Naga Temple: ಹಾವಿನ ರೂಪದಲ್ಲಿದೆ ಈ ದೇವಸ್ಥಾನ, ಆರು ಶತಮಾನಗಳ ಇತಿಹಾಸವಿರುವ ಅಪೂರ್ವ ಸ್ಥಳ

Naga Temple: ಭಾರತವನ್ನು ದೇವಾಲಯಗಳ ತವರು ಎಂದು ಹೇಳಲಾಗುತ್ತದೆ. ಅನೇಕ ದೇವಾಲಯಗಳ ಜೊತೆ ವಿವಿಧ ವಾಸ್ತುಶಿಲ್ಪ ಶೈಲಿಗಳಲ್ಲಿ ನಾವು ಭಾರತದಲ್ಲಿ ಕಾಣಬಹುದು. ಎಲ್ಲವೂ ಒಂದಕ್ಕೊಂದು ಭಿನ್ನ ಎಂದರೆ ತಪ್ಪಲ್ಲ. ಅಂತಹ ನಾಗಾ ದೇವಸ್ಥಾನ ತೆಲಂಗಾಣದಲ್ಲಿದೆ. ಈ ದೇವಾಲಯದ ಮಹತ್ವವೇನು ಎಂಬುದು ಇಲ್ಲಿದೆ.

First published:

  • 18

    Naga Temple: ಹಾವಿನ ರೂಪದಲ್ಲಿದೆ ಈ ದೇವಸ್ಥಾನ, ಆರು ಶತಮಾನಗಳ ಇತಿಹಾಸವಿರುವ ಅಪೂರ್ವ ಸ್ಥಳ

    ಭಾರತದಲ್ಲಿ ದೇವಾಲಯಗಳನ್ನು ವಿವಿಧ ರೀತಿಯಲ್ಲಿ ನಿರ್ಮಿಸಲಾಗುತ್ತದೆ. ಕೆಲವು ದೇವಾಲಯಗಳು ಇಂದಿಗೂ ಹಳೆಯ ವಾಸ್ತು ಶಿಲ್ಪಗಳನ್ನು ಹೊಂದಿದ್ದರೆ, ಹೊಸದಾಗಿ ನಿರ್ಮಾಣವಾದ ದೇವಾಲಯಗಳು ಹೊಸ ಪ್ರಪಂಚವನ್ನು ಸೃಷ್ಟಿಸುತ್ತವೆ. ಅಂತಹ ಒಂದು ದೇವಾಲಯವು ತೆಲಂಗಾಣದ ನಾಂಪಲ್ಲಿ ಗುಟ್ಟದಲ್ಲಿದೆ. ಈ ಲಕ್ಷ್ಮೀ ನರಸಿಂಹ ದೇವಾಲಯವನ್ನು ಹಾವಿನ ಆಕಾರದಲ್ಲಿ ನಿರ್ಮಿಸಲಾಗಿದೆ.

    MORE
    GALLERIES

  • 28

    Naga Temple: ಹಾವಿನ ರೂಪದಲ್ಲಿದೆ ಈ ದೇವಸ್ಥಾನ, ಆರು ಶತಮಾನಗಳ ಇತಿಹಾಸವಿರುವ ಅಪೂರ್ವ ಸ್ಥಳ

    ಈ ದೇವಾಲಯವು ವೇಮುಲವಾಡ - ಕರೀಂನಗರ ಹೆದ್ದಾರಿಯಲ್ಲಿರುವ ಸಣ್ಣ ಬೆಟ್ಟದ ಮೇಲೆ ನಿರ್ಮಾಣವಾಗಿದ್ದು, ಇದು ವಿಷ್ಣುವಿನ ಅವತಾರವಾದ ಭಗವಾನ್ ಲಕ್ಷ್ಮೀ ನರಸಿಂಹನಿಗೆ ಅರ್ಪಿತವಾದ ಒಂದು ಸಣ್ಣ ಸ್ಥಳವಾಗಿದೆ. ದೇವಾಲಯವನ್ನು ನಿರ್ಮಿಸಿದ ಬಂಡೆಯಿಂದ ವಿಗ್ರಹವನ್ನು ಕೆತ್ತಲಾಗಿದೆ. ಕೆಳಗಿನ ಪಾರ್ಕಿಂಗ್ ಪ್ರದೇಶದಿಂದ ಮೇಲಕ್ಕೆ ತಲುಪಲು ನೂರು ಮೆಟ್ಟಿಲುಗಳನ್ನು ಹತ್ತಬೇಕು.

