟ್ರಂಕ್
10/ 12
ಮಕರ: ಬಹಳ ದಿನಗಳ ನಂತರ ರಿಲ್ಯಾಕ್ಸ್ ಭಾವನೆ ನಿಮ್ಮಲ್ಲಿ ಮೂಡುತ್ತದೆ. ನಿಮಗಾಗಿ ಸಮಯ ಮೀಸಲಿಡುವುದು ಮುಖ್ಯವಾಗುತ್ತದೆ. ನಿಮ್ಮ ಸಹೋದರ ಅಥವಾ ಸಹೋದರಿಗೆ ಹಣಕಾಸಿನ ಸಮಸ್ಯೆ ಕಾಡಬಹುದು. ಅದೃಷ್ಟದ ಚಿಹ್ನೆ: ರೇಷ್ಮೇ ದಾರ
11/ 12
ಕುಂಭ: ಹೊಸ ಕೆಲಸದ ಅವಕಾಶವೊಂದು ನಿಮ್ಮನ್ನ ಹುಡುಕಿ ಬರಲಿದೆ. ಇದನ್ನು ಗಂಭಿರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇದೆ. ನಿಮ್ಮ ಕುಟುಂಬಕ್ಕೆ ಸಮಯವನ್ನು ಮೀಸಲಿಡುವುದು ಬಹಳ ಮುಖ್ಯ. ಹಣದ ಹರಿವಿನ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ವಾಚ್
12/ 12
ಮೀನ: ನಿಮ್ಮ ಪರಿಶ್ರಮ ಹಾಗೂ ಸರಳತೆಯ ಕಾರಣದಿಂದ ನಿಮ್ಮ ಕೆಲಸ ಸುಲಭವಾಗುತ್ತದೆ. ಜನರಿಂದ ಏನೇ ಭಯಸಿದರೂ ಸಹ ನಿಮಗೆ ನೋವಾಗುವ ಸಾಧ್ಯತೆ ಇದೆ. ಒಂದು ಸಣ್ಣ ಪಾರ್ಟಿ ಅಟೆಂಡ್ ಮಾಡುವ ಅವಶ್ಯಕತೆ ಇದೆ. ಅದೃಷ್ಟದ ಚಿಹ್ನೆ: ಪಾರಿವಾಳ