Astrological Prediction 2023: ಹೊಸವರ್ಷದಲ್ಲಿ ಈ ರಾಶಿಯವರಷ್ಟು ಕಷ್ಟ ಇನ್ಯಾರಿಗೂ ಇರಲ್ವಂತೆ
Aquarius 2023: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ಕುಂಭ ರಾಶಿಯವರಿಗೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು
ಕುಂಭ ರಾಶಿಯವರಿಗೆ ಸಹ ಈ ಹೊಸವರ್ಷ ಅಂದರೆ 2023 ಕಷ್ಟಗಳ ಸರಮಾಲೆಯನ್ನು ತರಬಹುದು. ಅದನ್ನು ಎದುರಿಸುವುದು ಬಹಳ ಅಗತ್ಯವಾಗುತ್ತದೆ. ಧೈರ್ಯದಿಂದಿರಿ.
2/ 7
ಹಾಗೆಯೇ, ಜನ್ಮ ಶನಿಯು ಮೂರರ ಗುರುವಿನ ಪ್ರಭಾವದಿಂದಾಗಿ ಈ ಸಂವತ್ಸರದಲ್ಲಿ ಪ್ರಾಯಶಃ ನಿಮ್ಮಷ್ಟು ಕಷ್ಟಗಳನ್ನು ಎದುರಿಸುವವರು ಯಾರು ಇಲ್ಲ ಎಂದೇ ಹೇಳಬಹುದು.
3/ 7
ಸಾಡೇಸಾತಿನ ಮಧ್ಯಮ ಪರ್ಯಾಯದಲ್ಲಿರುವ ನಿಮಗೆ ಹೊರಟ ಕಾರ್ಯಗಳಲ್ಲಿ ಅಪಜಯ ಕಟ್ಟಿಟ್ಟ ಬುತ್ತಿ ಎನ್ನಬಹುದು. ಹಾಗೆಯೇ ತಲೆಯ ಭಾಗದ ಕಾಯಿಲೆಗಳು ಸಹ ಬೆನ್ನು ಬೀಳುತ್ತವೆ.
4/ 7
ಈ ವರ್ಷದಲ್ಲಿ ದುಃಖ ದುಮ್ಮಾನ ಅಪಕೀರ್ತಿ ಮತ್ತು ಅಪವಾದ ಮಾಮೂಲಿ ಎನ್ನುವಂತಾಗುತ್ತದೆ. ಅಲ್ಲದೇ ಈ ಸಮಯದಲ್ಲಿ ಸ್ಥಾನಪಲ್ಲಟ ಅಥವಾ ಸ್ಥಾನಭಂತ್ರಿಕ ಕೊರತೆ ಉಂಟಾಗುತ್ತದೆ. ವಾತ ಪ್ರಭಾವದಿಂದ ದೇಹದ ಎಲ್ಲಾ ಭಾಗಗಳಲ್ಲಿ ನೋವು ಉಂಟಾಗುತ್ತದೆ.
5/ 7
ಸಣ್ಣವರಲ್ಲಿ ಸಣ್ಣವರಾಗುವ ಯೋಗವಿದೆ ಎಂದರೆ ತಪ್ಪಲ್ಲ. ಬಂಧು ಬಾಂಧವರಲ್ಲಿ ವಿರೋಧಗಳಿದ್ದರೂ ಸಹೋದರರಿಂದ ಸಹಾಯ ನೆಮ್ಮದಿ ಸಿಗುತ್ತದೆ. ಸ್ವಲ್ಪ ಉಸಿರಾಡಲು ಇದು ಅವಕಾಶ ನೀಡುತ್ತದೆ ಎನ್ನಬಹುದು.
6/ 7
2023ರಲ್ಲಿ ನಿಮ್ಮಿಂದ ಸಹಾಯ ಪಡೆದವರೇ ನಿಮಗೆ ಬೆನ್ನಿಗೆ ಚೂರಿ ಇರಿಯಲ್ಲಿದ್ದಾರೆ. ಹಣಕಾಸಿನ ಪರಿಸ್ಥಿತಿಯಂತೂ ತುಂಬಾ ಕಳಪೆ ಆಗಬಹುದು. ಎಷ್ಟು ದುಡಿದರು ಸಾಲ ಕಟ್ಟಲು ಸಾಲದು ಎಂಬ ಸ್ಥಿತಿ ನಿರ್ಮಾಣವಾಗಲಿದೆ.
7/ 7
ವ್ಯವಹಾರಸ್ಥರಿಗೆ ಕೆಲಸದವರಿಂದ ವಂಚನೆಯ ಭೀತಿ ಇದ್ದು, ವಿಪರೀತ ನಷ್ಟಗಳು ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿದ್ದವರಿಗೆ ಪದೇ ಪದೇ ಟ್ರಾನ್ಸ್ಫರ್ ಹಾಗೂ ಮೇಲಧಿಕಾರಿಗಳಿಂದ ಕಿರಿಕಿರಿ ತಪ್ಪಲಿಕ್ಕಿಲ್ಲ, ಮಹಾದೇವನ ಜೊತೆಗೆ ಶನೇಶ್ವರನನ್ನು ನಿರಂತರವಾಗಿ ಆರಾಧಿಸಿ.