ಮಿಥುನ ರಾಶಿ: ನಾಲ್ಕು ರಾಜಯೋಗಗಳ ರಚನೆಯಿಂದಾಗಿ, ಮಿಥುನ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಹಿಂಬಾಲಿಸುತ್ತದೆ. ವಿದ್ಯಾರ್ಥಿಗಳ ವಿದೇಶದಲ್ಲಿ ಓದುವ ಕನಸು ನನಸಾಗುತ್ತದೆ. ಮತ್ತೊಂದೆಡೆ, ಕುಂಭ ರಾಶಿಯಲ್ಲಿ ಶನಿಯ ಸಂಚಾರದಿಂದಾಗಿ, ನೀವು ಶನಿಯ ಕಾಟದಿಂದ ಮುಕ್ತರಾಗುತ್ತೀರಿ. ಅದಕ್ಕಾಗಿಯೇ ನೀವು ಪ್ರತಿ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.
ಕನ್ಯಾ: 4 ರಾಜಯೋಗದ ಕಾರಣದಿಂದ ಈ ರಾಶಿಯವರಿಗೆ ಆರ್ಥಿಕ ಮತ್ತು ವೈವಾಹಿಕ ಜೀವನದಲ್ಲಿ ಲಾಭವಿದೆ. ಏಕೆಂದರೆ ಫೆಬ್ರವರಿ 15 ರ ನಂತರ ನಿಮ್ಮ ಜಾತಕದಲ್ಲಿ ಮಾಲವ್ಯ ರಾಜಯೋಗ ಉಂಟಾಗುತ್ತದೆ. ಹಾಗೆಯೇ, ಈ ಸಮಯದಲ್ಲಿ ಶನಿಯು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಅದಕ್ಕಾಗಿಯೇ ನೀವು ಈ ಸಮಯದಲ್ಲಿ ಕೋರ್ಟ್ ವ್ಯವಹಾರಗಳಲ್ಲಿ ಯಶಸ್ವಿಯಾಗುತ್ತೀರಿ. ದಾಂಪತ್ಯ ಜೀವನದಲ್ಲಿ ಸಂತಸ ಹೆಚ್ಚುತ್ತದೆ.