ಶಮ್ನಾ ಖಾಸಿಂ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಕಿರುತೆರೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಲೇ ಸಿನಿಮಾಗಳಲ್ಲಿ ನಟಿಸುತ್ತಾರೆ ಈ ಚೆಲುವೆ. ಇತ್ತೀಚೆಗಷ್ಟೇ ಪೂರ್ಣಾ ದುಬೈ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇತ್ತೀಚಿನ ಸುದ್ದಿ ಏನೆಂದರೆ ನಟಿ ಪೂರ್ಣಾ ತಮ್ಮ ಮಗುವಿನ ಹೆಸರನ್ನು ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡ ಅವರು ತಮ್ಮ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಪೂರ್ಣಾ ತನ್ನ ಮಗನಿಗೆ ಹಮ್ದಾನ್ ಆಸಿಫಾಲಿ ಎಂದು ಹೆಸರಿಟ್ಟರು. ಇದಕ್ಕೆ ಸಂಬಂಧಿಸಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಂದರ ನಟಿ ಪೂರ್ಣಾ ಅವರ ಹೆರಿಗೆಯಾಗಿದ್ದು ಮುದ್ದಾದ ಗಂಡು ಮಗುವನ್ನು ವೆಲ್ಕಮ್ ಮಾಡಿದ್ದಾರೆ ನಟಿ. ಕಳೆದ ವರ್ಷ ಜೂನ್ನಲ್ಲಿ ದುಬೈ ಮೂಲದ ಉದ್ಯಮಿ ಶಾನಿದ್ ಆಸಿಫ್ ಅಲಿ ಅವರನ್ನು ಪೂರ್ಣ ವಿವಾಹವಾಗಿದ್ದರು. ಪೂರ್ಣಾ ಅವರು 2023 ರ ಮೊದಲ ವಾರದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು.
ನರೇಶ್ ಅಭಿನಯದ 'ಸೀಮಾ ತಪಕೈ' ಚಿತ್ರದಲ್ಲಿ ನಟಿಸಿದ ನಂತರ ಮಲಯಾಳಿ ಸುಂದರಿ ಪೂರ್ಣ ಜನಪ್ರಿಯರಾದರು. ಆ ನಂತರ ರವಿಬಾಬು ನಿರ್ದೇಶನದ ‘ಆವುನು’ ಸಿನಿಮಾದಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಇತ್ತೀಚೆಗಷ್ಟೇ ನಾನಿ ದಸರಾ ಸಿನಿಮಾದಲ್ಲೂ ನಟಿಸಿದ್ದರು.
ಹೀರೋಯಿನ್ ಆಗಿ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಪೂರ್ಣಾ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನೆಲೆಯೂರಿದರು. ಅದರ ಭಾಗವಾಗಿ ‘ಸಿಲ್ಲಿ ಫೆಲೋಸ್’, ‘ಅಖಂಡ’, ‘ದೃಶಂ 2’ ಚಿತ್ರಗಳಲ್ಲಿ ನಟಿಸಿದ್ದರು. ಪೂರ್ಣಾ ಒಂದೆಡೆ ಸಿನಿಮಾಗಳಲ್ಲಿ ನಟಿಸುತ್ತಿದ್ದರೆ, ಸ್ಮಾಲ್ ಸ್ಕ್ರೀನ್ನಲ್ಲಿ ತೀರ್ಪುಗಾರರಾಗಿಯೂ ಕೆಲಸ ಮಾಡುತ್ತಾರೆ.
ಮದುವೆಯ ಸಂದರ್ಭದಲ್ಲಿ ಪೂರ್ಣಾ ಅವರ ಪತಿ ನೀಡಿದ ಉಡುಗೊರೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ದುಬೈನ ಜೆಬಿಎಸ್ ಗ್ರೂಪ್ ಆಫ್ ಕಂಪನಿಗಳ ಸ್ಥಾಪಕ ಮತ್ತು ಸಿಇಒ ಶಾನಿದ್ ಆಸಿಫ್ ಅಲಿ ಅವರನ್ನು ಪೂರ್ಣಾ ಪ್ರೀತಿಸುತ್ತಿದ್ದರು.
ನಟಿ ಪೂರ್ಣಾಗೆ ಪತಿ ಶಾನಿದ್ ಹಲವು ಕೋಟಿ ಬೆಲೆಯ ಗಿಫ್ಟ್ ನೀಡಿದ್ದಾರೆ. ಮದುವೆಗೂ ಮುನ್ನ ಆಕೆಗೆ 2700 ಗ್ರಾಂ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಮೌಲ್ಯ ಸುಮಾರು ರೂ. 1.30 ಕೋಟಿಯವರೆಗೂ ಇರಲಿದೆಯಂತೆ.
ಪತ್ನಿಗೆ ದುಬೈನಲ್ಲಿರುವ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ಇದರ ಮೌಲ್ಯ ಸುಮಾರು ರೂ. 25 ಕೋಟಿಯವರೆಗೂ ಇರಲಿದೆ. ಇದಲ್ಲದೇ ಉತ್ತಮ ಕಾರು ಹಾಗೂ ಕೆಲವು ಕಂಪನಿಗಳ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇವುಗಳ ಮೌಲ್ಯ 30 ಕೋಟಿಯವರೆಗೂ ಇರಲಿದೆ ಎನ್ನಲಾಗಿದೆ.