ನಿಯಮಗಳ ಪ್ರಕಾರ, ಗ್ಯಾಸ್ ಸ್ಟ್ಯಾಂಡ್ ಮೇಲೆ ಹಣ್ಣುಗಳು ಮತ್ತು ತರಕಾರಿಗಳ ಚಿತ್ರಗಳನ್ನು ಇಡುವುದು ಒಳ್ಳೆಯದು. ಅದೂ ಅಲ್ಲದೆ ಅನ್ನಪೂರ್ಣ ಮಾತೆಯ ಭಾವಚಿತ್ರ ಹಾಕಿದರೆ ಅನುಕೂಲ. ಯಾಕೆಂದರೆ ದೇವರ ಆಶೀರ್ವಾದ ಯಾವತ್ತೂ ನಿಮ್ಮ ಮೇಲೆ ಇರುತ್ತದೆ. ಇನ್ನು ಕೀಟಗಳು, ಜೇಡಗಳು, ಜಿರಳೆಗಳು, ಇಲಿಗಳು ಇತ್ಯಾದಿಗಳು ನಿಮ್ಮ ಅಡುಗೆಮನೆಗೆ ಪ್ರವೇಶಿಸಬಾರದು. ಅವುಗಳ ಆಗಮನದಿಂದ, ನಿಮ್ಮ ಮನೆ ನಷ್ಟಕ್ಕೆ ಹೋಗುತ್ತದೆ. ಅಡುಗೆ ಮನೆಯನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡಿ.
ತಿಂದ ನಂತರ ತಟ್ಟೆಯಲ್ಲಿ ನಿಮ್ಮ ಕೈಗಳನ್ನು ಎಂದಿಗೂ ತೊಳೆಯಬೇಡಿ. ಇನ್ನು ಪ್ಲೇಟ್ ಅನ್ನು ಗ್ಯಾಸ್ ಸ್ಟ್ಯಾಂಡ್ ಮೇಲೆ, ಟೇಬಲ್, ಹಾಸಿಗೆ ಅಥವಾ ಮೇಜಿನ ಕೆಳಗೆ ಯಾವತ್ತಿಗೂ ಇಡಬಾರದು.. ಅಡುಗೆಮನೆಯಲ್ಲಿ ಟ್ಯಾಪ್ ಸೋರಿಕೆಯಾದರೆ, ತಕ್ಷಣ ಅದನ್ನು ಆಫ್ ಮಾಡಿ. ಅಲ್ಲದೆ, ಯಾವುದೇ ಪಾತ್ರೆಯಲ್ಲಿ ನೀರು ಸೋರಿಕೆಯಾಗುತ್ತಿದ್ದರೆ, ಅದನ್ನು ಸಾಧ್ಯವಾದಷ್ಟು ಬೇಗ ಸರಿಪಡಿಸಿ ಅಥವಾ ಹೊರಗಿಡಿ.