ಅದಕ್ಕಾಗಿಯೇ ಅಕ್ಷಯ ತೃತೀಯ ಸಮಯದಲ್ಲಿ ಚಿನ್ನದ ಖರೀದಿ ಮಾಡುತ್ತಾರೆ. ಆ ವಿಶೇಷ ದಿನದಂದು ಚಿನ್ನವನ್ನು ಖರೀದಿಸುವುದು ಎಂದರೆ ಲಕ್ಷ್ಮಿ ದೇವಿಯನ್ನು ಮನೆಗೆ ಕರೆತಂದಂತೆ ಎನ್ನುವ ನಂಬಿಕೆ ಇದೆ. ಇನ್ನು ಈ ಬಾರಿ ಅಕ್ಷಯ ತೃತೀಯ ಏಪ್ರಿಲ್ 22 ರಂದು ಬಂದಿದ್ದು, ಈ ದಿನ ಸಹ ಜನ ಚಿನ್ನ ಖರೀದಿ ಮಾಡುತ್ತಾರೆ. ಆದರೆ ಚಿನ್ನದ ಬದಲು ಕೆಲ ವಸ್ತುಗಳನ್ನು ಖರೀದಿ ಮಾಡುವುದರಿಂದ ಸಹ ಸಂಪತ್ತು ಹೆಚ್ಚಾಗುತ್ತದೆ.
ಬಾರ್ಲಿಯನ್ನು ಖರೀದಿಸಿ: ನೀವು ಅಕ್ಷಯ ತೃತೀಯ ಶಾಪಿಂಗ್ ಪಟ್ಟಿಯಲ್ಲಿ ಬಾರ್ಲಿಯನ್ನು ಕೂಡ ಸೇರಿಸಬಹುದು. ಅದರಲ್ಲೂ ಕಡಿಮೆ ಬಜೆಟ್ ಕಾರಣದಿಂದ ಚಿನ್ನ ಖರೀದಿಸಲು ಸಾಧ್ಯವಾಗದೇ ಇದ್ದರೆ ಅಕ್ಷಯ ತೃತೀಯ ದಿನದಂದು ಬಾರ್ಲಿಯನ್ನು ಖರೀದಿ ಮಾಡಬಹುದು. ಈ ದಿನ ಬಾರ್ಲಿಯನ್ನು ಖರೀದಿಸುವುದು ತುಂಬಾ ಮಂಗಳಕರ ಎನ್ನಲಾಗುತ್ತದೆ. ಇನ್ನು ಪೂಜೆಯ ಸಮಯದಲ್ಲಿ.. ವಿಷ್ಣುವಿನ ಪಾದಗಳಿಗೆ ಕೆಲವು ಬಾರ್ಲಿ ಧಾನ್ಯಗಳನ್ನು ಅರ್ಪಿಸಿದರೆ ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ.