Sankashta Chaturthi: ಅಂಗಾರಕ ಸಂಕಷ್ಟಿ ದಿನ ಈ ರೀತಿ ಪೂಜೆ ಮಾಡಿದ್ರೆ ಸಂಕಷ್ಟಗಳೆಲ್ಲಾ ನಿವಾರಣೆ
Sankashta Chaturthi 2023: ಮಂಗಳವಾರ ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟಿ ಎಂದು ಕರೆಯಲಾಗುತ್ತದೆ. ಈ ದಿನ ಉಪವಾಸ ಮಾಡಿ ವ್ರತ ಆಚರಣೆ ಮಾಡಿದರೆ ಜೀವನದಲ್ಲಿರುವ ಸಮಸ್ಯೆಗಳೆಲ್ಲಾ ಮಾಯವಾಗುತ್ತೆ ಎನ್ನಲಾಗುತ್ತದೆ. ಈ ದಿನ ಗಣೇಶನ ಪೂಜೆ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಈ ವರ್ಷದ ಮೊದಲ ಸಂಕಷ್ಟಿ ಮಂಗಳವಾರವೇ ಬಂದಿದ್ದು ಬಹಳ ವಿಶಿಷ್ಟವಾಗಿದ್ದು, ಪುಷ್ಯ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯು ಜನವರಿ 10 ರಂದು ಮಧ್ಯಾಹ್ನ 12:09 ರಿಂದ ಆರಂಭವಾಗಿ, ಬುಧವಾರ 2023 ಜನವರಿ 11 ರಂದು ಮಧ್ಯಾಹ್ನ 02:31 ಕ್ಕೆ ಮುಗಿಯುತ್ತದೆ.
2/ 8
ಈ ದಿನ ಚಂದ್ರ ಹಾಗೂ ಗಣೇಶನ ಆರಾಧನೆ ಮಾಡುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಮಧ್ಯಾಹ್ನ 12:29 ರಿಂದ ಮಧ್ಯಾಹ್ನ 01:47 ಈ ಸಮಯದಲ್ಲಿ ಪೂಜೆ ಮಾಡಿದರೆ ಕಷ್ಟಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.
3/ 8
ಸಂಕಷ್ಟ ಚತುರ್ಥಿ ವ್ರತ ಚಂದ್ರ ದರ್ಶನ ಆಗದಿದ್ದರೆ ಅಪೂರ್ಣ ಎನ್ನಲಾಗುತ್ತದೆ. ಈ ಬಾರಿ ಚಂದ್ರ ರಾತ್ರಿ 08.41 ನಿಮಿಷಕ್ಕೆ ಉದಯಿಸಲಿದ್ದು, ಚಂದ್ರನ ದರ್ಶನ ಮಾಡಿ ಉಪವಾಸ ಪೂರ್ಣಗೊಳಿಸಬೇಕು. ಈ ಬಾರಿ ಸಂಕಷ್ಟಿಯ ದಿನ ಸರ್ವಾರ್ಥ ಸಿದ್ಧಿ ಯೋಗದಂತೆ ಪ್ರೀತಿ ಯೋಗ, ಆಯುಷ್ಮಾನ್ ಯೋಗವು ರೂಪುಗೊಳ್ಳುತ್ತದೆ.
4/ 8
ಮಂಗಳವಾರ ಅಂದರೆ ಅಂಗಾರಕ ಸಂಕಷ್ಟಿಯ ದಿನ ಗಣೇಶನ ವ್ರತಾಚಾರಣೆ ಹಾಗೂ ಉಪವಾಸ ಮಾಡುವುದು ಇಡೀ ವರ್ಷದಲ್ಲಿ ಬರುವ ಸಂಕಷ್ಟ ಚತುರ್ಥಿ ಆಚರಣೆ ಮಾಡುವುದಕ್ಕೆ ಸಮ ಎನ್ನಲಾಗುತ್ತದೆ.
5/ 8
ಅಂದಾಜಿನ ಪ್ರಕಾರ ಒಂದು ವರ್ಷದಲ್ಲಿ ಸುಮಾರು 13 ಸಂಕಷ್ಟಿಗಳು ಬರುತ್ತದೆ, ಆದರೆ ಪ್ರತಿ ಸಂಕಷ್ಟಿಗೆ ರೂಪುಗೊಳ್ಳುವ ಯೋಗ ಸಹ ವಿಭಿನ್ನವಾಗಿರುತ್ತದೆ. ಅಲ್ಲದೇ ಈ ವ್ರತ ಮಾಡುವುದು 21 ವ್ರತಗಳನ್ನು ಮಾಡಿದ ಫಲ ನೀಡುತ್ತದೆ.
6/ 8
ಅಂಗಾರಕ ಎಂದರೆ ಮಂಗಳಕರ ಎಂದು ಅರ್ಥ, ಈ ಸಂಕಷ್ಟಿ ಆಚರನೆ ಮಾಡುವುದರಿಂದ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಹಾಗೂ ಇರುವ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ನಾವು ಮಾಡಿಕೊಂಡ ಸಂಕಲ್ಪಗಳು ಸಹ ಈಡೇರುತ್ತದೆ ಎನ್ನಲಾಗುತ್ತದೆ.
7/ 8
ಪೂಜೆ ಮಾಡುವುದು ಹೇಗೆ? ಅಂಗಾರಕ ಸಂಕಷ್ಟಿಯ ದಿನ ಕೆಂಪು ಬಟ್ಟೆ ಮೇಲೆ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಪ್ರತಿಷ್ಠಾಪನೆ ಮಾಡಬೇಕು. ನಂತರ ದೇವರಿಗೆ ಹೂವುಗಳನ್ನು ಅರ್ಪಣೆ ಮಾಡಿ. ಮಲ್ಲಿಗೆ ಹೂವಿನ ಅರ್ಪಣೆ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ.
8/ 8
ನಂತರ ಗರಿಕೆಯನ್ನು ಅರ್ಪಣೆ ಮಾಡಬೇಕು. ನೈವೇದ್ಯಕ್ಕೆ ಲಡ್ಡು ಅಥವಾ ಮೋದಕ ಇದ್ದರೆ ಬಹಳ ಉತ್ತಮ. ಈ ಎರಡು ವಸ್ತುಗಳು ಗಣೇಶನಿಗೆ ಇಷ್ಟ. ಹಾಗೆಯೇ ದೇವರಿಗೆ ತುಪ್ಪದ ದೀಪ ಹಚ್ಚಿ, ಗಣೇಶ ಸ್ತುತಿ ಪಠಿಸಿ ಆರತಿ ಮಾಡಿ. ಅಲ್ಲದೇ ಈ ದಿನ ಪೂರ್ತಿ ಉಪವಾಸ ಇದ್ದು, ರಾತ್ರಿ ಚಂದ್ರ ದರ್ಶನ ಮಾಡಿ ಆಹಾರ ಸೇವಿಸಿ.