ವೃಷಭ ರಾಶಿ: ಈ ರಾಶಿಯವರಿಗೆ ಗ್ರಹಣ ಸಹ ಕೆಟ್ಟ ಪ್ರಭಾವ ಬೀರುತ್ತದೆ. ಈ ರಾಶಿಯ ಜನರು ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಾರೆ. ವಿಪರೀತವಾಗಿ ಹಣ ಖರ್ಚು ಮಾಡಬೇಕಾದ ಸಂದರ್ಭಗಳು ಎದುರಾಗುತ್ತವೆ. ಕೊನೆಗೆ ಸಾಲ ಮಾಡಬೇಕಾಗಬಹುದು. ಯಾವುದೇ ಸರ್ಕಾರಿ ಅಥವಾ ಖಾಸಗಿ ಯೋಜನೆಗಳಲ್ಲಿ ಕೆಲಸ ಮಾಡುವಾಗ ಜಾಗರೂಕರಾಗಿರಿ. ಗ್ರಹಣದಿಂದಾಗಿ ವೃಷಭ ರಾಶಿಯವರಿಗೆ ಎಡಗಣ್ಣಿಗೆ ಅಥವಾ ಎಡಗಾಲಿಗೆ ಗಾಯವಾಗುವ ಸಂಭವವಿದೆ.
ಕನ್ಯಾ ರಾಶಿ: ಸೂರ್ಯಗ್ರಹಣದ ಪ್ರಭಾವದಿಂದ ಕನ್ಯಾ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಅನಿರೀಕ್ಷಿತ ಖಾಯಿಲೆಗಳಿಂದ ತೊಂದರೆಯಾಗುವ ಸಂಭವವಿದೆ. ಕುಟುಂಬದಲ್ಲಿ ಅನಿರೀಕ್ಷಿತ ಸಮಸ್ಯೆಗಳು ಆಗುತ್ತದೆ. ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಬೇಕು. ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳೂ ಎದುರಾಗುವ ಸಾಧ್ಯತೆ ಇದೆ. ಈ ಗ್ರಹಣದ ಸಮಯದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಉತ್ತಮ.
ವೃಶ್ಚಿಕ: ಈ ರಾಶಿಯವರಿಗೆ ಸೂರ್ಯಗ್ರಹಣವು ಅನುಕೂಲಕರವಾಗಿರುವುದಿಲ್ಲ. ವಿಶೇಷವಾಗಿ ಉದ್ಯೋಗಿಗಳು ಕೆಲಸದಲ್ಲಿ ಹತಾಶೆಯನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಇದು ಅವರ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಖರ್ಚು ವೆಚ್ಚಗಳ ಬಗ್ಗೆ ಜಾಗರೂಕರಾಗಿರಿ. ಸಮಾಜದಲ್ಲಿ ಪ್ರತಿಷ್ಠೆ ಹಾಳಾಗುವ ಹಾಗೂ ಮಾನ ಕಳೆದುಕೊಳ್ಳುವ ಸಂಭವವಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳೊಂದಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.