ಮೇಷ ರಾಶಿ: ಈ ರಾಶಿಯವರಿಗೆ ಬುದ್ಧ ಪೂರ್ಣಿಮಾ ದಿನವು ತುಂಬಾ ವಿಶೇಷವಾಗಿರುತ್ತದೆ. ಏಕೆಂದರೆ ಈ ದಿನ ಸೂರ್ಯನು ಮೇಷ ರಾಶಿಯಲ್ಲಿ ಸಂಚಾರ ಮಾಡುತ್ತಾರೆ. ಇದರ ಜೊತೆ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತಿದೆ. ಇಷ್ಟೇ ಅಲ್ಲದೇ, ಚಂದ್ರಗ್ರಹಣವು ಈ ರಾಶಿಯ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ದೀರ್ಘಕಾಲದಿಂದ ನಿಂತು ಹೋಗಿದ್ದ ಕೆಲಸಗಳು ಪುನರಾರಂಭಗೊಳ್ಳಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಂಪೂರ್ಣ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ.