Astrology 2023: ಈ ವರ್ಷ 5 ರಾಶಿಯವರ ಚಾಲಾಕಿತನದ ಮುಂದೆ ಬೇರೆ ಯಾರು ನಿಲ್ಲೋದಿಲ್ಲ, ಎಚ್ಚರ!
2023ನೇ ವರ್ಷದಲ್ಲಿ ಕೆಲ ರಾಶಿಗಳ ಜನ ಪಾದರಸದಂತೆ ಜೀವಿಸಲಿದ್ದಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, 5 ರಾಶಿಗಳಿಗೆ ಸೇರಿದವರು ತಮ್ಮ ಬುದ್ಧಿವಂತಿಕೆಯಿಂದ ಬೇರೆಯವರನ್ನು ಹಿಂದಿಕ್ಕಲಿದ್ದಾರೆ. ಆ ರಾಶಿಚಕ್ರದ ಚಿಹ್ನೆಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.
ಬುದ್ಧಿವಂತಿಕೆ ಯಾರಪ್ಪನ ಸೊತ್ತೂ ಅಲ್ಲ. ಸೌಂದರ್ಯ-ಶ್ರೀಮಂತಿಕೆಯನ್ನೂ ಮೀರುವಂತದ್ದು ಬುದ್ಧಿವಂತಿಕೆ. ಆ ನಿಟ್ಟಿನಲ್ಲಿ ಈ ವರ್ಷ 5 ರಾಶಿಯವರಿಗೆ ಲಾಭದಾಯಕವಾಗಿದೆ.
2/ 7
1) ಕುಂಭ ರಾಶಿ: ಈ ಪಟ್ಟಿಯಲ್ಲಿ ಕುಂಭ ರಾಶಿ ಅಗ್ರಸ್ಥಾನದಲ್ಲಿದೆ. ಇವರು ಬಹಳ ಬುದ್ಧಿವಂತರು. ಕ್ಷಣಮಾತ್ರದಲ್ಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಚತುರರು.
3/ 7
2) ಕನ್ಯಾ ರಾಶಿ: ಇವರು ಸಮಸ್ಯೆಗಳನ್ನು ಪರಿಹರಿಸಲು ಇಷ್ಟಪಡುತ್ತಾರೆ. ಕನ್ಯಾ ರಾಶಿಯವರು ಯಾರೂ ಬಗೆಹರಿಸಲಾಗದ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಕಡಿಮೆ ಮಾತನಾಡುವುದು ಮತ್ತು ಹೆಚ್ಚು ಮಾಡುವುದು ಈ ರಾಶಿಯ ವಿಶೇಷತೆ.
4/ 7
3) ಮಕರ ರಾಶಿ: ಇವರು ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮುಂದಾಳತ್ವ ವಹಿಸುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
5/ 7
4) ವೃಶ್ಚಿಕ ರಾಶಿ: ಭಾವನಾತ್ಮಕವಾಗಿ ತುಂಬಾ ಪ್ರಬಲವಾಗಿರುತ್ತಾರೆ. ಇತರರು ಯೋಚನೆ ಮಾಡದ ರೀತಿಯಲ್ಲಿ ಯೋಚಿಸುವ ಮೂಲಕ ಯಶಸ್ವಿಯಾಗುತ್ತಾರೆ. ಇವರ ದೂರದೃಷ್ಟಿ ಶ್ರೇಷ್ಠ ಎನ್ನುತ್ತಾರೆ ಜ್ಯೋತಿಷಿಗಳು.
6/ 7
5) ಮಿಥುನ ರಾಶಿ: ವೇಗವಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ರಾಶಿಯವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)