ಬಾಜಿರಾವ್, ಮಸ್ತಾನಿ : ಪೇಶ್ವೆ ಬಾಜಿರಾವ್ ಮತ್ತು ಅವರ ಎರಡನೇ ಪತ್ನಿ ಮಸ್ತಾನಿಯ ಪ್ರೇಮಕಥೆ ಮಹಾರಾಷ್ಟ್ರದಲ್ಲಿ ಖ್ಯಾತಿ ಪಡೆದಿದೆ. ಆರಂಭದಲ್ಲಿ ರಾಜಕೀಯ ಕಾರಣಗಳಿಗಾಗಿ ಇಬ್ಬರೂ ಮದುವೆಯಾಗುತ್ತಾರೆ. ಅವರಿಬ್ಬರು ಸಾಯುವ ಮುನ್ನ ಕೇವಲ ಆರು ವರ್ಷಗಳ ಕಾಲ ಒಟ್ಟಿಗೆ ಇದ್ದರು. ಇವರ ಪ್ರೇಮಕಥೆಯ ಹಿಂದೆ ಎಷ್ಟು ಇತಿಹಾಸವಿದೆ ಎಂಬುದು ಇಂದಿಗೂ ತಿಳಿದಿಲ್ಲ. ಆದರೆ ಬಾಜಿರಾವ್ ಮಸ್ತಾನಿಯನ್ನು ತೊರೆಯಲು ಸಾಕಷ್ಟು ಸಾಮಾಜಿಕ ಮತ್ತು ರಾಜಕೀಯ ಒತ್ತಡವನ್ನು ಎದುರಿಸಿದರು. ಆದರೆ ಬಾಜಿರಾವ್ ಅವುಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ.
ಷಹಜಹಾನ್, ಮುಮ್ತಾಜ್ ಮಹಲ್: ಷಹಜಹಾನ್ ಭಾರತದ ಐದನೇ ಮೊಘಲ್ ಚಕ್ರವರ್ತಿ.ಇವರ ಪತ್ನಿ ಮುಮ್ತಾಜ್ ಮಹಲ್. ಈ ದಂಪತಿಗೆ 14 ಜನ ಮಕ್ಕಳಿದ್ದಾರೆ. ಮುಮ್ತಾಜ್ ಮಹಲ್ ಷಹಜಹಾನ್ನ ಎಲ್ಲಾ ಸೇನಾ ಕಾರ್ಯಾಚರಣೆಗಳಲ್ಲಿ ಜೊತೆಗಿದ್ದಳು. ಮುಮ್ತಾಜ್ ಮಹಲ್ ತಮ್ಮ 14 ನೇ ಮಗುವಿಗೆ ಜನ್ಮ ನೀಡುವ ಮೂಲಕ ನಿಧನರಾದಾಗ ಷಹಜಹಾನ್ ಆಘಾತಕ್ಕೊಳಗಾದರು. ಅವರ ಮೇಲಿನ ಪ್ರೀತಿಯ ಸಂಕೇತವಾಗಿ ಷಹಜಹಾನ್ ತಾಜ್ ಮಹಲ್ ಅನ್ನು ನಿರ್ಮಿಸಿದನು. ತಾಜ್ ಮಹಲ್ ಪ್ರಪಂಚದಾದ್ಯಂತ ಪ್ರೀತಿಯ ಸಂಕೇತವೆಂದು ಗುರುತಿಸಲ್ಪಟ್ಟಿದೆ. (Image: Wikipedia)
ಜೋಸೆಫೀನ್, ನೆಪೋಲಿಯನ್ ಬೋನಪಾರ್ಟೆ : ನೆಪೋಲಿಯನ್ ಬೋನಪಾರ್ಟೆ ಜೋಸೆಫೀನ್ ಡಿ ಬ್ಯೂಹರ್ನೈಸ್ ಅವರನ್ನು ಭೇಟಿಯಾದಾಗ, ಅವರು ಆತನಿಗಿಂತ ಆರು ವರ್ಷ ದೊಡ್ಡವರು ಮತ್ತು ಇಬ್ಬರು ಮಕ್ಕಳಿರುವ ವಿಧವೆ. ಬೋನಪಾರ್ಟೆ ರಾಜಕೀಯ ಲಾಭಕ್ಕಾಗಿ ಆಕೆಯನ್ನು ಮದುವೆಯಾದರು. ಅವರ ಮದುವೆಯಾದ ಕೆಲವೇ ದಿನಗಳಲ್ಲಿ ಅವರು ಮಿಲಿಟರಿ ಕಾರ್ಯಾಚರಣೆಯನ್ನು ತೊರೆದರು. ಅವರ ಮದುವೆ ಮೋಸದಿಂದ ನಡೆದಿದ್ದರೂ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ಜೋಸೆಫೀನ್ ಗರ್ಭಿಣಿಯಾಗಲು ಸಾಧ್ಯವಾಗದ ಕಾರಣ, ಇಬ್ಬರೂ ಬಹಳ ಸೌಹಾರ್ದಯುತವಾಗಿ ವಿಚ್ಛೇದನ ಪಡೆದರು. ವಿಚಾರಣೆಯ ಸಮಯದಲ್ಲಿ ಅವರು ಪರಸ್ಪರ ಪ್ರೇಮ ಪತ್ರವನ್ನು ಓದಿದರು. ವಿಚ್ಛೇದನದ ಪಡೆದರು ಇಬ್ಬರೂ ಎಂದಿನಂತೆ ಹತ್ತಿರವಾಗಿಯೇ ಇದ್ದರು. (Image: Shutterstock)
ಆಸ್ಟ್ರಿಯಾದ ಸಾಮ್ರಾಜ್ಞಿ, ಫ್ರಾಂಜ್ ಜೋಸೆಫ್ : ಸಿಸಿ ಅಲಿಯಾಸ್ ಆಸ್ಟ್ರಿಯಾದ ಸಾಮ್ರಾಜ್ಞಿ ಎಲಿಜಬೆತ್, ಚಕ್ರವರ್ತಿ ಫ್ರಾಂಜ್ ಜೋಸೆಫ್ ಲವ್ ಜಗತ್ ಪ್ರಸಿದ್ಧ. ಆಸ್ಟ್ರಿಯಾದ ಸಾಮ್ರಾಜ್ಞಿ ಸ್ವತಂತ್ರ ಚಿಂತನೆ, ಸ್ವತಂತ್ರ ಮನೋಭಾವದ ಮಹಿಳೆ. ಫ್ರಾಂಜ್ ಜೋಸೆಫ್ ಆಸ್ಟ್ರಿಯಾದ ಚಕ್ರವರ್ತಿ, ಹಂಗೇರಿಯ ರಾಜ. ರಾಜಕೀಯ ಸಮೀಕರಣದ ಭಾಗವಾಗಿ ಇಬ್ಬರೂ ಚಿಕ್ಕ ವಯಸ್ಸಿನಲ್ಲೇ ವಿವಾಹವಾದರು. ಆದರೆ, ಅವರಿಬ್ಬ ವಿಭಿನ್ನ ವ್ಯಕ್ತಿತ್ವಗಳು ಕೆಲವು ದಶಕಗಳ ನಂತರ ಅವರ ಪ್ರತ್ಯೇಕತೆಗೆ ಕಾರಣವಾಯಿತು. ಆದರೆ ಅಲ್ಲಿಯವರೆಗೆ ಇಬ್ಬರೂ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದರು. ಆಸ್ಟ್ರಿಯಾದ ಸಾಮ್ರಾಜ್ಞಿ ಹತ್ಯೆಯಾದಾಗ ಫ್ರಾಂಜ್ ಜೋಸೆಫ್, "ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಎಂದು ನಿಮಗೆ ಗೊತ್ತಿಲ್ಲ ಎಂದು ಹೇಳಿದ್ದರು.(Image: Shutterstock)
ಗ್ರೇಸ್ ಕೆಲ್ಲಿ, ಪ್ರಿನ್ಸ್ ರೈನರ್ : ಗ್ರೇಸ್ ಹಾಲಿವುಡ್ ನಟಿ. ಪ್ರಿನ್ಸ್ ರೈನರ್ ಮೊನಾಕೊದ ಆಡಳಿತಗಾರ. ಗ್ರೇಸ್ ಸಿನಿಮಾದ ಶೂಟಿಂಗ್ ನಲ್ಲಿದ್ದಾಗ ಇವರಿಬ್ಬರು ಭೇಟಿಯಾಗಿದ್ದರು. ತಕ್ಷಣ ಪ್ರೀತಿಯಲ್ಲಿ ಬಿದ್ದರು. ಗ್ರೇಸ್ ಚಲನಚಿತ್ರ ನಟಿಯಿಂದ ರಾಜಕುಮಾರಿಯಾದರು. ಇಬ್ಬರೂ ತಮ್ಮ ಜೀವನದುದ್ದಕ್ಕೂ ಸಮರ್ಪಿತರಾಗಿದ್ದರು. ಪ್ರಿನ್ಸೆಸ್ ಗ್ರೇಸ್ 1982 ರಲ್ಲಿ ಕಾರು ಅಪಘಾತದಲ್ಲಿ ನಿಧನರಾದರು. ಪ್ರಿನ್ಸ್ ರೈನರ್ ಎಂದಿಗೂ ಮರುಮದುವೆಯಾಗಲಿಲ್ಲ. ಅವರು 2005 ರಲ್ಲಿ ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾದರು. ಹೆಂಡತಿ ಗ್ರೇಸ್ ಕೆಲ್ಲಿ ಸಮಾಧಿಯ ಪಕ್ಕದಲ್ಲಿ ಆತನನ್ನು ಸಮಾಧಿ ಮಾಡಲಾಯಿತು. (Image: Shutterstock)
ಡಾಂಟೆ, ಬೀಟ್ರಿಸ್: ಡಾಂಟೆ ಅಲಿಘೇರಿ ತನ್ನ ಜೀವನದಲ್ಲಿ ಕೇವಲ ಎರಡು ಬಾರಿ ಬೀಟ್ರಿಸ್ ಪೋರ್ಟಿನಾರಿಯನ್ನು ಭೇಟಿಯಾದರು. ಮೊದಲು ಒಂಬತ್ತು ವರ್ಷದವರಾಗಿದ್ದಾಗ ಫಸ್ಟ್ ಟೈಮ್ ಬೇಟಿಯಾದರು. ನಂತರ ತಾವು ಹದಿಹರೆಯದವರಾಗಿದ್ದಾಗ ಎರಡನೇ ಬಾರಿಗೆ ಭೇಟಿಯಾದರು. ಅಂದಿನಿಂದಲೂ ಆತ ಆಕೆಯನ್ನು ಆರಾಧಿಸಿದನು. ಪಾಶ್ಚಾತ್ಯ ಸಾಹಿತ್ಯದಲ್ಲಿ ಅತ್ಯಂತ ಜನಪ್ರಿಯವಾಗಿರುವ 'ದಿ ಡಿವೈನ್ ಕಾಮಿಡಿ' ಬರೆಯಲು ಬೀಟ್ರಿಸ್ ಅವರನ್ನು ಪ್ರೇರೇಪಿಸಿದರು. (Image: Shutterstock)
ರಾಣಿ ವಿಕ್ಟೋರಿಯಾ, ಪ್ರಿನ್ಸ್ ಆಲ್ಬರ್ಟ್ : ರಾಣಿ ವಿಕ್ಟೋರಿಯಾ, ಪ್ರಿನ್ಸ್ ಆಲ್ಬರ್ಟ್ ರಾಜಕೀಯ ಕಾರಣದಿಂದ ಮದುವೆಯಾಗುವ ಮೂಲಕ ಇವರಿಬ್ಬರ ಪ್ರೇಮಕಥೆ ಶುರುವಾಯಿತು. ಆದರೆ ನಂತರದ ದಶಕಗಳಲ್ಲಿ ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಇಷ್ಟಪಟ್ಟರು. ಅವರು ಪರಸ್ಪರ ಬರೆದ ಪತ್ರಗಳಿಂದ ಇದು ಗೊತ್ತಾಗುತ್ತದೆ. ಪ್ರಿನ್ಸ್ ಆಲ್ಬರ್ಟ್ನ ಮರಣದ ನಂತರ, ರಾಣಿ ವಿಕ್ಟೋರಿಯಾ ತಮ್ಮ ಜೀವನವನ್ನು ತಮ್ಮ ಪತಿಯ ನೆನಪಿಸನಲ್ಲಿಯೇ ಕಳೆದರು. (Image: Shutterstock)
ಫ್ರಿಡಾ ಕಹ್ಲೋ, ಡಿಯಾಗೋ ರಿವೆರಾ: ಫ್ರಿಡಾ ಕಹ್ಲೋ, ಡಿಯಾಗೋ ರಿವೆರಾ ಅವರ ಸಂಬಂಧವು 20 ನೇ ಶತಮಾನದಷ್ಟು ಹಿಂದಿನದ್ದಾಗಿದೆ. ಅತ್ಯಂತ ಭಾವನಾತ್ಮಕ ಪ್ರೇಮಕಥೆಗಳಲ್ಲಿ ಇದು ಕೂಡ ಒಂದಾಗಿದೆ. ಅವರ ಸಂಬಂಧದಲ್ಲಿ ಏರುಪೇರುಗಳಿದ್ದರೂ.. ಅವರಿಬ್ಬರ ಪ್ರೀತಿ ಹಾಗೆಯೇ ಇತ್ತು. (Image: Shutterstock)
ಕ್ಲಿಯೋಪಾತ್ರ ಮತ್ತು ಮಾರ್ಕ್ ಆಂಟೋನಿ: ಕ್ಲಿಯೋಪಾತ್ರ ಮತ್ತು ಮಾರ್ಕ್ ಆಂಟೋನಿಯ ಪ್ರೀತಿಯು ಶೇಕ್ಸ್ಪಿಯರ್ನ ನಾಟಕದ ಭಾಗವಾಗಿದೆ. ಇದು ಅತ್ಯಂತ ಜನಪ್ರಿಯ ಪ್ರೇಮ ಕಥೆಗಳಲ್ಲಿ ಒಂದಾಗಿದೆ. ಇತಿಹಾಸದ ದಿಕ್ಕನ್ನು ಅಕ್ಷರಶಃ ಬದಲಿಸಿದ ಪ್ರೇಮಕಥೆ. ಇಬ್ಬರ ನಡುವಿನ ಆಳವಾದ ಪ್ರೀತಿ ಹಲವು ತಿರುವುಗಳನ್ನು ಪಡೆದು ಕೊನೆಗೆ ಆತ್ಮಹತ್ಯೆಯಲ್ಲಿ ಕೊನೆಗೊಳ್ಳುತ್ತದೆ. (Image: Shutterstock)