ಮೇಷ ರಾಶಿ: ಮೇಷ ರಾಶಿಯ ಜನರು ತುಂಬಾ ಧೈರ್ಯಶಾಲಿಗಳು ಮತ್ತು ನಿರ್ಭೀತ ಮನೋಭಾವದವರು ಎನ್ನಲಾಗುತ್ತದೆ. ಈ ರಾಶಿಯ ಜನರು ಧೈರ್ಯ ಮತ್ತು ಶೌರ್ಯದ ಅಧಿಪತಿಯಾದ ಮಂಗಳನಿಂದ ಪ್ರಭಾವಿತರಾಗುತ್ತಾರೆ. ಅದಕ್ಕಾಗಿಯೇ ಈ ರಾಶಿಯ ಜನರಲ್ಲಿಯೂ ಈ ಲಕ್ಷಣಗಳು ಕಂಡುಬರುತ್ತವೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಭಯವಿಲ್ಲದೆ ಮುನ್ನಡೆಯುತ್ತಾರೆ. ಅಲ್ಲದೇ, ಇವರು ಇತರರ ಭಯವನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಸಹ ಹೊಂದಿರುತ್ತಾರೆ.