Zodiac Sign: ಸಿಟ್ಟು ಎಂಬುದು ಮೂಗಿನ ತುದಿಯಲ್ಲೇ ಇರುತ್ತಂತೆ ಈ ರಾಶಿಯವರಿಗೆ
ಕೋಪ (Angry) ಎಂದಿಗೂ ಯಾರಿಗೂ ಒಳ್ಳೆಯದಲ್ಲ. ಎಷ್ಟೇ ಕೋಪ ಮಾಡಿಕೊಳ್ಳಬಾರದು ಎಂದು ಅಂದುಕೊಂಡರು ಕೆಲವೊಮ್ಮೆ ಹೆಚ್ಚುತ್ತಿರುವ ಒತ್ತಡ (Stress) ಮತ್ತು ಬದಲಾಗುತ್ತಿರುವ ಜೀವನ ಶೈಲಿಯಲ್ಲಿ (Lifestyle) ಕೋಪ ಬಂದು ಬಿಡುತ್ತದೆ. ಇದರ ಹೊರತಾಗಿ ಕೆಲವರು ಮಾತು ಮಾತಿಗೂ ಸಿಟ್ಟಾಗುತ್ತಾರೆ. ಅವರ ಈ ಕೋಪಕ್ಕೆ ಕಾರಣ ಅವರ ಜನ್ಮ ರಾಶಿ. ರಾಶಿ ಚಕ್ರದ (Zodiac Sign) ಅನುಸಾರ ಇವರಿಗೆ ಕೋಪ ಹೆಚ್ಚು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ..
ಮೇಷ ರಾಶಿ: ಮಂಗಳನಿಂದ ಆಳಲ್ಪಡುವ ಅಗ್ನಿ ರಾಶಿಯಾಗಿರುವುದರಿಂದ, ಮೇಷ ರಾಶಿಯು ಶೀಘ್ರವಾಗಿ ಕೋಪಗೊಳ್ಳುತ್ತಾರೆ. ಆದಾಗ್ಯೂ, ಇದು ತ್ವರಿತವಾಗಿ ಶಾಂತಗೊಳ್ಳುವ ಮನೋಭಾವ ಈ ರಾಶಿಯವರದು. ಕೋಪಗೊಂಡಿರುವಾಗ, ಮೇಷ ರಾಶಿಯವರ ಮಾತು ಹೆಚ್ಚು ತೀಕ್ಷ್ಣವಾಗಿರುತ್ತದೆ\
2/ 5
ವೃಷಭ ರಾಶಿ: ಗೂಳಿಯ ಸ್ವಭಾವದ ಈ ರಾಶಿಯವರನ್ನು ಪ್ರಚೋದಿಸುವವರೆಗೂ ತಾಳ್ಮೆಯಿಂದ ಇರುತ್ತಾರೆ. ಅವರ ಒಮ್ಮೆ ತಾಳ್ಮೆ ಕಳೆದುಕೊಂಡು ಕೋಪಕ್ಕೆ ಒಳಗಾದರೆ ಅವರು ಮತ್ತೆ ಶಾಂತವಾಗಲು ಬಹಳ ಸಮಯ ಬೇಕು
3/ 5
ಮಿಥುನ ರಾಶಿ: ಯಾವುದೇ ವಿಷಯದಲ್ಲೂ ಕೋಪಗೊಂಡರೂ ಅದರಿಂದ ಬೇಗ ಹೊರಬರುತ್ತಾರೆ. ಅಲ್ಲದೇ ಈ ಕೋಪವನ್ನು ದೀರ್ಘ ಕಾಲದವರೆಗೂ ಇಟ್ಟುಕೊಳ್ಳದೇ ಶೀಘ್ರದಲ್ಲೇ ಮರೆತು ಬಿಡುತ್ತಾರೆ
4/ 5
ಕಟಕ ರಾಶಿ: ಈ ರಾಶಿಯವರು ಕೋಪ ಬಂದಾಗ ಕೊಂಚ ಹೆಚ್ಚಾಗಿ ಆಕ್ರಮಣ ಹೊಂದುವ ಸ್ವಭಾವ ಹೊಂದಿರುತ್ತಾರೆ. ಅಲ್ಲದೇ ಈ ಎದುರಿಗಿರುವವರೆ ಬಗ್ಗೆ ಯಾವುದೇ ಮಾತನ್ನು ಇವರು ಕೇಳುವ ಮನಸ್ಥಿತಿ ಹೊಂದಿರುವುದಿಲ್ಲ. ಹೆಚ್ಚು ಭಾವನಾತ್ಮಕವಾಗಿಯೂ ಕೂಡ ಇವರಿರುತ್ತಾರೆ
5/ 5
ಸಿಂಹ ರಾಶಿ: ಸೂರ್ಯನಿಂದ ಆಳಲ್ಪಡುವ ಮತ್ತು ಬೆಂಕಿಯ ಸಂಕೇತವಾಗಿರುವುದರಿಂದ ಈ ರಾಶಿಯವರು ಕೋಪಗೊಂಡಾಗ ಹೆಚ್ಚು ಆಕ್ರಮಣಶೀಲರಾಗಿರುತ್ತಾರೆ. ಇವರ ಕೋಪ ಶಮನ ಸರಳವಾಗಿರುವುದಿಲ್ಲ.