Akshaya Tritiya: ಹಬ್ಬದ ದಿನ ಈ ಕೆಲಸ ಮಾಡಿದ್ರೆ ಸಾಕು 7 ಜನ್ಮದ ಪಾಪ ಪರಿಹಾರವಾಗುತ್ತೆ

Akshaya Tritiya 2023: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಅಕ್ಷಯ ತೃತೀಯವು ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯ ತಿಥಿಯಂದು ಬರುತ್ತದೆ. ಈ ದಿನ ಕೆಲ ಮುಖ್ಯ ಕೆಲಸಗಳನ್ನು ಮಾಡುವುದರಿಂದ ನಿಮ್ಮ 7 ಜನ್ಮದ ಪಾಪಗಳು ನಿವಾರಣೆ ಆಗುತ್ತದೆ. ಆ ಕೆಲಸಗಳೇನು ಎಂಬುದು ಇಲ್ಲಿದೆ.

First published:

  • 17

    Akshaya Tritiya: ಹಬ್ಬದ ದಿನ ಈ ಕೆಲಸ ಮಾಡಿದ್ರೆ ಸಾಕು 7 ಜನ್ಮದ ಪಾಪ ಪರಿಹಾರವಾಗುತ್ತೆ

    ವೈಶಾಖ ಮಾಸದ ಶುಕ್ಲಪಕ್ಷದಲ್ಲಿ ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾಭಾರತದಲ್ಲಿ ಧರ್ಮರಾಜನು ಸೂರ್ಯನನ್ನು ಪೂಜಿಸಿ ಅಕ್ಷಯಪಾತ್ರೆಯನ್ನು ಪಡೆದ ದಿನ ಇದು ಎನ್ನಲಾಗುತ್ತದೆ, ಆದ್ದರಿಂದ ಈ ದಿನವನ್ನು ಅಕ್ಷಯ ತೃತೀಯಾ ಎಂದು ಕರೆಯಲಾಗುತ್ತದೆ.

    MORE
    GALLERIES

  • 27

    Akshaya Tritiya: ಹಬ್ಬದ ದಿನ ಈ ಕೆಲಸ ಮಾಡಿದ್ರೆ ಸಾಕು 7 ಜನ್ಮದ ಪಾಪ ಪರಿಹಾರವಾಗುತ್ತೆ

    ಅಕ್ಷಯ ತೃತೀಯದಂದು ನದಿಯಲ್ಲಿ ಸ್ನಾನ ಮತ್ತು ದಾನ ಮಾಡುವುದು ಬಹಳ ಮುಖ್ಯ. ಆದರೆ ಈ ದಿನ ಮುಖ್ಯವಾಗಿ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಹಿಂದಿನ ಏಳು ಜನ್ಮಗಳ ಪಾಪಗಳು ತೊಲಗಿ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಗಳಿವೆ.

    MORE
    GALLERIES

  • 37

    Akshaya Tritiya: ಹಬ್ಬದ ದಿನ ಈ ಕೆಲಸ ಮಾಡಿದ್ರೆ ಸಾಕು 7 ಜನ್ಮದ ಪಾಪ ಪರಿಹಾರವಾಗುತ್ತೆ

    ಈ ವರ್ಷ ಅಕ್ಷಯ ತೃತೀಯ ಏಪ್ರಿಲ್ 23 ಭಾನುವಾರ ಬರುತ್ತದೆ. ಅಕ್ಷಯ ತೃತೀಯ ದಿನದಂದು ಸಂಪತ್ತು ಸಂಗ್ರಹಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ದಿನ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವ ಸಂಪ್ರದಾಯವಿದೆ.

    MORE
    GALLERIES

  • 47

    Akshaya Tritiya: ಹಬ್ಬದ ದಿನ ಈ ಕೆಲಸ ಮಾಡಿದ್ರೆ ಸಾಕು 7 ಜನ್ಮದ ಪಾಪ ಪರಿಹಾರವಾಗುತ್ತೆ

    ಈ ದಿನದಂದು ಜನರು ಚಿನ್ನವನ್ನು ಖರೀದಿಸಲು ಹೆಚ್ಚು ಇಷ್ಟಪಡುತ್ತಾರೆ. ಈ ದಿನ ಮನೆಯನ್ನು ಸಹ ಖರೀದಿಸಬಹುದು. ಇದಲ್ಲದೇ ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನ, ಮನೆ ಮಾತ್ರವಲ್ಲದೇ, ಲೋಹದ ಹಿತ್ತಾಳೆ, ತಾಮ್ರದ ಪಾತ್ರೆಗಳನ್ನು ಖರೀದಿಸಬೇಕು. ಈ ವಸ್ತುಗಳನ್ನು ಖರೀದಿಸಲು ಶಕ್ತಿ ಇಲ್ಲದಿದ್ದಲ್ಲಿ ಪೂಜಾ ಸಾಮಾಗ್ರಿಗಳನ್ನು ಖರೀದಿಸಬಹುದು.

    MORE
    GALLERIES

  • 57

    Akshaya Tritiya: ಹಬ್ಬದ ದಿನ ಈ ಕೆಲಸ ಮಾಡಿದ್ರೆ ಸಾಕು 7 ಜನ್ಮದ ಪಾಪ ಪರಿಹಾರವಾಗುತ್ತೆ

    ಅಕ್ಷಯ ತೃತೀಯ ದಿನದಂದು ಗಂಗಾ ಮಾತೆಯನ್ನು ಪೂಜಿಸಬೇಕು ಎನ್ನಲಾಗುತ್ತದೆ. ಎಲ್ಲ ದೇವತೆಗಳನ್ನು ಪೂಜಿಸುವ ವಿಧಾನ ಇರುವಂತೆಯೇ ಗಂಗಾಮಾತೆಯನ್ನು ಪೂಜಿಸುವ ವಿಧಾನವೂ ಇದೆ. ಈ ದಿನ ಬ್ರಹ್ಮ ಮುಹೂರ್ತದಲ್ಲಿ ಜಾಗರಣೆ ಮಾಡಿ ಗಂಗಾಸ್ನಾನ ಮಾಡುವುದರಿಂದ ಬಯಸಿದ ಫಲ ಪ್ರಾಪ್ತಿಯಾಗುತ್ತದೆ.

    MORE
    GALLERIES

  • 67

    Akshaya Tritiya: ಹಬ್ಬದ ದಿನ ಈ ಕೆಲಸ ಮಾಡಿದ್ರೆ ಸಾಕು 7 ಜನ್ಮದ ಪಾಪ ಪರಿಹಾರವಾಗುತ್ತೆ

    ಇಷ್ಟೇ ಅಲ್ಲದೇ, ಆ ದಿನದಂದು ಯಾವ ಶುಭ ಕಾರ್ಯಗಳನ್ನು ಮಾಡಿದರೂ ಅದು ಉತ್ತಮ ಫಲಿತಾಂಶವನ್ನು ನೀಡುತ್ತದೆ, ಕೆಟ್ಟ ಕೆಲಸಗಳನ್ನು ಮಾಡಿದರೆ ಅದರ ಪರಿಣಾಮವೂ ಶಾಶ್ವತವಾಗಿ ಕಾಡುತ್ತದೆ. ಆದ್ದರಿಂದಲೇ ಬಡವರಿಗೆ ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ.

    MORE
    GALLERIES

  • 77

    Akshaya Tritiya: ಹಬ್ಬದ ದಿನ ಈ ಕೆಲಸ ಮಾಡಿದ್ರೆ ಸಾಕು 7 ಜನ್ಮದ ಪಾಪ ಪರಿಹಾರವಾಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES