Chanakya Niti: ಈ ಜನರಿಗೆ ಬೇರೆಯವರ ನೋವು ಅರ್ಥವಾಗೋದಿಲ್ವಂತೆ, ಇವರಿಂದ ದೂರವಿದ್ರೆ ನಾವ್ ಸೇಫ್
Chanakya Niti: ನೀವು ನಿಮಗೆ ನೋವಾದಾಗ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರ ಬಳಿ ಹೇಳಿಕೊಳ್ಳುತ್ತೇವೆ. ಆದರೆ ನಾವು ಕೆಲವರ ಬಳಿ ಅದೆಷ್ಟೇ ನೋವು ತೋಡಿಕೊಂಡರೂ ಸಹ ಅವರಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಆ ರೀತಿಯ ಜನರಿಂದ ದೂರವಿರಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಯಾವ ರೀತಿಯ ಜನರಿಗೆ ಬೇರೆಯವರು ನೋವು ಅರ್ಥವಾಗುವುದಿಲ್ಲ ಎಂಬುದು ಇಲ್ಲಿದೆ.
ಆಚಾರ್ಯ ಚಾಣಕ್ಯರು ಬದುಕಿಗೆ ಬೇಕಾದ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ. ಅವರ ಜ್ಞಾನ ಹಾಗೂ ಅನುಭವದಿಂದ ಯಾವ ರೀತಿ ನಾವು ಬದುಕಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನ ನಾವು ಸಹ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
2/ 8
ಚಾಣಕ್ಯರ ಪ್ರಕಾರ ನಾವು ಜೀವನದಲ್ಲಿ ಹಲವಾರು ಜನರಿಂದ ದೂರವಿರಬೇಕು. ನಮ್ಮ ಸುತ್ತ-ಮುತ್ತ ಕೆಟ್ಟ ಜನರು ಇದ್ದರೆ, ಆದರೆ ಅವರಿಗಿಂತ ಅಪಾಯ ಎಂದರೆ ನಿಮ್ಮ ನೋವನ್ನು ಅರ್ಥ ಮಾಡಿಕೊಳ್ಳದೇ ಇರುವವರು, ಅವರಿಂದ ನಾವು ದೂರ ಇರಬೇಕು. ಆ ಜನರು ಯಾರು ಎಂಬುದು ಇಲ್ಲಿದೆ.
3/ 8
ಸ್ವಾರ್ಥಿಗಳು: ಜೀವನದಲ್ಲಿ ಪ್ರತಿಯೊಬ್ಬರೂ ಸ್ವಾರ್ಥಿಗಳು ಎಂದರೆ ತಪ್ಪಲ್ಲ. ನಮ್ಮ ಒಳ್ಳೆಯದಕ್ಕಾಗಿ ಸ್ವಲ್ಪ ಮಟ್ಟಿಗೆ ಸ್ವಾರ್ಥ ಇರಬೇಕು. ಆದರೆ ಅತಿಯಾದ ಸ್ವಾರ್ಥ, ಕೇವಲ ನಾನು, ನನ್ನದು ಎನ್ನುವವರು ಬಹಳ ಡೇಂಜರ್ ಎನ್ನುತ್ತಾರೆ ಚಾಣಕ್ಯರು,
4/ 8
ಈ ರೀತಿಯ ಜನರು ಎಂದಿಗೂ ಯಾರದ್ದೇ ನೋವನ್ನು ಸಹ ಅರ್ಥ ಮಾಡಿಕೊಳ್ಳುವುದಿಲ್ಲ. ಅವರಿಗೆ ತಮ್ಮ ಜೀವನದ ಮಾತ್ರ ಮುಖ್ಯವಾಗುತ್ತದೆ. ಅವರಿಂದ ನಿಮಗೆ ನೋವಾಗುತ್ತದೆ ಎಂಬುದರ ಬಗ್ಗೆ ಸಹ ಅವರು ಯೋಚನೆ ಮಾಡುವುದಿಲ್ಲ.
5/ 8
ಅಹಂಕಾರಿಗಳು: ಅಹಂಕಾರ ಎಂಬುದು ಒಮ್ಮೆ ಬಂದರೆ ಸಾಕು, ಸಂಬಂಧಗಳನ್ನು ಹಾಳು ಮಾಡುತ್ತದೆ. ಅಹಂಕಾರಿಗಳಿಗೆ ಅವರ ಬಗ್ಗೆ ಮಾತ್ರ ಯೋಚನೆ ಇರುತ್ತದೆ ಹೊರತು ನಿಮ್ಮ ನೋವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಕೇವಲ ಕುಹಕವಾಡುವ ಗುಣವನ್ನು ಹೊಂದಿರುತ್ತಾರೆ.
6/ 8
ಕಳ್ಳರು ಹಾಗೂ ಕೆಟ್ಟ ಮನಸ್ಸಿನವರು: ನಿಮ್ಮ ನೋವನ್ನು ನೀವು ಯಾರ ಬಳಿಯಾದರೂ ಹಂಚಿಕೊಳ್ಳಬಹುದು, ಆದರೆ ಕಳ್ಳರು ಹಾಗೂ ಕೆಟ್ಟ ಮನಸ್ಥಿತಿಯನ್ನು ಹೊಂದಿರುವವರ ಬಳಿ ಹಂಚಿಕೊಂಡರೆ ವೇಸ್ಟ್ ಅಂತೆ. ಅವರಿಗೆ ಕಿಂಚಿತ್ತೂ ನಿಮ್ಮ ನೋವಿನ ಬಗ್ಗೆ ಯೋಚನೆ ಇರುವುದಿಲ್ಲವಂತೆ.
7/ 8
ಮದ್ಯವ್ಯಸನಿಗಳು: ಮದ್ಯಕ್ಕೆ ದಾಸರಾದ ವ್ಯಕ್ತಿಗಳಿಂದ ದೂರವಿರಬೇಕು ಎಂದು ಚಾಣಕ್ಯರು ತಿಳಿಸಿದ್ದಾರೆ. ಕೇವಲ ಆಚಾರ್ಯ ಚಾಣಕ್ಯರು ಮಾತ್ರವಲ್ಲದೇ ಹಿರಿಯರೂ ಸಹ ಇದನ್ನು ಹೇಳುತ್ತಾರೆ. ಏಕೆಂದರೆ ಈ ವ್ಯಕ್ತಿಗಳು ಬಹಳ ಅಪಾಯಕಾರಿ ಎನ್ನಲಾಗುತ್ತದೆ.
8/ 8
ಈ ರೀತಿಯ ಜನರಿಗೆ ನಿಮ್ಮ ನೋವು ಸಹ ಅರ್ಥವಾಗುವುದಿಲ್ಲ. ಅವರು ಕುಡಿದ ಅಮಲಿನಲ್ಲಿ ಯಾವುದೇ ಕೆಟ್ಟ ಕೆಲಸವನ್ನು ಸಹ ಮಾಡಲು ಹಿಂದೆ -ಮುಂದೆ ನೋಡುವುದಿಲ್ಲ. ಅವರಿಗೆ ಅವರ ಸಂತೋಷ ಮಾತ್ರ ಮುಖ್ಯವಾಗುತ್ತದೆ,