Astrological Remedy: ಕಣ್ಣಿಗೆ ಕಾಡಿಗೆ ಹಚ್ಚಿದ್ರೆ ಈ ದೋಷಗಳಿಂದ ಸಿಗಲಿದೆ ಪರಿಹಾರ
Kajal Benefits: ಸಾಮಾನ್ಯವಾಗಿ ಮಹಿಳೆಯರು ಕಣ್ಣಿಗೆ ಕಾಡಿಗೆ ಹಚ್ಚುತ್ತಾರೆ. ಇದು ಅವರ ಅಂದವನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆಯೇ ಪುಟ್ಟ ಮಕ್ಕಳಿಗೆ ಸಹ ಕಾಡಿಗೆಯನ್ನು ಹಚ್ಚಲಾಗುತ್ತದೆ. ಈ ರೀತಿ ಕಾಡಿಗೆ ಹಚ್ಚುವುದರಿಂದ ಹಲವಾರು ದೋಷಗಳಿಗೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಈ ಕಾಡಿಗೆಯ ಪ್ರಯೋಜನಗಳೇನು ಎಂಬುದು ಇಲ್ಲಿದೆ.
ಗ್ರಹ ದೋಷ ಪರಿಹಾರವಾಗುತ್ತದೆ: ಶನಿ, ರಾಹು ಮತ್ತು ಕೇತುಗಳ ದೋಷ ಎಂದರೆ ಎಲ್ಲರಿಗೂ ಭಯವಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಮಾಡುತ್ತಾರೆ. ಆದರೆ ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಈ 3 ಗ್ರಹಗಳ ದೋಷದಿಂದ ಮುಕ್ತಿ ಸಿಗುತ್ತದೆ.
2/ 7
ಮಂಗಳ ದೋಷ: ನಿಮ್ಮ ಜಾತಕದಲ್ಲಿ ಮಂಗಳ ದೋಷ ಇದ್ದರೆ ಸಮಸ್ಯೆಗಳು ಜಾಸ್ತಿ ಆಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ಈ ದೋಷ ಇದ್ದಲ್ಲಿ ಕಪ್ಪು ಕಾಡಿಗೆಯನ್ನು ಹಚ್ಚುವುದು ಪರಿಹಾರ ನೀಡುತ್ತದೆ ಎನ್ನುವ ನಂಬಿಕೆ ಇದೆ.
3/ 7
ಕಾಡಿಗೆ ದಾನ ಮಾಡಿ: ರಾಹು ಕಾಟ ಆರಂಭವಾದರೆ ಏನೆಲ್ಲಾ ಆಗುತ್ತದೆ ಎಂಬುದನ್ನ ನಾವು ಹೇಳುವುದು ಬೇಡ. ನಿಮ್ಮ ಜಾತಕದಲ್ಲಿ ರಾಹು ಕಾಟ ಇದ್ದರೆ ನೀವು ಕಾಡಿಗೆಯನ್ನು ಇತರರಿಗೆ ದಾನ ಮಾಡಬೇಕು.
4/ 7
ದೇವಸ್ಥಾನಕ್ಕೆ ಕಾಡಿಗೆ ದಾನ ಮಾಡಿ: ಶನಿ ದೋಷ ಎನ್ನುವುದು ನಮ್ಮ ಜೀವನವನ್ನು ಮೇಲೆ-ಕೆಳಗೆ ಮಾಡುತ್ತದೆ. ಸುಮಾರು 7 ವರ್ಷಗಳಿಗಿಂತ ಹೆಚ್ಚು ಕಾಲ ಕಾಟಕೊಡುತ್ತದೆ. ಹಾಗಾಗಿ ನಿಮಗೆ ಸಾಡೇಸಾತಿ ಸಮಸ್ಯೆ ಇದ್ದರೆ ದೇವಸ್ಥಾನಕ್ಕೆ ಕಾಡಿಗೆಯನ್ನು ದಾನ ಮಾಡಿ.
5/ 7
ಸಂಸಾರದ ಸಮಸ್ಯೆಗೆ: ಈ ಕಾಡಿಗೆ ನಿಮ್ಮ ಸಂಸಾರದಲ್ಲಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ನಿಮ್ಮ ಮನೆಯಲ್ಲಿ ಪದೇ ಪದೇ ಕಿರಿಕಿರಿ ಆಗುತ್ತಿದ್ದರೆ ಒಂದು ತೆಂಗಿನಕಾಯಿಯನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ, ಅದರ ಮೇಲೆ ಕಾಡಿಗೆಯಿಂದ 21 ಚುಕ್ಕಿ ಮಾಡಿ ಶನಿವಾರ ಮನೆಯ ಮುಖ್ಯ ಬಾಗಿಲಿಗೆ ಕಟ್ಟಬೇಕು.
6/ 7
ಉದ್ಯೋಗದ ಸಮಸ್ಯೆಗೆ: ಹಲವಾರು ಜನರಿಗೆ ಆಫೀಸ್ನಲ್ಲಿ ಸಮಸ್ಯೆ ಆದರೆ, ಇನ್ನೂ ಕೆಲವರಿಗೆ ಕೆಲಸ ಸಿಗದೇ ಪರದಾಡುತ್ತಿದ್ದಾರೆ. ಇದಕ್ಕೆ ಪರಿಹಾರ ಬೇಕು ಎಂದರೆ ಶನಿವಾರ ಯಾರೂ ಇಲ್ಲದ ಸ್ಥಳದಲ್ಲಿ ಕಾಡಿಗೆಯ ಉಂಡೆಯನ್ನು ಹಾಕಿದರೆ ಸಾಕು,
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)