ಇಂದಿನ ದಿನಗಳಲ್ಲಿ ಗೂಗಲ್ ಮ್ಯಾಪ್ ಅನ್ನು ಬಹಳಷ್ಟು ಮೊಬೈಲ್ ಬಳಕೆದಾರರು ಬಳಕೆ ಮಾಡ್ತಾ ಇದ್ದಾರೆ. ಯಾವುದೇ ಗೊತ್ತಿಲ್ಲದ, ದೂರದ ಸ್ಥಳಗಳಿಗೆ ಹೋಗಬೇಕಾದರು ಈ ಅಪ್ಲಿಕೇಶನ್ ಸಹಕಾರಿಯಾಗುತ್ತದೆ. ಇನ್ನು ಈ ಆ್ಯಪ್ ಅನ್ನು ಆನ್ಲೈನ್ ಮೂಲಕವೂ ಬಳಕೆ ಮಾಡ್ಬಹುದು, ಆಫ್ಲೈನ್ನಲ್ಲೂ ಬಳಕೆ ಮಾಡ್ಬಹುದು.
ಇನ್ನು ಈ ಗೂಗಲ್ ಮ್ಯಾಪ್ ಅಪ್ಲಿಕೇಶನ್ ಅನ್ನು 220ಕ್ಕೂ ಅಧಿಕ ದೇಶಗಳಲ್ಲಿ ಬಳಸುತ್ತಿದ್ದಾರೆ. ಜೊತೆಗೆ ಭಾರತದಲ್ಲೂ ಬಳಸುತ್ತಿದ್ದಾರೆ. ಆದರೆ ಭಾರತಕ್ಕಿಂತ ಹೆಚ್ಚಾಗಿ ಬೇರೆ ದೇಶಗಳಲ್ಲಿ ವಿಭಿನ್ನ ರಿತಿಯ ಫೀಚರ್ಸ್ಗಳನ್ನು ಇದು ಒಳಗೊಂಡಿದೆ. ಹಾಗಿದ್ರೆ ಭಾರತದಲ್ಲಿಲ್ಲದ, ಬೇರೆ ದೇಶಗಳಲ್ಲಿರುವ ಆ ಫೀಚರ್ಸ್ಗಳು ಏನೆಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಲೈವ್ ವೀವ್ ಸರ್ಚ್ ಆಯ್ಕೆ: ಗೂಗಲ್ ತನ್ನ ಬಳಕೆದಾರರಿಗಾಗಿ ಕಳೆದ ಸಪ್ಟೆಂಬರ್ನಲ್ಲಿ ಪರಿಚಯಿಸಿದೆ. ಈ ಮೂಲಕ ನಿಮಗೆ ಬೇಕಾದ ಸ್ಥಳಕ್ಕೆ ಹೋಗಬೇಕಾದರೆ ಈ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಹೋಗಬಹುದು. ಆದರೆ ಮುಖ್ಯವಾಗಿ ಇದರಲ್ಲಿ ಕ್ಯಾಮೆರಾ ಓಪನ್ ಆಗಿರಬೇಕು. ಇನ್ನು ಈ ಫೀಚರ್ ಕೇವಲ ಲಂಡನ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಪ್ಯಾರಿಸ್ ಮತ್ತು ಟೋಕಿಯೋ ನಗರಗಳಲ್ಲಿ ಮಾತ್ರ ಲಭ್ಯವಿದೆ. ಮುಂಬರುವ ತಿಂಗಳುಗಳಲ್ಲಿ ಬಾರ್ಸಿಲೋನಾ, ಡಬ್ಲಿನ್ ಮತ್ತು ಮ್ಯಾಡ್ರಿಡ್ನಲ್ಲಿ ಬರಲಿದೆಯೆಂದು ಹೇಳಲಾಗಿದೆ.
ಇಂಡೋರ್ ಲೈವ್ ವೀವ್: ಈ ಒಳಾಂಗಣ ಲೈವ್ ವ್ಯೂ ಫೀಚರ್ಸ್ ಮೂಲಕ ಮಾಲ್ಗಳು, ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳ ಒಳಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ತೋರಿಸುತ್ತದೆ. ಈ ಫೀಚರ್ಸ್ ಮುಂಬರುವ ತಿಂಗಳುಗಳಲ್ಲಿ ಬಾರ್ಸಿಲೋನಾ, ಬರ್ಲಿನ್, ಫ್ರಾಂಕ್ಫರ್ಟ್, ಲಂಡನ್, ಮ್ಯಾಡ್ರಿಡ್, ಮೆಲ್ಬೋರ್ನ್, ಪ್ಯಾರಿಸ್, ಪ್ರೇಗ್, ಸಿಂಗಾಪುರ, ಸಿಡ್ನಿಯಲ್ಲಿ 1,000 ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಮಾಲ್ಗಳಿಗೆ ಪರಿಚಯಿಸಲಾಗುತ್ತದೆ ಎಂದು ಗೂಗಲ್ ಮಾಹಿತಿ ನೀಡಿದೆ.
ಇಂಪ್ರೆಸ್ಸಿವ್ ವೀವ್: ಈ ಫೀಚರ್ಸ್ ಎಲ್ಲಾ ಬಳಕೆದಾರರಿಗೂ ಅಗತ್ಯವಾಗಿ ಬೇಕಾಗಿದೆ. ಯಾಕೆಂದರೆ ಈ ಫೀಚರ್ಸ್ ಮೂಲಕ ಬಳಕೆದಾರರು ಹವಾಮಾನ, ಟ್ರಾಫಿಕ್ನಂತಹ ಮಾಹಿತಿಯನ್ನು ಮೊದಲೇ ತಿಳಿದುಕೊಳ್ಳಬಹುದು. ಈ ಫೀಚರ್ಸ್ ಮೂಲಕ ನೀವು ಸಂಚರಿಸಲು ಉದ್ದೇಶಿಸಿರುವ ಪ್ರದೇಶದಲ್ಲಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಆದರೆ, ಈ ಫೀಚರ್ಸ್ ಭಾರತದ ಬಳಕೆದಾರರಿಗೆ ಯಾವಾಗ ಲಭ್ಯವಾಗುತ್ತದೋ ಎಂದು ಕಾದು ನೋಡಬೇಕಿದೆ.
ಸ್ಥಳೀಯ ಜಾಗದ ರಿವೀವ್ ಪಡೆಯಬಹುದು: ಈ ಫೀಚರ್ ಮೂಲಕ ಬಳಕೆದಾರರು ಹೋಗಬೇಕೆಂದು ಯೋಜನೆ ಮಾಡಿದ ಸ್ಥಳದ ಕಂಪ್ಲೀಟ್ ಮಾಹಿತಿಯನ್ನು ಪಡೆಯಬಹುದು. ಬಳಕೆದಾರರು ಯಾವುದಾದರು ಜನಪ್ರಿಯ ಸ್ಥಳಕ್ಕೆ ಚಲಿಸುತ್ತಿದ್ದರೆ, ಆ ಸ್ಥಳದ ಬಗ್ಗೆ ಜನರ ಅಭಿಪ್ರಾಯ, ಫೋಟೋ, ವಿಡಿಯೋ ಇವೆಲ್ಲವನ್ನೂ ನೋಡಬಹುದಾಗಿದೆ.
ಸೈಕ್ಲಿಸ್ಟ್ಗಳಿಗೆ ಲೈಟ್ ನ್ಯಾವಿಗೇಷನ್: ಸೈಕ್ಲಿಸ್ಟ್ಗಳಿಗೆ ಲೈಟ್ ನ್ಯಾವಿಗೇಷನ್ ಫೀಚರ್ಸ್ ಬಹಳ ಉಪಯೋಗ. ಆದರೆ, ಇದು ಭಾರತೀಯ ಸೈಕ್ಲಿಸ್ಟ್ಗಳಿಗೆ ಲಭ್ಯವಿಲ್ಲ. ಇನ್ನು ಈ ಫೀಚರ್ಸ್ ಮೂಲಕ ಬಳಕೆದಾರರು ಸೈಕ್ಲಿಸ್ಟ್ಗಳು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಪ್ರವೇಶಿಸದೆಯೇ ಸುಲಭವಾಗಿ ತಿರುಗಲು ಗೂಗಲ್ ಲೈಟ್ ನ್ಯಾವಿಗೇಷನ್ ಎಂಬ ಫೀಚರ್ಸ್ ಅನ್ನು ಪ್ರಾರಂಭಿಸಿತು.
ಇನ್ನು ಸೈಕ್ಲಿಸ್ಟ್ಗಳು ತಮ್ಮ ಡಿಸ್ಪ್ಲೇಯನ್ನು ಆನ್ನಲ್ಲಿ ಇಡದೆ ಅವರು ಹೋಗುವ ಮಾರ್ಗದ ಕುರಿತು ಪ್ರಯಾಣದ ಪ್ರಗತಿ, ನೈಜ ಸಮಯದಲ್ಲಿ ನಿಮ್ಮ ಇಟಿಎ ಅಪ್ಡೇಟ್ ಅನ್ನು ನೀಡುತ್ತಿರುತ್ತದೆ.