Aareshwaram Temple: ಮಹಿಳೆಯರ ಶಬರಿಮಲೆಯಂತೆ ಈ ದೇವಸ್ಥಾನ, ಶನಿದೋಷಕ್ಕೆ ಸಿಗುತ್ತೆ ಇಲ್ಲಿ ಪರಿಹಾರ
Aareshwaram Temple: ಕೇರಳದ ಶಬರಿಮಲೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸುಮಾರು 41 ದಿನಗಳ ಕಾಲ ಮಾಲೆ ಧರಿಸಿ, ಕಠಿಣ ವ್ರತ ಮಾಡಿ ಅಯ್ಯಪ್ಪನ ದರ್ಶನ ಪಡೆಯಲು ಭಕ್ತಾಧಿಗಳು ಬರುತ್ತಾರೆ. ಈ ಸ್ಥಳಕ್ಕೆ ಮಹಿಳೆಯರಿಗೆ ಅವಕಾಶವಿಲ್ಲ. ಆದರೆ ಕೇರಳದಲ್ಲಿಯೇ ಇನ್ನೊಂದು ಸ್ಥಳವಿದ್ದು, ಅದನ್ನು ಮಹಿಳೆಯರ ಶಬರಿಮಲೆ ಎಂದು ಕರೆಯುತ್ತಾರೆ. ಈ ಸ್ಥಳದ ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ.
ಕೇರಳದಲ್ಲಿಯೇ ಗುಡ್ಡದ ಮೇಲೊಂದು ದೇವಸ್ಥಾನವಿದ್ದು, ಇಲ್ಲಿನ ಅಯ್ಯಪ್ಪನ ದರ್ಶನ ಪಡೆಯಲು ಮಹಿಳೆಯರಿಗೆ ಸಹ ಅವಕಾಶವಿದೆ. ಪುರಾಣಗಳ ಪ್ರಕಾರ ಇದೊಂದು ಶಾಸ್ತ ದೇವಾಲಯವಾಗಿದ್ದು, ಇಲ್ಲಿ ಮುಖ್ಯ ದೇವರಾಗಿ ಅಯ್ಯಪ್ಪ ಸ್ವಾಮಿಯನ್ನು ಪೂಜೆ ಮಾಡಲಾಗುತ್ತದೆ.
2/ 7
ಈ ದೇವಸ್ಥಾನದಲ್ಲಿ ಅಯ್ಯಪ್ಪ ಮಾತ್ರವಲ್ಲದೇ 5 ದೇವತೆಗಳ ಮೂರ್ತಿ ಸಹ ಇಲ್ಲಿದೆ. ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ವಿಷ್ಣು ವಿಗ್ರಹಗಳು ಸಹ ಇಲ್ಲಿದ್ದು, ಅಯ್ಯಪ್ಪನ ಜೊತೆ ಭಕ್ತಾದಿಗಳು ಈ ದೇವರ ದರ್ಶನ ಸಹ ಪಡೆಯಬಹುದಾಗಿದೆ.
3/ 7
ಈ ದೇವಾಲಯವನ್ನು ಆರೇಶ್ವರ ದೇವಸ್ಥಾನ ಎಂದು ಕರೆಯಲಾಗುತ್ತದೆ. ಚಿಕ್ಕ ಗುಡ್ಡ ದಮೇಲೆ ಈ ಸ್ಥಳವಿದ್ದು, ಇಲ್ಲಿ ಮಹಿಳಯರು ಯಾವುದೇ ಸಮಸ್ಯೆಯಿಲ್ಲದೇ ಅಯ್ಯಪ್ಪನ ದರ್ಶನ ಪಡೆಯಬಹುದು.
4/ 7
ಅಲ್ಲದೇ ಈ ದೇವಾಲಯದ ಪಕ್ಕದಲ್ಲಿ ಕಲ್ಲುಬಂಡೆಗಳ ಗುಹೆಯೊಂದು ಸಹ ಇದ್ದು, ಅವುಗಳನ್ನು ಪುನರ್ಜನಿ ಗುಹೆಗಳೆಂದು ಕರೆಯುತ್ತಾರೆ. ಈ ಸ್ಥಳ ಬಹಳ ಪ್ರಶಾಂತವಾದ ಸ್ಥಳ ಎಂದು ಹೆಸರುಗಳಿಸಿದ್ದು, ದಿನಕ್ಕೆ ನೂರಾರು ಭಕ್ತರು ದರ್ಶನ ಪಡೆಯುತ್ತಾರೆ.
5/ 7
ಇನ್ನು ಈ ಆರೇಶ್ವರ ದೇವಾಲಯವು ಕೇರಳದ ತ್ರಿಶ್ಶೂರ್ ಜಿಲ್ಲೆಯ ವಾಸುಪುರದಲ್ಲಿದ್ದು, ಇದು ಶಬರಿಮಲೆಯಂತೆಯೇ ಬಹಳ ಪ್ರಸಿದ್ಧವಾಗಿದೆ. ವಾಸುಪುರದ ಕೊಡಶೇರಿಮಲ ಎಂಬ ಚಿಕ್ಕ ಗುಡ್ಡದ ಮೇಲೆ ಈ ದೇವಾಲಯವಿದ್ದು, ನಂಬಿ ಬಂದ ಭಕ್ತರ ಆಸೆಗಳನ್ನು ಈಡೇರಿಸುವ ಸ್ಥಳ ಎನ್ನುವ ನಂಬಿಕೆ ಇದೆ.
6/ 7
ಪುರಾಣಗಳ ಪ್ರಕಾರ ಈ ದೇವಸ್ಥಾನಕ್ಕೆ ಬಂದು ಬೇಡಿಕೊಂಡರೆ ಶನಿಯ ಕಾಟದಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ಸಾಡೇಸಾತಿ ಸಮಸ್ಯೆ ಇರುವವರು ಇಲ್ಲಿಗೆ ಭೇಟಿ ನೀಡುತ್ತಾರೆ.
7/ 7
ಒಟ್ಟಾರೆಯಾಗಿ ಈ ದೇವಸ್ಥಾನಕ್ಕೆ ಬಂದು ಸಮಸ್ಯೆಗಳಿಗೆ ಪರಿಹಾರ ಪಡೆದ ಹಲವಾರು ಭಕ್ತರಿದ್ದು, ದಿನದಿಂದ ದಿನಕ್ಕೆ ಬರುವ ಭಕ್ತಾಧಿಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ.