Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಅದೃಷ್ಟವೇ ಬದಲಾಗುತ್ತೆ

Aquarium Rules: ಮನೆಯಲ್ಲಿ ಅಕ್ವೇರಿಯಂ ಇಟ್ಟುಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಲು ಕೆಲವೊಂದು ನಿಯಮಗಳಿದೆ. ಅದರಲ್ಲೂ ಫೆಂಗ್ ಶೂಯಿ ಪ್ರಕಾರ ನಾವು ನಿಯಮಗಳನ್ನು ಫಾಲೋ ಮಾಡುವುದರಿಂದ ಜೀವನದಲ್ಲಿ ಒಳ್ಳೆಯದಾಗುತ್ತದೆ.

First published:

  • 18

    Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಅದೃಷ್ಟವೇ ಬದಲಾಗುತ್ತೆ

    ಫೆಂಗ್ ಶೂಯಿ ಪ್ರಕಾರ ಈ ಅಕ್ವೇರಿಯಂ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಬದಲಾಗುತ್ತದೆ ಎನ್ನಲಾಗುತ್ತದೆ. ಆದರೆ ಅಕ್ವೇರಿಯಂ ಅನ್ನು ಮನೆಯಲ್ಲಿ ಇಟ್ಟುಕೊಳ್ಳುವ ಯಾವ ನಿಯಮಗಳನ್ನು ಫಾಲೋ ಮಾಡಬೇಕು ಎಂಬುದು ಇಲ್ಲಿದೆ.

    MORE
    GALLERIES

  • 28

    Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಅದೃಷ್ಟವೇ ಬದಲಾಗುತ್ತೆ

    ಶುದ್ಧವಾಗಿರಬೇಕು: ಯಾವಾಗಲೂ ಮನೆಯಲ್ಲಿರುವ ಅಕ್ವೇರಿಯಂ ಶುದ್ದವಾಗಿರಬೇಕು. ಇದು ಮನೆಯಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಹಾಗಾಗಿ ಯಾವಾಗಲೂ ನಿಮ್ಮ ಮನೆಯ ಅಕ್ವೇರಿಯಂ ಅನ್ನು ವಾರಕ್ಕೆ ಒಮ್ಮೆಯಾದರೂ ಸ್ವಚ್ಛ ಮಾಡಿ. ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.

    MORE
    GALLERIES

  • 38

    Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಅದೃಷ್ಟವೇ ಬದಲಾಗುತ್ತೆ

    ಸರಿಯಾಗಿ ನಿರ್ವಹಣೆ ಮಾಡಿ: ಯಾವಾಗಲೂ ಅಕ್ವೇರಿಯಂ ಅನ್ನು ಸರಿಯಾಗಿ ನಿರ್ವಹಿಸುವುದು ಅಗತ್ಯ. ಅತಿಯಾಗಿ ಆಹಾರ ಹಾಕಬಾರದು, ನೀರನ್ನು ಪದೇ ಪದೇ ಬದಲಾಯಿಸಬೇಕು. ಅಲ್ಲದೇ, ಮೀನುಗಳಿಗೆ ಯಾವುದೇ ರೀತಿಯ ಸಮಸ್ಯೆ ಮಾಡಬಾರದು.

    MORE
    GALLERIES

  • 48

    Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಅದೃಷ್ಟವೇ ಬದಲಾಗುತ್ತೆ

    ಮೀನಿನ ಸಂಖ್ಯೆ ಅಗತ್ಯ: ಒಂದು ಮೀನಿದ್ದರೆ ಅದು ಹೊಸ ಆರಂಭದ ಸಂಕೇತವಂತೆ. ಹಾಗೆಯೇ, ಮೂರು ಮೀನುಗಳಿದ್ದರೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 58

    Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಅದೃಷ್ಟವೇ ಬದಲಾಗುತ್ತೆ

    ಮೀನಿನ ಸಂಖ್ಯೆ ಅಗತ್ಯ: ಅಷ್ಟೇ ಅಲ್ಲದೇ ಆರು ಮೀನುಗಳಿದ್ದರೆ ಅದೃಷ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ, ಎಂಟು ಮೀನಿದ್ದರೆ ಹಣ ಮತ್ತು ಸಮೃದ್ಧಿ ನಿಮ್ಮನ್ನ ಹುಡುಕಿ ಬರಲಿದೆ. ಜೊತೆಗೆ ಒಂಬತ್ತು ಮೀನುಗಳು ಇದ್ದರೆ ದೀರ್ಘಾಯುಷ್ಯದ ಸಂಕೇತ ಎನ್ನಲಾಗುತ್ತದೆ.

    MORE
    GALLERIES

  • 68

    Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಅದೃಷ್ಟವೇ ಬದಲಾಗುತ್ತೆ

    ಯಾವ ಮೀನು ಮುಖ್ಯ? ಗೋಲ್ಡ್ ಫಿಷ್, ಅರೋವಾನಾ ಮತ್ತು ಕಪ್ಪು ಮೂರ್ ಮೀನುಗಳನ್ನು ಮನೆಯ ಅಕ್ವೇರಿಯಂನಲ್ಲಿ ಇಟ್ಟುಕೊಳ್ಳುವುದರಿಂದ ಒಳ್ಳೆಯದಾಗುತ್ತದೆ. ಈ ಮೀನುಗಳು ನಿಮ್ಮ ಮನೆಯಿಂದ ನೆಗೆಟಿವ್ ಎನರ್ಜಿ ಹೆಚ್ಚಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 78

    Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಅದೃಷ್ಟವೇ ಬದಲಾಗುತ್ತೆ

    ಒಂದು ಕಪ್ಪು ಗೋಲ್ಡ್ ಫಿಷ್ ಯಾವಾಗಲೂ ಇರಲೇಬೇಕು ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಯಾವುದೇ ಕಷ್ಟ ಬರುವುದಿಲ್ಲ ಎಂಬ ನಂಬಿಕೆ ಇದೆ. ಹಾಗೆಯೇ, ಮೀನು ಸತ್ತರೆ ತಕ್ಷಣ ತೆಗೆದುಹಾಕಬೇಕು. ಹೆಚ್ಚು ಸಮಯ ಅದನ್ನು ಇಟ್ಟುಕೊಳ್ಳಬಾರದು.

    MORE
    GALLERIES

  • 88

    Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಅದೃಷ್ಟವೇ ಬದಲಾಗುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES