ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ದಾನ ಮಾಡಿದರೆ ನಮ್ಮ ಜೀವನದಲ್ಲಿ ಆಗುವ ತಪ್ಪುಗಳು ಮತ್ತು ನಮಗೆ ಗೊತ್ತಿಲ್ಲದೆ ಮಾಡಿದ ಪಾಪಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ, ವಿಶೇಷ ತಿಥಿಗಳಲ್ಲಿ, ಹಬ್ಬ ಹರಿದಿನಗಳಲ್ಲಿ ದಾನ ಮಾಡುವುದರಿಂದ ಅನೇಕ ರೀತಿಯ ಫಲವನ್ನು ಪಡೆಯಬಹುದು. ಆದರೆ ಧರ್ಮಶಾಸ್ತ್ರಗಳಲ್ಲಿ ದಾನದ ಬಗ್ಗೆ ಹಲವು ನಿಯಮಗಳಿವೆ. ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ದಿನದಲ್ಲಿ ದಾನ ಮಾಡುವುದರಿಂದ ವಿಶೇಷ ಲಾಭಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ.