ಇನ್ನು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಮಹಿಳೆಯರು ದೇವರ ದರ್ಶನಕ್ಕೆ ಬರುತ್ತಾರೆ. ಅಲ್ಲದೇ, ಇಲ್ಲಿ ಮಧ್ಯಾಹ್ನ ಮೇಕೆ ಬಲಿ ನಡೆಯುತ್ತದೆ. ಪೂಜಾ ಸಮಿತಿಯ ಸದಸ್ಯರಾದ ದೇಬ್ದುಲಾಲ್ ಮೊಂಡಲ್, ಈ ಬಗ್ಗೆ ಮಾತನಾಡಿದ್ದು ಎರಡು ವರ್ಷಗಳ ಕೋವಿಡ್ -19 ನಂತರ, ಈ ವರ್ಷ ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರಿದ್ದು, ಇದಕ್ಕೆ ಬೇಕಾದ ಸಂಪೂರ್ಣ ವ್ಯವಸ್ಥೆ ಆಗಿದೆ ಎಂದಿದ್ದಾರೆ.