ಜ್ಯೋತಿಷ್ಯದ ಪ್ರಕಾರ, ಗ್ರಹಗಳು ನಿರ್ದಿಷ್ಟ ಸಮಯದ ನಂತರ ಇತರ ಗ್ರಹಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತವೆ. ಅದರ ಪ್ರಭಾವವು ಮಾನವ ಜೀವನದ ಮೇಲೆ ಗೋಚರಿಸುತ್ತದೆ. ಗುರುವು ಮೀನ ರಾಶಿಯಲ್ಲಿ ಸಾಗುತ್ತಾನೆ ಮತ್ತು ಫೆಬ್ರವರಿ 15 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಕಾರಣದಿಂದಾಗಿ 12 ವರ್ಷಗಳ ನಂತರ, ಮೀನದಲ್ಲಿ ಶುಕ್ರ ಮತ್ತು ಗುರುಗಳ ಸಂಯೋಗ ಇರುತ್ತದೆ.
ಮೇಷ ರಾಶಿ: ಗುರು ಮತ್ತು ಶುಕ್ರನ ಸಂಯೋಜನೆಯು ನಿಮಗೆ ಲಾಭದಾಯಕವಾಗರಲಿದೆ. ಈ ಸಮಯದಲ್ಲಿ ನಿಮ್ಮ ಘನತೆ ಹೆಚ್ಚಾಗುತ್ತದೆ. ಸಂತೋಷ ಮತ್ತು ಸಂಪತ್ತಿನಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ವಿದೇಶದಿಂದ ಲಾಭ ಪಡೆಯಬಹುದು. ನೀವು ವಿದೇಶದಲ್ಲಿ ವಾಸಿಸುತ್ತಿದ್ದರೆ ಮತ್ತು ನಿರುದ್ಯೋಗಿಗಳಾಗಿದ್ದರೆ,ಉದ್ಯೋಗದ ಆಫರ್ ಸಿಗುವ ಸಾಧ್ಯತೆ ಇದೆ. ಉದ್ಯಮಿಗಳು ಭಾರಿ ಲಾಭವನ್ನು ಗಳಿಸಬಹುದು.