ಯಾವುದೇ ಮನೆಯಲ್ಲಿ ಪೂಜಾ ಕೊಠಡಿ ಅನ್ನೋದು ಪ್ರಮುಖ ಕೋಣೆಯಾಗಿದೆ. ದೇವರ ಸೂಚನೆ ಇಲ್ಲದೇ ಒಂದು ಹುಲ್ಲು ಕಡ್ಡಿ ಕೂಡ ಅಲ್ಲಾಡುವುದಿಲ್ಲ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಈ ಬಲವಾದ ನಂಬಿಕೆ ಪ್ರತಿನಿತ್ಯ ದೇವರ ಪೂಜೆಗೆ ಕಾರಣವಾಗಿದೆ. ಮನೆಯಲ್ಲಿ ದಿನಂಪ್ರತಿ ಪೂಜೆ ನಡೆಯುತ್ತಿದ್ದರೆ ತನ್ನಂತಾನೇ ಮನೆಯಲ್ಲಿ ಮತ್ತು ಕುಟುಂಬ ಸದಸ್ಯರಲ್ಲಿ ನೆಮ್ಮದಿ, ಶಾಂತಿ ನೆಲೆಸಿರುತ್ತದೆ. ಮನೆಕಟ್ಟುವಾಗ ಸಾಮಾನ್ಯವಾಗಿ ವಾಸ್ತು ನೋಡಲಾಗುತ್ತದೆ. ಮುಖ್ಯ ದ್ವಾರ, ಅಡುಗೆ ಮನೆ, ಕೋಣೆ ಎಲ್ಲದಕ್ಕೂ ವಾಸ್ತು ನೋಡಲಾಗುತ್ತದೆ. ಇದೇ ರೀತಿ ಪೂಜೆ ಕೋಣೆಗೂ ವಾಸ್ತು ಪ್ರಮುಖವಾಗಿದೆ.
ಪಶ್ಚಿಮ ವಲಯ- ಪಶ್ಚಿಮ ವಲಯವು ಪೂಜೆ ಕೋಣೆಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಗುರುಗಳ ವಲಯ. ಇವುಗಳಲ್ಲಿ ಬಾಬಾ ಲೋಕನಾಥ್, ಸಾಯಿ ಬಾಬಾ, ಮಹವೀರ್ ಜೈನ್, ಗೌತಮ್ ಬುದ್ಧ, ಸಿಖ್ ಗುರುಗಳು ಮತ್ತು ಮುಂತಾದವರ ಪೂಜೆ ಮಾಡಬಹುದು. ಈ ವಲಯದಲ್ಲಿ ನೀವು ಯೇಸುವನ್ನು ಸಹ ಆರಾಧಿಸಬಹುದು. ವಾಯುವ್ಯ ವಲಯ- ಕುಟುಂಬದ ಮೃತ ಪೂರ್ವಜರನ್ನು ಪೂಜಿಸಲು ಈ ದಿಕ್ಕನ್ನು ಬಳಸಿಕೊಳ್ಳಬಹುದು.