    MORE
    GALLERIES

  • 38

    Naga Temple: ಹಾವಿನ ರೂಪದಲ್ಲಿದೆ ಈ ದೇವಸ್ಥಾನ, ಆರು ಶತಮಾನಗಳ ಇತಿಹಾಸವಿರುವ ಅಪೂರ್ವ ಸ್ಥಳ

    ಮಕ್ಕಳಿಲ್ಲದವರಿಗೆ ಮಕ್ಕಳನ್ನು ಇಲ್ಲಿನ ದೇವರು ಕರುಣಿಸುತ್ತಾನೆ ಎನ್ನುವ ನಂಬಿಕೆ ಹಲವಾರು ಭಕ್ತರಲ್ಲಿದೆ. ಚೋಳರ ಕಾಲದಲ್ಲಿ ಅಂದರೆ ಕ್ರಿ.ಶ.11ನೇ ಶತಮಾನದಲ್ಲಿ ಶ್ರೀರಾಜ ರಾಜ ನರೇಂದ್ರದು ಎಂಬ ರಾಜನು ಈ ದೇವಾಲಯಕ್ಕೆ ಮೆಟ್ಟಿಲುಗಳನ್ನು ಕಟ್ಟಿಸಿದನೆಂದು ಇತಿಹಾಸ ಹೇಳುತ್ತದೆ.

    MORE
    GALLERIES

  • 48

    Naga Temple: ಹಾವಿನ ರೂಪದಲ್ಲಿದೆ ಈ ದೇವಸ್ಥಾನ, ಆರು ಶತಮಾನಗಳ ಇತಿಹಾಸವಿರುವ ಅಪೂರ್ವ ಸ್ಥಳ

    ನರಸಿಂಹ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ನಾಗದೇವಾಲಯವಿದೆ. ದೇವಾಲಯವನ್ನು ಹಾವಿನ ಆಕಾರದಲ್ಲಿ ನಿರ್ಮಿಸಲಾಗಿದೆ. ಪ್ರವಾಸಿಗರು ಹಾವಿನ ಹೊಟ್ಟೆಯ ಮೂಲಕ ದೇವಾಲಯವನ್ನು ಪ್ರವೇಶಿಸಬಹುದು. ಇದರಲ್ಲಿ ಉದ್ದವಾದ, ಸುರಂಗ. ಪ್ರಹ್ಲಾದ ಮತ್ತು ಹಿರಣ್ಯಕಶಿಪುವಿನ ಕಥೆಯನ್ನು ಹೇಳುವ ಪ್ರತಿಮೆಗಳಿವೆ.

    MORE
    GALLERIES

  • 58

    Naga Temple: ಹಾವಿನ ರೂಪದಲ್ಲಿದೆ ಈ ದೇವಸ್ಥಾನ, ಆರು ಶತಮಾನಗಳ ಇತಿಹಾಸವಿರುವ ಅಪೂರ್ವ ಸ್ಥಳ

    ಸುರಂಗದ ಕೊನೆಯಲ್ಲಿ ಹಿರಣ್ಯಕಶಿಪು ಎಂಬ ರಾಕ್ಷಸನನ್ನು ಸಂಹರಿಸಿದ ನರಸಿಂಹನ ಪ್ರತಿಮೆಯಿದೆ. ಇಲ್ಲಿ ಕೆಲವು ಪುರಾತನ ನಾಗದೇವತಾ ವಿಗ್ರಹಗಳೂ ಇವೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಸ್ಥಾಪಿಸಲಾದ ವಿಗ್ರಹದಲ್ಲಿ ಸ್ತಂಭದಿಂದ ನರಸಿಂಹ ಸ್ವಾಮಿಯ ದರ್ಶನ ಮಾಡಬಹುದು.

    MORE
    GALLERIES

  • 68

    Naga Temple: ಹಾವಿನ ರೂಪದಲ್ಲಿದೆ ಈ ದೇವಸ್ಥಾನ, ಆರು ಶತಮಾನಗಳ ಇತಿಹಾಸವಿರುವ ಅಪೂರ್ವ ಸ್ಥಳ

    ಈ ಸುಂದರವಾದ ಕೇಸರಿ ಬಣ್ಣದ ಹಾವಿನ ಆಕಾರದ ದೇವಾಲಯವು ನಾಂಪಲ್ಲಿ ಬಸ್ ನಿಲ್ದಾಣದ ಬಳಿ ಇದೆ. ಹಾವಿನ ಆಕಾರದ ಈ ದೇವಾಲಯವು ತೆಲಂಗಾಣದ ಹಸಿರು ಬೆಟ್ಟಗಳ ನಡುವೆ ಇದ್ದು, ದೂರದಿಂದ ತಲೆ ಎತ್ತಿರುವ ದೊಡ್ಡ ಹಾವಿನಂತೆ ಕಾಣುತ್ತದೆ.

    MORE
    GALLERIES

  • 78

    Naga Temple: ಹಾವಿನ ರೂಪದಲ್ಲಿದೆ ಈ ದೇವಸ್ಥಾನ, ಆರು ಶತಮಾನಗಳ ಇತಿಹಾಸವಿರುವ ಅಪೂರ್ವ ಸ್ಥಳ

    ದೇವಸ್ಥಾನವು ನಾಂಪಲ್ಲಿ ಬಸ್ ನಿಲ್ದಾಣದಿಂದ 2 ಕಿಮೀ, ವೇಮುಲವಾಡ ಬಸ್ ನಿಲ್ದಾಣದಿಂದ 4.5 ಕಿಮೀ, ವೇಮುಲವಾಡ ದೇವಸ್ಥಾನದಿಂದ 3 ಕಿಮೀ ಮತ್ತು ಕರೀಂನಗರದಿಂದ 32 ಕಿಮೀ ದೂರದಲ್ಲಿದೆ.

    MORE
    GALLERIES

  • 88

    Naga Temple: ಹಾವಿನ ರೂಪದಲ್ಲಿದೆ ಈ ದೇವಸ್ಥಾನ, ಆರು ಶತಮಾನಗಳ ಇತಿಹಾಸವಿರುವ ಅಪೂರ್ವ ಸ್ಥಳ

    ಈ ದೇವಲಾಯದಲ್ಲಿ ಪ್ರಹ್ಲಾದ ಮತ್ತು ಹಿರಣ್ಯಕಶಿಪುವಿನ ಕಥೆಯನ್ನು ಹೇಳುವ ಪ್ರತಿಮೆಗಳನ್ನು ಹೊಂದಿದೆ. ಈ ಬಾರಿ ನೀವು ಯಾವುದಾದರೂ ವಿಶೇಷ ದೇವಾಲಯಕ್ಕೆ ಹೋಗಬೇಕು ಅಂದುಕೊಂಡಿದ್ದರೆ ಈ ದೇವಾಲಯಕ್ಕೆ ಭೇಟಿ ನೀಡಲು ಮರೆಯದಿರಿ. ಇದು ನಿಮಗೆ ವಿಭಿನ್ನ ಅನುಭವವನ್ನು ನೀಡುತ್ತದೆ

    MORE
    GALLERIES