Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ

Akshaya Tritiya: ನಮ್ಮ ದೇಶದಲ್ಲಿ ಪ್ರತಿಯೊಂದು ಹಬ್ಬಕ್ಕೂ ವಿವಿಧ ರೀತಿಯ ಮಹತ್ವವಿದೆ. ಹಾಗೆಯೇ ಹಬ್ಬಗಳ ಹಿಂದಿನ ಆಚರಣೆಗೆ ಸಹ ಒಂದು ಇತಿಹಾಸ ಹಾಗೂ ಕಥೆ ಇದೆ. ಅದರಂತೆ ಈ ಅಕ್ಷಯ ತೃತೀಯವನ್ನು ಏಕೆ ಆಚರಿಸಲಾಗುತ್ತದೆ ಹಾಗೂ ಅದರ ಮಹತ್ವವೇನು ಎಂಬುದು ಎಲ್ಲಿದೆ.

First published:

  • 17

    Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ

    ಅಕ್ಷಯ ತೃತೀಯ ಹಬ್ಬವು ಮುಖ್ಯವಾಗಿ ಅದೃಷ್ಟದ ಹಬ್ಬ ಎನ್ನಲಾಗುತ್ತದೆ. ಈ ದಿನ ಗಳಿಸಿದ ಪುಣ್ಯ ಎಂದಿಗೂ ಮುಗಿಯುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗೆಯೇ, ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಮಾಡಬಹುದು.

    MORE
    GALLERIES

  • 27

    Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ

    ಪ್ರತಿ ತಿಂಗಳ ಶುಕ್ಲ ಪಕ್ಷದ ತೃತೀಯಾ ದಿನ ಮಂಗಳಕರವಾಗಿದ್ದರೂ, ವೈಶಾಖ ಮಾಸದ ತೃತೀಯಾವನ್ನು ಹೆಚ್ಚು ಶ್ರೇಷ್ಠ ಎನ್ನಲಾಗುತ್ತದೆ. ಈ ದಿನ ಪಂಚಾಂಗವನ್ನು ನೋಡದೆ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಈ ದಿನ ಪ್ರಾರಂಭಿಸಿದ ಕೆಲಸಗಳು ಸಹ ಉತ್ತಮ ಫಲಿತಾಂಶವನ್ನು ನೀಡುತ್ತವೆ. ಹಾಗೆಯೇ ಈ ದಿನದ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.

    MORE
    GALLERIES

  • 37

    Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ

    ನಂಬಿಕೆಗಳ ಪ್ರಕಾರ ಅಕ್ಷಯ ತೃತೀಯವನ್ನು ತ್ರೇತಾಯುಗದಲ್ಲಿ ಆರಂಭಿಸಲಾಯಿತು. ಗಂಗಾ ದೇವಿ ಸ್ವರ್ಗದಿಂದ ಭೂ ಲೋಕಕ್ಕೆ ಇಳಿದು ಬಂದ ದಿನವೇ ಅಕ್ಷಯ ತೃತೀಯ ಎಂದೂ ಸಹ ಹೇಳಲಾಗುತ್ತದೆ.

    MORE
    GALLERIES

  • 47

    Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ

    ಇನ್ನು ಎಲ್ಲರಿಗೂ ಗೊತ್ತಿರುವಂತೆ ಸಂಪತ್ತಿನ ಒಡೆಯ ಕುಬೇರ. ಈ ಕುಬೇರನಿಗೆ ಅಷ್ಟೈಶ್ವರ್ಯಗಳು ಸಿಕ್ಕ ದಿನ ಈ ಅಕ್ಷಯ ತೃತೀಯವಂತೆ. ಲಕ್ಷ್ಮಿಯಿಂದ ಸಂಪತ್ತು ಪಡೆದು ಕುಬೇರ ಶ್ರೀಮಂತನಾದ ಎನ್ನಲಾಗುತ್ತದೆ.

    MORE
    GALLERIES

  • 57

    Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ

    ಈ ಎಲ್ಲಕ್ಕಿಂತ ಮುಖ್ಯವಾಗಿ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತವನ್ನು ಈ ದಿನವೇ ಗಣೇಶ ಬರೆಯಲು ಆರಂಭಿಸಿದ್ದು ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ ಅಕ್ಷಯ ತೃತೀಯದಂದು ವೇದ ವ್ಯಾಸರು ಈ ಮಹಾಭಾರತವನ್ನು ಬರೆಯಲು ಗಣೇಶನಿಗೆ ಆದೇಶಿಸಿದ್ದಂತೆ.

    MORE
    GALLERIES

  • 67

    Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ

    ಈ ಅಕ್ಷಯ ತೃತೀಯ ಹಿಂದಿನ ಮತ್ತೊಂದು ಬಹು ಮುಖ್ಯ ಕಥೆ ಎಂದರೆ ಪಾಂಡವರಿಗೆ ಸಿಕ್ಕ ಅಕ್ಷಯ ಪಾತ್ರೆ. ವನವಾಸದಲ್ಲಿದ್ದ ಪಾಂಡವರು ಅತಿಥಿ ಸತ್ಕಾರ ಮಾಡಲು ಪರದಾಡುತ್ತಿದ್ದಾಗ ವರದಾನವಾಗಿ ಸಿಕ್ಕ ಪಾತ್ರೆ ಇದು. ಹಾಗಾಗಿಯೇ ಈ ದಿನ ಏನೇ ವಸ್ತುವನ್ನು ಖರೀದಿ ಮಾಡಿದರೂ ಅಕ್ಷಯವಾಗುತ್ತೆ ಎನ್ನಲಾಗುತ್ತದೆ.

    MORE
    GALLERIES

  • 77

    Akshaya Tritiya 2023: ಈ ಹಬ್ಬದ ದಿನ ಏನೇ ಮಾಡಿದರೂ ಅಕ್ಷಯ ಆಗೋದು ಇದೇ ಕಾರಣಕ್ಕೆ, ಇಲ್ಲಿದೆ ಕುತೂಹಲಕಾರಿ ಕಥೆ

    ಈ ಎಲ್ಲಾ ಆಚರಣೆಗಳ ಜೊತೆ ಅಕ್ಷಯ ತೃತೀಯವನ್ನು ವಿಷ್ಣುವಿನ ಆರನೇ ಅವತಾರ ಪರಶುರಾಮನ ಜನ್ಮದಿನ ಎಂದು ಸಹ ಹೇಳಲಾಗುತ್ತದೆ.

    MORE
    GALLERIES