ಮೇಷ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2022 ರ ಕೊನೆಯ ದಿನಗಳಲ್ಲಿ ಈ ಗ್ರಹಗಳು ಒಂದೆಡೆ ಸೇರುವುದರಿಂದ ಮೇಷ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಮೇಷ ರಾಶಿಯವರು ಬುಧ, ಶುಕ್ರ ಮತ್ತು ಶನಿಯ ಸಂಯೋಜನೆಯಿಂದ ಲಾಭವನ್ನು ಪಡೆಯುತ್ತಾರೆ. ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯ ಜನರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಮತ್ತು ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ನಿಮ್ಮ ಹೊಸ ವ್ಯವಹಾರವನ್ನು ಪ್ರಾರಂಭಿಸಲು ನೀವು ಬಯಸಿದರೆ, ಇದು ಉತ್ತಮ ಸಮಯ. ಅಲ್ಲದೇ, ಈ ರಾಶಿಯವರಿಗೆ ಕುಟುಂಬದ ಬೆಂಬಲ ದೊರೆಯುತ್ತದೆ. ಧನಲಾಭದ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ಕನ್ಯಾ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ರಾಶಿಯಲ್ಲಿ ಬುಧ, ಶುಕ್ರ ಮತ್ತು ಶನಿ ಒಟ್ಟಿಗೆ ಇರುವುದರಿಂದ ಕನ್ಯಾ ರಾಶಿಯವರಿಗೆ ಸಹ ಬಹಳ ಒಳ್ಳೆಯದಂತೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಲಭ್ಯವಾಗುತ್ತದೆ. ಆದಾಯ ಸಹ ಈ ಸಮಯದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ನೀವು ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದರೆ ನಿಮಗೆ ಬಡ್ತಿ ಸಿಗುತ್ತದೆ. ಇದಲ್ಲದೆ, ಹಳೆಯ ಸ್ನೇಹಿತರನ್ನು ಭೇಟಿ ಮಾಡುವುದರಿಂದ ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ.
ಕರ್ಕಾಟಕ : ಮಕರ ರಾಶಿಯಲ್ಲಿ ಶನಿ, ಬುಧ ಮತ್ತು ಶುಕ್ರನ ಸಂಯೋಜನೆಯು ಕರ್ಕಾಟಕ ರಾಶಿಯವರಿಗೆ ಅಗಾಧವಾದ ಪ್ರಯೋಜನಗಳನ್ನು ನೀಡುತ್ತದೆ. ಕಟಕ ರಾಶಿಯವರು ಈ ಅವಧಿಯಲ್ಲಿ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ಆದಾಯದ ಮೂಲವೂ ಹೆಚ್ಚಲಿದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಇದ್ದ ವಿವಾದಗಳು ಬಗೆಹರಿಯಲಿವೆ. ನೀವು ಅವಿವಾಹಿತರಾಗಿದ್ದರೆ, ಕಂಕಣ ಭಾಗ್ಯ ಕೂಡಿಬರಲಿದೆ.
ಮೀನ ರಾಶಿ : ಮಕರ ರಾಶಿಯಲ್ಲಿ ಬುಧ, ಶುಕ್ರ ಮತ್ತು ಶನಿ ಒಟ್ಟಿಗೆ ಸೇರುವುದರಿಂದ, ಮೀನ ರಾಶಿಯವರು ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುತ್ತಾರೆ. ಮೀನ ರಾಶಿಯವರಿಗೆ ಆದಾಯವೂ ಹೆಚ್ಚಾಗುತ್ತದೆ. ನೀವು ವ್ಯಾಪಾರ ವರ್ಗಕ್ಕೆ ಸೇರಿದವರಾಗಿದ್ದರೆ, ನಿಮ್ಮ ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಇದಲ್ಲದೇ, ಮೀನ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ವಿದೇಶಕ್ಕೆ ಹೋಗುವ ಸಂಭವವಿದೆ.