Vastu Tips: ಮನೆಯಲ್ಲಿ ಕೃತಕ ಹೂ ಅಲಂಕರಿಸುವ ಮುನ್ನ ಒಮ್ಮೆ ಯೋಚನೆ ಮಾಡಿ
Vastu shastra: ಮನೆಯ ಅಂದ ಹೆಚ್ಚಿಸಬೇಕು ಎಂಬುವುದು ಎಲ್ಲರ ಆಸೆ. ಹಾಗಾಗಿ ಹೆಚ್ಚು ಜನರು ಮನೆಯ ಶೋಕೇಸ್, ಟೇಬಲ್ ಗಳ ಮೇಲೆ ಕೃತಕ ಹೂಗಳನ್ನು ಇರಿಸುತ್ತಾರೆ. ಆದ್ರೆ ಇದು ವಾಸ್ತು ಪ್ರಕಾರ ತಪ್ಪು. ಯಾಕೆ ಎಂಬುದರ ಮಾಹಿತಿ ಇಲ್ಲಿದೆ.
ಪ್ರತಿಯೊಬ್ಬರೂ ತಮ್ಮ ಮನೆಯನ್ನು ಸುಂದರವಾಗಿಸಲು ಅನೇಕ ಅಲಂಕಾರಿಕ ವಸ್ತುಗಳನ್ನು ಬಳಸುತ್ತಾರೆ. ಅವುಗಳಲ್ಲಿ ಒಂದು ಪ್ಲಾಸ್ಟಿಕ್ ಹೂವುಗಳು. ಮನೆಯ ಅಂದವನ್ನು ಹೆಚ್ಚಿಸುವ ಈ ಪ್ಲಾಸ್ಟಿಕ್ ಹೂಗಳು ಎಲ್ಲರನ್ನೂ ಆಕರ್ಷಿಸುತ್ತಿರುವುದು ಸುಳ್ಳಲ್ಲ. ಆದರೆ ಈ ರೀತಿಯ ಹೂವುಗಳನ್ನು ಬಳಸುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. (ಫೋಟೋ: Pixels.com)
2/ 7
ಈ ಆಕರ್ಷಕ ಹೂವುಗಳು ವಾಸನೆ ಇಲ್ಲದ ಮತ್ತು ದೀರ್ಘಕಾಲ ಬಾಳಿಕೆ ಬರುತ್ತವೆ. ಹಾಗಾಗಿ ಅವುಗಳನ್ನು ಮನೆಯ ಅಲಂಕಾರಕ್ಕೆ ಹೆಚ್ಚು ಜನರು ಬಳಸುತ್ತಾರೆ. ಆದರೆ ಈ ರೀತಿಯ ಹೂಗಳನ್ನು ಬಳಸದಂತೆ ವಾಸ್ತು ತಜ್ಞರು ಸಲಹೆ ನೀಡುತ್ತಾರೆ. (ಫೋಟೋ: Pixels.com)
3/ 7
ವಾಸ್ತು ಶಾಸ್ತ್ರದ ಪ್ರಕಾರ, ಸುಗಂಧವಿಲ್ಲದ ಕೃತಕ ಹೂವುಗಳನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಮತ್ತು ವಾಸ್ತು ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ರಿಂದ ಮನೆಗಳಲ್ಲಿ ಅಲಂಕಾರಿಕ ಹೂಗಳ ಬಳಸೋದು ಬೇಡ ಅಂತ ಹೇಳುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ಈ ಕೃತಕ ಹೂವುಗಳು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಹಾನಿಯುಂಟು ಮಾಡುತ್ತದೆ. ಮನೆಯಲ್ಲಿ ಕೃತಕ ಹೂವುಗಳಿಗಿಂತ ನಿಜವಾದ ಹೂವುಗಳು ಯಾವಾಗಲೂ ಹೆಚ್ಚು ಸಕಾರಾತ್ಮಕತೆಯನ್ನು ತರುತ್ತವೆ. (ಫೋಟೋ: Pixels.com)
5/ 7
ವಾಸ್ತು ತಜ್ಞರ ಪ್ರಕಾರ, ನಿಮ್ಮ ಮನೆಯಲ್ಲಿ ನಕಲಿ ಹೂವುಗಳಿದ್ದರೆ ಕ್ರಮೇಣ ಮನೆಯ ಸದಸ್ಯರ ಮನಸ್ಸಿನಲ್ಲಿ ಆಡಂಬರದ ಭಾವನೆ ಬೆಳೆಯಲು ಪ್ರಾರಂಭಿಸುತ್ತದೆ ಎಂಬ ನಂಬಿಕೆ ಇದೆ. (ಸಾಂದರ್ಭಿಕ ಚಿತ್ರ)
6/ 7
ಕೃತಕ ಹೂಗಳ ಅಳವಡಿಸಿರೋದರಿಂದ ಕುಟುಂಬ ಸದಸ್ಯರ ನಡುವೆ ಪರಸ್ಪರ ಪ್ರೀತಿ ಮತ್ತು ಸಾಮರಸ್ಯ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ವಾಸ್ತು ಪ್ರಕಾರ, ಮನೆಯಲ್ಲಿ ನಕಲಿ ಹೂವುಗಳನ್ನು ನಿಷೇಧಿಸಲಾಗಿದೆ. ಏಕೆಂದರೆ ನಕಲಿ ಶಕ್ತಿಗಳನ್ನು ಹೂವುಗಳ ಮೂಲಕ ಪ್ರಸಾರ ಮಾಡಲಾಗುತ್ತದೆ (ಫೋಟೋ: Pixels.com)
7/ 7
ಕೃತಕ ಹೂಗಳ ಅಲಂಕಾರ ಸಂತೋಷದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಣ್ಣ ವಿಷಯಗಳು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತವೆ. (ಫೋಟೋ: Pixels.com)