ಸಾಮಾನ್ಯವಾಗಿ ನಮ್ಮಲ್ಲಿ ಹಿರಿಯರು ದಿನನಿತ್ಯದ ಅಭ್ಯಾಸಗಳಿಗೆ ಸಂಬಂಧಿಸಿ ಒಂದಿಷ್ಟು ನಿಯಮಗಳನ್ನು ಹೇಳುತ್ತಲೇ ಇರುತ್ತಾರೆ. ಇಂತಹ ದಿನಗಳಂದು ಕೂದಲಿಗೆ ಕತ್ತರಿ ಹಾಕಬಾರದು. ಉಗುರುಗಳನ್ನು ನಿರ್ದಿಷ್ಟ ದಿನದಂದು ಕತ್ತರಿಸಿಕೊಳ್ಳಬಾರದು. ಸಂಜೆ ಹೊತ್ತು ಉಗುರು ತೆಗೆದುಕೊಳ್ಳಬಾರದು ಮುಂತಾದ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಇದರಲ್ಲಿ ಕೆಲವೊಂದು ಪದ್ಧತಿಗಳಿಗೆ ವೈಜ್ಞಾನಿಕ ಕಾರಣಗಳೂ ಇಲ್ಲದಿಲ್ಲ.
ನಿರ್ದಿಷ್ಟ ದಿನದಂದು ಉಗುರನ್ನು ಕತ್ತರಿಸೋದು ಹಾಗೆಯೇ ನಿರ್ದಿಷ್ಟ ಸಮಯದ ಹಾಗೂ ದಿನದಲ್ಲಿ ಉಗುರುಗಳನ್ನು ಕತ್ತರಿಸದೇ ಇರುವುದು ನಿಮಗೆ ಶುಭ ಫಲಿತಾಂಶವನ್ನು ತರಬಹುದು ಎಂದು ಹೇಳಲಾಗುತ್ತದೆ. ನಮ್ಮ ಅನೇಕ ಧಾರ್ಮಿಕ ಗ್ರಂಥಗಳೂ ಉಗುರು ಕತ್ತರಿಸುವ ನಿಯಮಗಳ ಬಗ್ಗೆ ಉಲ್ಲೇಖಿಸುತ್ತವೆ. ಈ ನಿಯಮಗಳನ್ನು ಅನುಸರಿಸಿದಲ್ಲಿ ಮಾತ್ರ ನಿಮಗೆ ಉತ್ತಲ ಶುಭ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ಸಮಯದಲ್ಲಿ ಮತ್ತು ಸೂರ್ಯಾಸ್ತದ ನಂತರ ನಿಮ್ಮ ಉಗುರುಗಳನ್ನು ಕತ್ತರಿಸಬಾರದು ಎಂದು ಸಲಹೆ ನೀಡಲಾಗುತ್ತದೆ. ಈ ಸಮಯದಲ್ಲಿ ಉಗುರು ತೆಗೆಯುವುದರಿಂದ ಲಕ್ಷ್ಮಿ ದೇವಿ ಸಂತುಷ್ಟಳಾಗುವುದಿಲ್ಲ ಎಂದು ನಂಬಲಾಗಿದೆ. ಜೊತೆಗೆ ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಸೂರ್ಯಾಸ್ತದ ಸಮಯದಲ್ಲಿ ಮತ್ತು ನಂತರ ನಿಮ್ಮ ಉಗುರುಗಳನ್ನು ಕತ್ತರಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ.